ಮಾರ್ಚ್ 26 ಕ್ಕೆ Realme Narzo ಸರಣಿಯ ಈ ಸ್ಮಾರ್ಟ್ಫೋನ್ಗಳು ಕಾಲಿಡಲಿವೆ – 2020

ಮಾರ್ಚ್ 26 ಕ್ಕೆ Realme Narzo ಸರಣಿಯ ಈ ಸ್ಮಾರ್ಟ್ಫೋನ್ಗಳು ಕಾಲಿಡಲಿವೆ – 2020
HIGHLIGHTS

ಈ ಸರಣಿಯನ್ನು ಕಂಪನಿ ಇದೇ ಮಾರ್ಚ್ 26 ರಂದು ಮಧ್ಯಾಹ್ನ 12.30 ಕ್ಕೆ ಬಿಡುಗಡೆ ಮಾಡಲಾಗುವುದು

ಈ ಸ್ಮಾರ್ಟ್ಫೋನ್ ತಯಾರಕ ರಿಯಲ್ಮೆ ಇತ್ತೀಚೆಗೆ ಟೀಸರ್ ಮೂಲಕ ಭಾರತದಲ್ಲಿ ಶೀಘ್ರದಲ್ಲೇ ಹೊಸ ಸರಣಿ 'ನಾರ್ಜೊ' ಅನ್ನು ಬಿಡುಗಡೆ ಮಾಡುವುದಾಗಿ ಸೂಚಿಸಿದೆ. ಅದೇ ಸಮಯದಲ್ಲಿ ನಾರ್ಜೊ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳೆಂದು ಕಂಪನಿಯು ಅಧಿಕೃತವಾಗಿ ಕಂಫಾರ್ಮ್ ಆಗಿವೆ. ಮತ್ತು ಅದರ ಅಡಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಾರ್ಚ್ 26 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಈ ಸರಣಿಯಲ್ಲಿ ಕಂಪನಿಯು ರಿಯಲ್ಮೆ ನಾರ್ಜೊ 10 ಮತ್ತು ನಾರ್ಜೊ 10A ಅನ್ನು ಬಿಡುಗಡೆ ಮಾಡುತ್ತದೆ. ಅವರ ಕೆಲವು ವೈಶಿಷ್ಟ್ಯಗಳು ಸಹ ಬಹಿರಂಗಗೊಂಡಿವೆ.

ಈ ಸರಣಿಯನ್ನು ಕಂಪನಿ ಇದೇ ಮಾರ್ಚ್ 26 ರಂದು ಮಧ್ಯಾಹ್ನ 12.30 ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ರಿಯಲ್ಮೆ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮುಂಬರುವ ಸ್ಮಾರ್ಟ್‌ಫೋನ್‌ಗಳಾದ Realme Narzo 10 ಮತ್ತು Narzo 10A ಫೋನ್ಗಳ  ಚಿತ್ರವನ್ನು ಹಂಚಿಕೊಂಡಿದೆ. ಇದರೊಂದಿಗೆ ಮುಂಬರುವ ಸ್ಮಾರ್ಟ್‌ಫೋನ್ ಸರಣಿಯ ಕೆಲವು ವೈಶಿಷ್ಟ್ಯಗಳು realme ವೆಬ್‌ಸೈಟ್‌ನಲ್ಲಿಯೂ ಬಹಿರಂಗಗೊಂಡಿವೆ. ಈ ಸರಣಿಯಲ್ಲಿ 5000mAh ಬ್ಯಾಟರಿಯನ್ನು ನೀಡಲಾಗುವುದು. 

ಇದು ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ ಬರುತ್ತದೆ. ಇದಲ್ಲದೆ ಇದು ಹಸಿರು ಮತ್ತು ನೀಲಿ ಎರಡು ಬಣ್ಣ ರೂಪಾಂತರಗಳನ್ನು ತೋರಿಸಿದೆ. ಒಂದು ರೂಪಾಂತರವು ಎಲ್ಇಡಿ ಫ್ಲ್ಯಾಷ್ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇತರ ರೂಪಾಂತರಗಳಲ್ಲಿ ಎಲ್ಇಡಿ ಫ್ಲ್ಯಾಷ್ ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಲಭ್ಯವಿರುತ್ತದೆ. ಈ ಸರಣಿಯಲ್ಲಿ ಶೇ 89.8 ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ ನೀಡಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo