7200mAh ಬ್ಯಾಟರಿಯೊಂದಿಗೆ Realme GT 7 ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು ತಿಳಿಯಿರಿ!

Updated on 23-Apr-2025
HIGHLIGHTS

ಚೀನಾದಲ್ಲಿ ಲೇಟೆಸ್ಟ್ ಪವರ್ಫುಲ್ Realme GT 7 ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ.

Realme GT 7 ಸ್ಮಾರ್ಟ್ಫೋನ್ 7200mAh ಬ್ಯಾಟರಿಯೊಂದಿಗೆ ಅನೇಕ ಇಂಟ್ರೆಸ್ಟಿಂಗ್ ಫೀಚರ್‌ಗಳೊಂದಿಗೆ ಪರಿಚಯ

Realme GT 7 ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಸುಮಾರು 30,000 ರೂಗಳಿಗೆ ಬಿಡುಗಡೆಗೊಳಿಸಿದೆ.

ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ (Realme) ಇಂದು ತನ್ನ ಲೇಟೆಸ್ಟ್ ಪವರ್ಫುಲ್ Realme GT 7 ಸ್ಮಾರ್ಟ್ಫೋನ್ ತನ್ನ ತಾಯ್ನಾಡಿನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಬರೋಬ್ಬರಿ 7200mAh ಬ್ಯಾಟರಿಯೊಂದಿಗೆ ಅನೇಕ ಇಂಟ್ರೆಸ್ಟಿಂಗ್ ಫೀಚರ್‌ಗಳೊಂದಿಗೆ ಪರಿಚಯವಾಗಿದೆ. ಈ Realme GT 7 ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಸುಮಾರು 30,000 ರೂಗಳಿಗೆ ಬಿಡುಗಡೆಗೊಳಿಸಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಫೀಚರ್ಗಳೇನು ಮತ್ತು ಆಫರ್ ಬೆಲೆ ಎಷ್ಟು ಎಲ್ಲವನ್ನು ಈ ಕೆಳಗೆ ಪರಿಶೀಲಿಸೋಣ.

ಇದನ್ನೂ ಓದಿ: Best Portable AC: ಹೆಚ್ಚುತ್ತಿರುವ ಬಿಸಿಲ ಬೇಗೆಯಲ್ಲಿ ಕಾಶ್ಮೀರದಂತೆ ತಂಪಾಗಿಸುವ ಟಾಪ್ 5 ಪೋರ್ಟಬಲ್ ಏರ್ ಕೂಲರ್ಗಳು!

ಚೀನಾದಲ್ಲಿ Realme GT 7 ಬೆಲೆ ಎಷ್ಟು?

ಚೀನಾದಲ್ಲಿ Realme GT 7 ಸ್ಮಾರ್ಟ್ಫೋನ್ ಬೆಲೆ ಮತ್ತು ಮಾದರಿ ನೋಡುವುದದಾದರೆ ಒಟ್ಟು 5 ರೂಪಾಂತರದಲ್ಲಿ ಬಿಡುಗಡೆಯಾಗಿದ್ದು ಇದನ್ನು ಗ್ರ್ಯಾಫೀನ್ ಐಸ್ (ನೀಲಿ), ಗ್ರ್ಯಾಫೀನ್ ಸ್ನೋ (ಬಿಳಿ) ಮತ್ತು ಗ್ರ್ಯಾಫೀನ್ ನೈಟ್ (ಕಪ್ಪು) ಎಂಬ ಮೂರು ಬಣ್ಣಗಳಲ್ಲಿ ಚೀನಾದಲ್ಲಿ ಲಭ್ಯವಿದೆ. ಈ Realme GT 7 ಸ್ಮಾರ್ಟ್ಫೋನ್ ಪ್ರಸ್ತುತ ರಿಯಲ್‌ಮಿ ಚೀನಾ ವೆಬ್‌ಸೈಟ್ ಮತ್ತು ಇತರ ಆನ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿದೆ.

12GB + 256GB ಮಾದರಿಗೆ CNY 2,599 (ಸರಿಸುಮಾರು ರೂ. 30.400)
16GB + 256GB ಮಾದರಿಗೆ CNY 2,899 (ಸರಿಸುಮಾರು ರೂ. 34,000)
12GB + 512GB ಮಾದರಿಗೆ CNY 2,999 (ಸರಿಸುಮಾರು ರೂ. 35,100)
16GB + 512GB ಮಾದರಿಗೆ CNY 3,299 (ಸರಿಸುಮಾರು ರೂ. 38,700)
16GB + 1024GB ಮಾದರಿಗೆ CNY 3,799 (ಸರಿಸುಮಾರು ರೂ. 44,500)

ಚೀನಾದಲ್ಲಿ Realme GT 7 ಫೀಚರ್ ಮತ್ತು ವಿಶೇಷತೆಗಳೇನು?

ಸ್ಮಾರ್ಟ್ಫೋನ್ 6.78 ಇಂಚಿನ ಪೂರ್ಣ-HD+ (1,280×2,800 ಪಿಕ್ಸೆಲ್‌ಗಳು) OLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರ, 6500 ನಿಟ್ಸ್ ವರೆಗೆ ಗರಿಷ್ಠ ಹೊಳಪು 2,600Hz ತ್ವರಿತ ಸ್ಪರ್ಶ ಮಾದರಿ ರೇಟ್ 100% ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಮತ್ತು 4,608Hz PWM ಮಬ್ಬಾಗಿಸುವಿಕೆಯ ದರವನ್ನು ಹೊಂದಿದೆ. ಹ್ಯಾಂಡ್‌ಸೆಟ್ 3nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 9400+ ಪ್ರೊಸೆಸರ್ನಿಂದ ಚಾಲಿತವಾಗಿದ್ದು 16GB ವರೆಗೆ LPDDR5X RAM ಮತ್ತು 1TB ವರೆಗೆ UFS 4.0 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಆಂಡ್ರಾಯ್ಡ್ 15-ಆಧಾರಿತ ರಿಯಲ್‌ಮಿ UI 6.0 ನೊಂದಿಗೆ ಬರುತ್ತದೆ.

Also Read: iQOO Z10 Turbo Series ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ 1/1.56 ಇಂಚಿನ ಸೋನಿ IMX896 ಪ್ರೈಮರಿ ಸೆನ್ಸರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಮತ್ತು 8MP ಮೆಗಾಪಿಕ್ಸೆಲ್ 112-ಡಿಗ್ರಿ ಅಲ್ಟ್ರಾ-ವೈಡ್ ಶೂಟರ್ ಜೊತೆಗೆ f/1.8 ಅಪರ್ಚರ್ ಹ್ಯಾಂಡ್‌ಸೆಟ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಮೆಗಾಪಿಕ್ಸೆಲ್ ಸೋನಿ IMX480 ಮುಂಭಾಗದ ಕ್ಯಾಮೆರಾ ಸೆನ್ಸರ್ ಹೊಂದಿದೆ. ಇದು 4K ವೀಡಿಯೊ ರೆಕಾರ್ಡಿಂಗ್ ಮತ್ತು ಲೈವ್ ಫೋಟೋಗಳ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.

ಇದು ಗ್ರ್ಯಾಫೀನ್ ಐಸ್-ಸೆನ್ಸಿಂಗ್ ಡಬಲ್-ಲೇಯರ್ ಕೂಲಿಂಗ್ ತಂತ್ರಜ್ಞಾನದೊಂದಿಗೆ 7,700mm² VC ಕೂಲಿಂಗ್ ಚೇಂಬರ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್ಫೋನ್ 7200mAh ಬ್ಯಾಟರಿಯನ್ನು ಹೊಂದಿದ್ದು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಸುರಕ್ಷತೆಗಾಗಿ ಹ್ಯಾಂಡ್‌ಸೆಟ್ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಇದು IR ಸೆನ್ಸರ್ ಅನ್ನು ಸಹ ಹೊಂದಿದೆ. ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :