ಹೊಸ Realme X2 Pro ಸ್ಮಾರ್ಟ್ಫೋನಿನ ಫಸ್ಟ್ ಇಂಪ್ರೆಷನ್ ಸಂಪೂರ್ಣ ಮಾಹಿತಿ

ಹೊಸ Realme X2 Pro ಸ್ಮಾರ್ಟ್ಫೋನಿನ ಫಸ್ಟ್ ಇಂಪ್ರೆಷನ್ ಸಂಪೂರ್ಣ ಮಾಹಿತಿ

ಇದರ ಕೆಲವು ಹೈಲೈಟ್ ಸ್ಪೆಸಿಫಿಕೇಷನ್ಗಳನ್ನು ನೋಡುವುದಾದರೆ ಇದು Qualcomm Snapdragon 855+ ಚಿಪ್ಸೆಟ್ ಜೊತೆಗೆ Octa core 2.96GHz ಕ್ಲಾಕ್ ಸ್ಪೀಡ್ ಪ್ರೊಸೆಸರ್ ರನ್ ಮಾಡುತ್ತದೆ. ಇದರ ಟಾಪ್ ಎಂಡ್ ವೇರಿಯಂಟ್ ಸುಮಾರು 12GB ಯ LPDDR4X RAM ಮತ್ತು 265GB ಯ USF 3.0 ಸ್ಟೋರೇಜ್ ಜೊತೆಗೆ ಬರುತ್ತೆ. ಅಲ್ಲದೆ ಇದು ಕ್ವಾಡ್ ಕ್ಯಾಮೆರಾ ಸೆಟಪ್ ಜೊತೆಗೆ 64MP ಪ್ರೈಮರಿ ಸೆನ್ಸರ್ 20X Hybrid Zoom ಸಹ ಒಳಗೊಂಡಿದೆ. ಇಂಟ್ರೆಸ್ಟಿಂಗ್ ಆಗಿ ಇದರಲ್ಲಿ 6.5 ಇಂಚಿನ FHD+ ಸೂಪರ್ ಅಮೋಲೆಡ್ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ನೀಡುವ ಸ್ಕ್ರೀನ್ HDR10+ ಸಹ ಹೊಂದಿದೆ. ಇದೇಲ್ಲ ರಿಯಲ್ಮೀ ಕಂಪನಿ ಕೇವಲ 29,999 ರೂಪಾಯಿಗೆ ನೀಡ್ತಾಯಿದೆ.
https://www.tindarobattaglia.it/wp-content/uploads/2019/10/realme-x2-pro.jpg
ಈ Realme X2 Pro ಸ್ಮಾರ್ಟ್ಫೋನ್ ನಿಜಕ್ಕೂ ಬೆಸ್ಟ್ ಮಿಡ್ ರೇಂಜ್ ಅದ್ದೂರಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಕಾರಣವಾದ ರಿಸಲ್ಟ್ ನೀವು ನೋಡಬವುದು. ಈ Realme X2 Pro ಸ್ಮಾರ್ಟ್ಫೋನ್ ನಾವು ಇದಕ್ಕಿಂತ ಹೆಚ್ಚು ಬೆಲೆಯಲ್ಲಿ ಬರುವ OnePlus 7T ಮತ್ತು Redmi K20 Pro Flagship ಫೋನ್ಗಳಿಗೆ ಹೋಲಿಸಿ ನೋಡಿದರೆ ಒಟ್ಟಾರೆಯಾಗಿ Realme X2 Pro ಕ್ಲಿಯರಾಗಿ ಮುಂದೆ ಬರುತ್ತೆ. ಆದರೆ ಕೆಲ ಫೀಚರ್ಗಳ ವಲಯಗಳಲ್ಲಿ ಇನ್ನು ಪ್ರಾಮುಖ್ಯತೆಯನ್ನು ತೋರಬೇಕಿದೆ.

ಇದರಲ್ಲಿ Qualcomm Snapdragon 855+ SoC ಅಡ್ರಿನೊ 640 ಮತ್ತು 7 ನ್ಯಾನೋಮೀಟರ್ ಟೆಕ್ನಾಲಜಿ ನೀಡಿರುವ ಕಾರಣ ಮೊದಲು ಇದರ  ಗೇಮಿಂಗ್ ಅನುಭವದ ಬಗ್ಗೆ ನೋಡೋಣ. ಇದರಲ್ಲಿ ಹಲವಾರು ಗೇಮ್ಗಳನ್ನು ಹಲವು ಬಾರಿ ನಾನೀಗಾಗಲೇ ಆಡಿದ್ದೇವೆ. ಅದರಲ್ಲೂ Call Of Duty Mobile ಗೇಮ್ ಹೆಚ್ಚಾಗಿ ಆಡಲಾಗಿದೆ. ಏಕೆಂದರೆ ಇಂದಿನ ದಿನಗಳಲ್ಲಿ ನಿಮಗೆ ತಿಳಿದಿರುವ ಹಾಗೆ COD ಹೆಚ್ಚು ಟ್ರೆಂಡಿಂಗ್ ಆಗಿದೆ. ನಿಮಗೆ ಈ ಗೇಮ್ ಹೆಚ್ಚು ಆಡುತ್ತಿದ್ದಾರೆ ಕಾಮೆಂಟ್ ಮಾಡಿ ತಿಳಿಸಿ. ಇದರೊಂದಿಗೆ PUBG Mobile ಗೇಮ್ ಮತ್ತು ಹೈ ಗ್ರಾಫಿಕ್ ರೇಸಿಂಗ್ ಗೇಮ್ ಆಗಿರುವ Asphalt 9 ಸಹ ಆಡಲಾಗಿದೆ.

ಇದರ ನಂತರ Gaming Performace ಸಹಾಯದಿಂದ ಒಮ್ಮೆ Realme X2 Pro ಫೋನಿನ ರಿಸಲ್ಟ್ ನೋಡುವುದಾದರೆ PUBG Mobile ಗೇಮ್ ಗರಿಷ್ಠ ಗ್ರಾಫಿಕ್ ಸೆಟ್ಟಿಂಗಲ್ಲಿ 60FPS ಜೊತೆಗೆ 100% ಸ್ಟೇಬಿಲಿಟಿ ನೀಡಿತು. ಅದೇ Call Of Duty Mobile ಗೇಮ್ ಗರಿಷ್ಠ ಗ್ರಾಫಿಕ್ ಸೆಟ್ಟಿಂಗಲ್ಲಿ 60FPS ಜೊತೆಗೆ 97% ಸ್ಟೇಬಿಲಿಟಿ ನೀಡಿದರೆ Asphalt 9 ಗೇಮ್ ಗರಿಷ್ಠ ಗ್ರಾಫಿಕ್ ಸೆಟ್ಟಿಂಗಲ್ಲಿ 30FPS ಜೊತೆಗೆ 92% ಸ್ಟೇಬಿಲಿಟಿ ನೀಡಿತು. ಇವೇಲ್ಲಾ ನಿಜಕ್ಕೂ ಈ ಪ್ರೈಸ್ ರೇಂಜಲ್ಲಿ ಅತ್ಯುತ್ತಮವಾದ ಫಲಿತಾಂಶವಾಗಿದೆ. ಇಲ್ಲಿ ನೀವು ಕೇಳುವ ಪ್ರಶ್ನೆ ಅಂದ್ರೆ ಫೋನ್ ಬಿಸಿಯಾಗುತ್ತ ಇಲ್ವಾ ಅಂಥ…ಇದರಲ್ಲಿನ ಕೂಲಿಂಗ್ ಸಿಸ್ಟಮ್ ನಿಜಕ್ಕೂ ಉತ್ತಮವಾಗಿ ಕೆಲಸ ಮಾಡುತ್ತೆ ಒಂದೇ ಸಮನೆ ಒಂದುವರೆ ಘಂಟೆ ಗೇಮ್ ಆಡಿದ ಮೇಲೂ ಕೇವಲ 50° ತಾಪಮಾನ ಮುಟ್ಟುತ್ತದೆ ಅಷ್ಟೇ.

 

ಫೋನಿನ ಕ್ಯಾಮೆರಾ ನೋಡುವುದಾದರೆ ಈ Realme X2 Pro ಸ್ಮಾರ್ಟ್ಫೋನ್ 64MP Samsung GW1 ಸೆನ್ಸರ್ ಜೊತೆಗೆ ಬರುವ ಮೊಟ್ಟ ಮೊದಲ Flagship ಸ್ಮಾರ್ಟ್ಫೋನ್ ಆಗಿದೆ. ಹಾಗಾದ್ರೆ ಇದು ನಿಜಕ್ಕೂ ಬೇರೆ ಫೋನ್ಗಳಿಗಿಂತ ಎಷ್ಟು ಭಿನ್ನವಾಗಿದೆ ನೀವೇ ನೋಡಿ. ಹೌದು ನೀವು ಸಾಮಾನ್ಯವಾಗಿ ತೆಗೆದ ಫೋಟೋವನ್ನ ಸಾಧ್ಯವಾದಷ್ಟು Zoom ಮಾಡಿದರೆ ನಿಮಗೆ ಈ 64MP Samsung GW1 ಸೆನ್ಸರ್'ನ ಫೀಲ್ ನೋಡುಲು ಸಿಗುತ್ತದೆ.

ಫೋನಿನ ಕ್ಯಾಮೆರಾ ನೋಡುವುದಾದರೆ ಈ Realme X2 Pro ಸ್ಮಾರ್ಟ್ಫೋನ್ 64MP Samsung GW1 ಸೆನ್ಸರ್ ಜೊತೆಗೆ ಬರುವ ಮೊಟ್ಟ ಮೊದಲ Flagship ಸ್ಮಾರ್ಟ್ಫೋನ್ ಆಗಿದೆ. ಹಾಗಾದ್ರೆ ಇದು ನಿಜಕ್ಕೂ ಬೇರೆ ಫೋನ್ಗಳಿಗಿಂತ ಎಷ್ಟು ಭಿನ್ನವಾಗಿದೆ ನೀವೇ ನೋಡಿ. ಹೌದು ನೀವು ಸಾಮಾನ್ಯವಾಗಿ ತೆಗೆದ ಫೋಟೋವನ್ನ ಸಾಧ್ಯವಾದಷ್ಟು Zoom ಮಾಡಿದರೆ ನಿಮಗೆ ಈ 64MP Samsung GW1 ಸೆನ್ಸರ್'ನ ಫೀಲ್ ನೋಡುಲು ಸಿಗುತ್ತದೆ. ಇದರೊಂದಿಗೆ ಕೇಲವು ಸ್ಯಾಂಪಲ್ಗಳಲ್ಲಿ ಡೈನಮಿಕ್ ರೇಂಜ್ ಮತ್ತು ಇಮೇಜಲ್ಲಿನ ಶಾರ್ಪ್'ನೆಸ್ ಕ್ಲಿಯರಾಗಿ ಕಾಣಿಸುತ್ತೆ. ಇದರ ಕ್ರಮವಾಗಿ ಇದನ್ನು ನೀವು 16MP'ನ ಪಿಕ್ಸೆಲ್ ಬಿನ್ನಿಂಗ್ ಜೊತೆಗೆ ಪಡೆಯುವಿರಿ. ಇದರಲ್ಲಿ AI ನ್ಯಾಚುರಲ್ ಲುಕ್ ಸೆನ್ಸರ್ ಜೊತೆಗೆ Realme Croma Booster ಸಹ ನೀಡಲಾಗಿದೆ. ಈ ಮೂಲಕ ಹೆಚ್ಚಿನ ಕಲರ್ ಜೊತೆಗೆ ಹೆಚ್ಚಿನ ಆರ್ಟಿಫಿಷಿಯಲ್ ಇಮೇಜ್ಗಳನ್ನೂ ಕ್ಯಾಪ್ಚರ್ ಮಾಡಬವುದು.

ನೈಟ್ ಮೂಡ್ ಶಾಟ್ ನೋಡಬೇಕೆಂದರೆ ಸಾಮಾನ್ಯ ಫೋನ್ಗಳಂತೆ ಒಂದಕ್ಕಿಂತ ಹೆಚ್ಚು ಇಮೇಜ್ಗಳಲ್ಲಿ ಮಲ್ಟಿ ಫ್ರೆಮ್ ನೋಯಿಸ್ ರಿಡಕ್ಷನ್ ನೋಡಲು ಸಿಗುತ್ತದೆ. ಇಮೇಜ್ ಕ್ವಾಲಿಟಿಯ ಬಗ್ಗೆ ಹೇಳಬೇಕೆಂದರೆ ರಾತ್ರಿಯಲ್ಲಿ ತೆಗೆದ ಇಮೇಜ್ ಜೋಮ್ ಮಾಡಿದರೆ ಶಾರ್ಪ್ ಮತ್ತು ಕಲರ್ ಕಾಂಟ್ರೆಸ್ಟ್ ನ್ಯಾಚುರಲ್ ಆಗಿರುತ್ತದೆ. ಹತ್ತಿರದ ಇಮೇಜುಗಳಲ್ಲಿ ನೋಯಿಸ್ ರಿಡಕ್ಷನ್ ಕಡಿಮೆಯಾಗುವ ಕಾರಣ ಉತ್ತಮವಾದ ಇಮೇಜುಗಳನ್ನು ರಾತ್ರಿಯಲ್ಲಿ ಪಡೆಯಬವುದು. ಇದರ ನಂತರ ಫೋನಲ್ಲಿ 960FPS ಸ್ಲೋ ಮೋಶನ್ ರೆಕಾರ್ಡಿಂಗ್ ಮತ್ತು ಪೋಟ್ರೇಟ್ ಮತ್ತು Export ಮೋಡ್ ಸಹ ಪಡೆಯುವಿರಿ. ಆದರೆ ಈ ಫೋನಿನ Export ಮೋಡಲ್ಲಿನ ISO ಕಂಟ್ರೋಲ್ ಮಾಡಲು ಅವಕಾಶ ಮಾಡಿಕೊಡೋದಿಲ್ಲ. ಯಾಕೆ ಕೊಟ್ಟಿಲ್ಲ ಅನ್ನೋ ಪ್ರಶ್ನೆ ಇಲ್ಲಿ ಬರುತ್ತೇ.

https://i2.wp.com/www.smartprix.com/bytes/wp-content/uploads/2019/11/realme-x2-pro-camera-samples-2.jpg?w=1000&ssl=1

ಇದರಲ್ಲಿ 4000mAh ಹೈ ಕ್ಯಾಪಾಸಿಟಿಯ ಬ್ಯಾಟರಿ ಡಿಸೆಂಟ್ ಆಗಿದ್ದು ದಿನದ ನಿಮ್ಮ ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತದೆ. ಇದರ PC ಮಾರ್ಕ್ ಬ್ಯಾಟರಿ ಟೆಸ್ಟ್ ರಿಸಲ್ಟ್ ನೋಡೋದಾದ್ರೆ ಇದು 643 ನಿಮಿಷದ ಬ್ಯಾಟರಿ ಲೈಫ್ ನೀಡಿದರೆ OnePlus 7T ಸ್ವಲ್ಪ ಜಾಸ್ತಿಯಾಗಿ 753 ನಿಮಿಷ ನೀಡುತ್ತದೆ. ಅದೇ Redmi K20 Pro ಕೇವಲ 586 ನಿಮಿಷ ನೀಡುತ್ತದೆ. ಒಂದು ವೇಳೆ ನೀವು ಹೆಚ್ಚಾಗಿ ಗೇಮ್ ಆಡ್ತಾಯಿದ್ರೆ ಸಂಜೆ ಒಮ್ಮೆ ಚಾರ್ಜ್ ಮಾಡಬೇಕಾಗುತ್ತೆ. ಆದರೆ ನೀವು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವಂತಿಲ್ಲ ಏಕೆಂದರೆ ಇದರ ಬಾಕ್ಸ್ ಒಳಗೆ ದೇಶದ ಮೊಟ್ಟ ಮೊದಲ ಅತಿ ವೇಗದ 50w SuperVOOC ಫ್ಲಾಶ್ ಚಾರ್ಜರ್ ನೀಡಲಾಗಿದೆ. ಇದರಿಂದಾಗಿ ಕೇವಲ 30 ನಿಮಿಷದಲ್ಲಿ ಪುನಃ ನಿಮ್ಮ ಫೋನನ್ನು 100% ಚಾರ್ಜ್ ಮಾಡುತ್ತದೆ.
https://sm.mashable.com/t/mashable_in/photo/default/realme-x2-pro-2_ypgj.960.jpg
ಈ ಫೋನಿನ ಚಾರ್ಜಿಂಗ್ ವಿಭಾಗದಲ್ಲಿ  ಒಂದು ಮಾತನ್ನು ಗಮನದಲ್ಲಿಡಿ. ಇದೇ ಫೋನಿನ ರಿಯಲ್ ಚಾರ್ಜರ್ ಮತ್ತು ರಿಯಲ್ ಕೇಬಲ್ ಜೊತೆಗೆ ಮಾತ್ರ ಈ 50w SuperVOOC ಟೆಕ್ನಾಲಜಿ ಕೆಲಸ ಮಾಡುತ್ತೇ ಆದ್ದರಿಂದ ಬೇರೆ ಅಡಾಪ್ಟರ್ ಅಥವಾ ಬೇರೆ ಕೇಬಲ್ ಜೊತೆಗೆ ಬಳಸದಿರಲು ಕಂಪನಿ ಕಿವಿ ಮಾತು ನೀಡಿದೆ.  

ಒಟ್ಟಾರೆಯಾಗಿ…
ಕಂಪನಿ 29,999 ರೂಗಳಲ್ಲಿ ಇದೇಲ್ಲ ನೀಡುವ ಈ Realme X2 Pro ಸ್ಮಾರ್ಟ್ಫೋನ್ ಒಂದು True Flagship ಫೋನಾ? ಅನ್ನುವ ಪ್ರಶ್ನೆ ಇನ್ನು ಹಾಗೆ ಉಳಿದಿದೆ ಏಕೆಂದರೆ ಇದು OnePlus 7T ಹೊಂದಿರುವ ಹಲವಾರು ಫೀಚರ್ ಮತ್ತು ಸ್ಪೆಸಿಫಿಕೇಷನ್ಗಳನ್ನು ಒಳಗೊಂಡಿದೆ. ಆದರೂ ಕೆಲ ವಿಭಾಗದಲ್ಲಿ ಇನ್ನು ಹಿಂದೆ ಉಳಿದಿದೆ. ಉದಾಹರಣೆಗೆ Realme X2 Pro ಸ್ಮಾರ್ಟ್ಫೋನ್ ವಾಟರ್ ಪ್ರೊಫ್ ಅಲ್ಲ ಒಂದು ವೇಳೆ ಈ ಫೋನ್ ನೀರೊಳಗೆ ಬಿದ್ರೆ ಭಾರಿ ಖರ್ಚು ನೀಡಲೇಬೇಕಾಗುತ್ತೆ. ಅಲ್ಲದೆ Realme X2 Pro ಸ್ಮಾರ್ಟ್ಫೋನ ಕ್ಯಾಮೆರಾದಲ್ಲಿ OIS ಅಂದ್ರೆ ಆಪ್ಟಿಕಲ್ ಇಮೇಜ್ ಸ್ಟಬಿಲೈಝಷನ್ ಅಥವಾ EIS ಅಂದ್ರೆ ಇಲೆಕ್ಟ್ರಾನಿಕ್ ಇಮೇಜ್ ಸ್ಟಬಿಲೈಝಷನ್ ನೀಡಿಲ್ಲ. ಕೊನೆಯದಾಗಿ ಈಗಾಗಲೇ Realme ಮತ್ತು Oppo ಫೋನ್ಗಳಲ್ಲಿರುವ ಅದೇ ಹಳೆಯ ColorOS 6.1 ಜೊತೆಗೆ ಆಂಡ್ರಾಯ್ಡ್ 9.0 ಪೈ ರನ್ ಮಾಡುತ್ತದೆ ಆದರೆ OnePlus 7T ಆಂಡ್ರಾಯ್ಡ್ 10.0 ಜೊತೆಗೆ ನಡೆಯುತ್ತೇ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo