Vivo T5 Pro ಮೊಬೈಲ್‌ 9,020mAh ಬ್ಯಾಟರಿಯೊಂದಿಗೆ ಎಂಟ್ರಿ ಕೊಡುವುದು ಕನ್ಫರ್ಮ್‌!

HIGHLIGHTS

ಇದೇ ಏಪ್ರಿಲ್‌ 15 ರಂದು ಭಾರತಕ್ಕೆ ಎಂಟ್ರಿ ಕೊಡಲಿದೆ ವಿವೋ T5 ಪ್ರೊ ಫೋನ್‌

ವಿವೋ T5 ಪ್ರೊ ಮೊಬೈಲ್‌ 50MP ಸೆಲ್ಫಿ ಕ್ಯಾಮೆರಾ ರಚನೆ ಒಳಗೊಂಡಿರಲಿದೆ

ವಿವೋದ ಈ ನೂತನ ಫೋನ್‌ ವೈಟ್‌ ಕಲರ್‌ ಆಯ್ಕೆಯೊಂದಿಗೆ ಲಗ್ಗೆ ಇಡುವ ಸಾಧ್ಯತೆ ಇದೆ

Vivo T5 Pro ಮೊಬೈಲ್‌ 9,020mAh ಬ್ಯಾಟರಿಯೊಂದಿಗೆ ಎಂಟ್ರಿ ಕೊಡುವುದು ಕನ್ಫರ್ಮ್‌!

ಇದೇ ಏಪ್ರಿಲ್‌ 15 ರಂದು ಭಾರತದಲ್ಲಿ ಅಧಿಕೃತವಾಗಿ Vivo T5 Pro ಸ್ಮಾರ್ಟ್‌ಫೋನ್ ಬಿಡುಗಡೆ ಆಗುವ ಸುದ್ದಿ ಈಗಾಗಲೇ ಗೊತ್ತೆ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿರುವ ಈ ಮೊಬೈಲ್‌ 9,020mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿರುವುದು ಕನ್ಫರ್ಮ್‌ ಆಗಿದೆ. ಇದು ದೀರ್ಘಾವಧಿಯ ಬ್ಯಾಟರಿ ಬ್ಯಾಕ್‌ಅಪ್‌ ಬಯಸುವ ಗ್ರಾಹಕರ ಗಮನ ಸೆಳೆಯುವಂತಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 1.5K ರೆಸಲ್ಯೂಶನ್‌ ಬೆಂಬಲದೊಂದಿಗೆ AMOLED ಡಿಸ್‌ಪ್ಲೇ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಹಾಗೆಯೇ Snapdragon 7s Gen 4 ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗಾದರೆ ಮುಂಬರುವ ವಿವೋ T5 ಪ್ರೊ ಮೊಬೈಲ್‌ನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 20MP ಸೆಲ್ಫಿ ಕ್ಯಾಮೆರಾ ಇರುವ Poco M8 5G ಮೊಬೈಲ್‌ ದರದಲ್ಲಿ ಈಗ ಭರ್ಜರಿ ಇಳಿಕೆ!

Vivo T5 Pro ಲಾಂಚ್‌ಗೆ ದಿನಗಣನೆ ಶುರು

ವಿವೋ ಸಂಸ್ಥೆಯ ಹೊಸದಾಗಿ ವಿವೋ T5 ಪ್ರೊ ಮೊಬೈಲ್‌ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ನೂತನ ಸ್ಮಾರ್ಟ್‌ಫೋನ್‌ ಅನ್ನು ಇದೇ ಏಪ್ರಿಲ್‌ 15 ರಂದು ಮಧ್ಯಾಹ್ನ 12:00 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಾಗುವುದು ಎಂದು ಸಂಸ್ಥೆಯು ದೃಢಪಡಿಸಿದೆ. ಅಂದಹಾಗೆ ಮುಂಬರುವ ಈ ಸ್ಮಾರ್ಟ್‌ಫೋನ್‌ ವೈಟ್‌ ಕಲರ್‌ ಆಯ್ಕೆ ಒಳಗೊಂಡಿರುವ ಬಗ್ಗೆ ಟೀಸರ್‌ ಸೂಚಿಸುತ್ತದೆ. ಈ ಮೊಬೈಲ್‌ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಹೊರಹಾಕಿಲ್ಲ.

Vivo T5 Pro

ನಿರೀಕ್ಷೆ ಹೆಚ್ಚಿಸಿದ ವಿವೋ T5 ಪ್ರೊ ಫೀಚರ್ಸ್‌

ಎಂಟ್ರಿ ಕೊಡಲಿರುವ ವಿವೋ T5 ಪ್ರೊ ಮೊಬೈಲ್‌ 9,020mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವುದು ಖಚಿತ ಆಗಿದೆ. ಹಾಗೆಯೇ ಈ ಫೋನ್‌ ತೆಳ್ಳಗಿನ ರಚನೆ ಪಡೆದಿರುತ್ತದೆ ಎಂದು ಸಂಸ್ಥೆಯು ಸೂಚಿಸಿದೆ. ಹಾಗೆಯೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದ್ದು ಇದು ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್‌ ಅನ್ನು ಒಳಗೊಂಡಿರಲಿದೆ. ಇದರ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ ಬಟನ್‌ಗಳನ್ನು ಫೋನ್‌ನ ಎಡಭಾಗದಲ್ಲಿ ನೀಡಲಾಗಿದೆ. ಇದರೊಂದಿಗೆ ಈ ಫೋನ್ 120 fps ವರೆಗಿನ ಗೇಮಿಂಗ್ ಸಪೋರ್ಟ್‌ ಒಳಗೊಂಡಿರಲಿದೆ.

ಇನ್ನು ವಿವೋ T5 ಪ್ರೊ ಫೋನ್‌ 6.8 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದಕ್ಕೆ ಪೂರಕವಾಗಿ 144Hz ವರೆಗೆ ರಿಫ್ರೆಶ್ ರೇಟ್‌ ಸಪೋರ್ಟ್‌ ಅನ್ನು ಒದಗಿಸುವ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್‌ ಸ್ಪೀಕರ್ ಗ್ರಿಲ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿರುತ್ತದೆ. ವಿವೋದ ಈ ನೂತನ ಫೋನ್ ಅನ್ನು ಕಾಸ್ಮಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಈ ಫೋನಿನ ಬೆಲೆ 30,000 ರೂ.ಗಳಿಂದ 35,000 ರೂ.ಗಳ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo