Samsung Galaxy M31 ಸ್ಮಾರ್ಟ್ಫೋನ್ 64MP ಕ್ವಾಡ್ ಕ್ಯಾಮೆರಾ 6000mAh ಬ್ಯಾಟರಿಯೊಂದಿಗೆ ಬಿಡುಗಡೆ

Samsung Galaxy M31 ಸ್ಮಾರ್ಟ್ಫೋನ್ 64MP ಕ್ವಾಡ್ ಕ್ಯಾಮೆರಾ 6000mAh ಬ್ಯಾಟರಿಯೊಂದಿಗೆ ಬಿಡುಗಡೆ
HIGHLIGHTS

ಸ್ಮಾರ್ಟ್ಫೋನ್ ಇತ್ತೀಚಿನ OneUI ಅನುಭವದೊಂದಿಗೆ ಪೂರ್ವ ಲೋಡ್ ಆಗುತ್ತದೆ ಮತ್ತು ಆಂಡ್ರಾಯ್ಡ್ 10 ಅನ್ನು ರನ್ ಮಾಡುತ್ತದೆ.

ಭಾರತದಲ್ಲಿ ಈ ಮೊದಲ Samsung Galaxy M30 ಯ ಯಶಸ್ಸಿನ ಮತ್ತೊಂದು Samsung Galaxy M31ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಇವೆರಡೂ ಕಳೆದ ವರ್ಷ ಪ್ರಾರಂಭವಾಗಿದ್ದರೂ ಈ ವರ್ಷ ಈ ಹೊಸ Galaxy M31 ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಒಳಗೊಂಡಿದೆ. Samsung Galaxy M31 ಮುಂಭಾಗದಲ್ಲಿ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇದರ ಹಿಂದಿನ ಮಾದರಿಗಳೊಂದಿಗಿನ ಸಾಮ್ಯತೆಗೆ ಸಂಬಂಧಿಸಿದಂತೆ Samsung Galaxy M31 ಗ್ರೇಡಿಯಂಟ್ ಬ್ಯಾಕ್ ವಿನ್ಯಾಸ ಮತ್ತು ವಾಟರ್‌ಡ್ರಾಪ್ ಶೈಲಿಯ ಡಿಸ್ಪ್ಲೇಯಲ್ಲಿ ನಾಚ್ ಒಳಗೊಂಡಿದೆ. ಸ್ಮಾರ್ಟ್ಫೋನ್ ಇತ್ತೀಚಿನ OneUI ಅನುಭವದೊಂದಿಗೆ ಪೂರ್ವ ಲೋಡ್ ಆಗುತ್ತದೆ ಮತ್ತು ಆಂಡ್ರಾಯ್ಡ್ 10 ಅನ್ನು ರನ್ ಮಾಡುತ್ತದೆ.

Samsung Galaxy M31 Display
ಈ ಬೆಲೆ ವಿಭಾಗದಲ್ಲಿ ಕಂಪನಿ 6.4 ಇಂಚಿನ ಸೂಪರ್ ಅಮೋಲೆಡ್ FHD+ ಡಿಸ್ಪ್ಲೇಯನ್ನು 2400 x 1080 ಪಿಕ್ಸೆಲ್ ರೆಸುಲ್ಯೂಷನ್ 20:9 ಅಸ್ಪೆಟ್ ರೇಷುವಿನೊಂದಿಗೆ HDR 10 ಡಿಸ್ಪ್ಲೇಯನ್ನು ಒಳಗೊಂಡಿದೆ. ಪ್ರೊಟೆಕ್ಷನ್ಗಾಗಿ ಇದರ ಡಿಸ್ಪ್ಲೇ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಸಹ ನೀಡಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಸ್ಮಾರ್ಟ್ಫೋನಿನ ಡಿಸ್ಪ್ಲೇ ನಿಜಕ್ಕೂ ತುಂಬಾನೇ ಸ್ಮೂತ್ ಮತ್ತು ಹೆಚ್ಚು ಆಕರ್ಷಕ ಅನುಭವ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ಈ ಫೀಚರ್ಗಳು ಸಾಮಾನ್ಯವಾಗಿ ಮಿಡ್ ರೇಂಜ್ ಫೋನ್ಗಳಲ್ಲಿ ನೋಡಬವುದು.

Samsung Galaxy M31 Camera
ಈ ಸ್ಮಾರ್ಟ್ಫೋನ್ ಕ್ಯಾಮೆರಾ ವಿಭಾಗದಲ್ಲಿ ಈ ಬಾರಿ ಹೆಚ್ಚಾಗಿಯೇ ಗಮನ ಹರಿಸಿದೆ. ಏಕೆಂದರೆ ಇದರಲ್ಲಿ ನಿಮಗೆ ಕ್ವಾಡ್ ಅಂದ್ರೆ ನಾಲ್ಕು 64MP + 8MP + 5MP + 5MP ಮಾದರಿಯ ಕ್ಯಾಮೆರಾ ಸೆಟಪ್ ನೋಡಲು ಸಿಗುತ್ತದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 64MP ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡಿದ್ದು ಇದೊಂದು ಕ್ಯಾಮೆರಾ ಸೆಂಟ್ರಿಕ್ ಫೋನ್ ಎನ್ನುವುದರಲ್ಲಿ ಬೇರೆ ಮಾತಿಲ್ಲ. ನಂತರ 8MP ಮೆಗಾಪಿಕ್ಸೆಲ್ f/2.2 ಅಪರ್ಚರ್ ಅಲ್ಟ್ರಾವೈಡ್ ಸೆನ್ಸರ್ ಮ್ಯಾಕ್ರೋ ಶಾಟ್ಗಳಿಗಾಗಿ 5MP ಮೆಗಾಪಿಕ್ಸೆಲ್ f/2.4 ಅಪರ್ಚರ್ ಸುಮಾರು 2cm ಕ್ಲೋಸರ್ ಶಾಟ್ಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಕೊನೆಯದಾಗಿ 5MP ಡೆಪ್ತ್ ಸೆನ್ಸರ್ f/2.4 ಅಪರ್ಚರ್ ಸಪೋರ್ಟ್ ಮಾಡುತ್ತದೆ. ಇದರ ಕ್ರಮವಾಗಿ ಫ್ರಂಟಲ್ಲಿ 32MP ಮೆಗಾಪಿಕ್ಸೆಲ್ ಸಪೋರ್ಟ್ ಹೊಂದಿದೆ.

Samsung Galaxy M31 Processor
ಇದರಲ್ಲಿ ಈಗಾಗಲೇ Samsung ತಮ್ಮ ಸ್ಮಾರ್ಟ್ಫೋನಗಳಲ್ಲಿ ಬಳಸಿರುವ ಅಂದ್ರೆ Samsung Galaxy M30s ಸ್ಮಾರ್ಟ್ಫೋನಲ್ಲಿ ಲಭ್ಯವಿರುವ ಅದೇ  Exynos 9611 ಪ್ರೊಸೆಸರ್ ಆಂಡ್ರಾಯ್ಡ್ 10.0 ಜೊತೆಗೆ OneUI ನೀಡಲಾಗಿದೆ. ಇದು 2.1GHz ಕ್ಲಾಕ್ ಸ್ಪೀಡ್ ನೀಡುವುದರಿಂದಿಗೆ ಅಡ್ರಿನೊ 618 ಹೊಂದಿದೆ. ಜೊತೆಗೆ ಫೋಳನ್ನು ತಂಪಾಗಿಡಲು ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಸಹ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ವೇರಿಯಂಟ್ ರೂಪಾಂತರಗಳಲ್ಲಿ ಲಭ್ಯವಿದೆ 6GB ಮತ್ತು LPDDR4X RAM ಹೊಂದಿದ್ದರೆ ಇದರ ಕ್ರಮವಾಗಿ 64GB ಮತ್ತು 128GB UFS 2.1 ಸ್ಟೋರೇಜ್ ಒಳಗೊಂಡಿದೆ.

Samsung Galaxy M31 Battery & Ports
ಇದರಲ್ಲಿ ಕೊನೆಯದಾಗಿ ನಿಮ್ಮ ಪೂರ್ತಿ ದಿನವನ್ನು ಕಳೆಯಲು ಹೈ ಕೆಪ್ಯಾಸಿಟಿ ಸಾಮರ್ಥ್ಯದ 6000mAh ಬ್ಯಾಟರಿ ನೀಡಲಾಗಿದೆ. ಅಲ್ಲದೆ ಇದರಲ್ಲಿ ನಿವಾಕ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಂಪನಿ ಬಾಕ್ಸ್ ಜೊತೆಯಲ್ಲೇ 15w ಫಾಸ್ಟ್ ಚಾರ್ಜ್ ಸಪೋಟ್ ಮಾಡುವ ಹೊಸ ಫಾಸ್ಟ್ ಚಾರ್ಜ್ ಅಡಾಪ್ಟರ್ ನೀಡುತ್ತಿದೆ. ಇದರ ಕ್ರಮವಾಗಿ USB ಟೈಪ್ ಸಿ ಪೋರ್ಟ್ ಜೊತೆಗೆ ಪ್ರತ್ಯೇಕವಾಗಿ 3.5mm ಆಡಿಯೋ ಜಾಕ್ ಸಹ ನೀಡಲಾಗಿದೆ. ಫೋನಿನ ಹಿಂದೆ ಫಿಂಗರ್ಪ್ರಿಂಟ್ ಸೆನ್ಸರ್ ಫೀಚರ್ಗಳನ್ನು ನೀಡಲಾಗಿದೆ. ಇದರಲ್ಲಿ 4G dual SIM ಸಪೋರ್ಟ್ ಅಂದ್ರೆ ಎರಡು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೋ SD ಕಾರ್ಡ್ ಹಾಕುವ ಆಯ್ಕೆಯನ್ನು ನೀಡಲಾಗಿದೆ.

Samsung Galaxy M31 Price & Availability
ಈ ಹೊಸ ಸ್ಮಾರ್ಟ್ಫೋನ್ ಈಗಾಗಲೇ ತಿಳಿಸಿರುವ ಹಾಗೆ ಒಟ್ಟು ಎರಡು ವೇರಿಯಂಟ್ಗಳಲ್ಲಿ ಲಭ್ಯವಿದೆ. 6GB LPDDR4X RAM ಹೊಂದಿದ್ದರೆ ಇದರ ಕ್ರಮವಾಗಿ 64GB ಮತ್ತು 128GB UFS 2.1 ಸ್ಟೋರೇಜ್ ಒಳಗೊಂಡಿದೆ. ಇದರ ಮೊದಲ ವೇರಿಯಂಟ್ 6GB+64GB ಕೇವಲ ₹14,999 ರೂಗಳಲ್ಲಿ ಲಭ್ಯವಾದರೆ ಇದರ ಎರಡನೇಯದು 6GB+128GB ಕೇವಲ ₹15,999 ರೂಗಳಲ್ಲಿ ಬರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo