Realme GT 7 ಇಂಟ್ರೆಸ್ಟಿಂಗ್ ಗೇಮಿಂಗ್ ಸೆಟಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ! ನಿರೀಕ್ಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Realme GT 7 ಇಂಟ್ರೆಸ್ಟಿಂಗ್ ಗೇಮಿಂಗ್ ಸೆಟಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ! ನಿರೀಕ್ಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಮುಂಬರಲಿರುವ Realme GT 7 ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ.

Realme GT 7 ಈಗಾಗಲೇ ತನ್ನ ತಾಯ್ನಾಡಾದ ಚೀನಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತದ ಬಾರಿಯಾಗಿದೆ.

BGMI ಆಡುವಾಗ ಬರೋಬ್ಬರಿ 6 ಗಂಟೆಗಳ ಸ್ಟೇಬಲ್ 120fps ಗೇಮ್‌ಪ್ಲೇಯನ್ನು ನೀಡುವ ಮೊದಲ ಸ್ಮಾರ್ಟ್ ಫೋನ್.

Realme GT 7 India launch imminent: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ತನ್ನ ಮುಂಬರಲಿರುವ Realme GT 7 ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಬಗ್ಗೆ ಸ್ವತಃ ಕಂಪನಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಪೋಸ್ಟ್ ಮಾಡಿ ಮಾಹಿತಿ ನೀಡಿದೆ. ಆದರೆ ಕಂಪನಿ Realme GT 7 ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಆದರೆ Realme GT 7 ಸ್ಮಾರ್ಟ್ಫೋನ್ ಈಗಾಗಲೇ ತನ್ನ ತಾಯ್ನಾಡಾದ ಚೀನಾದಲ್ಲಿ ಬಿಡುಗಡೆಯಾಗಿರುವ ಕಾರಣ ಭಾರತದಲ್ಲೂ ಸರಿ ಸುಮಾರು ಅದೇ ಲುಕ್ ಮತ್ತು ಫೀಚರ್ ಹೊಂದಿರುವ ನಿರೀಕ್ಷೆಗಳಿವೆ.

Realme GT 7 ಬರೋಬ್ಬರಿ 6 ಗಂಟೆಗಳ ಸ್ಟೇಬಲ್ 120fps ಗೇಮ್‌ಪ್ಲೇ!

Realme GT 7 ಸ್ಮಾರ್ಟ್ಫೋನ್ ಈಗ ಭಾರತದಲ್ಲೂ ಬಿಡುಗಡೆಯಾಗಲಿದೆ ಎಂದು ಟೀಸರ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಗೇಮ್ ಆಡುವಾಗ ಬರೋಬ್ಬರಿ 6 ಗಂಟೆಗಳ ಸ್ಟೇಬಲ್ 120fps ಗೇಮ್‌ಪ್ಲೇಯನ್ನು ಬೆಂಬಲಿಸುವ ದೇಶದ ಮೊದಲ ಸ್ಮಾರ್ಟ್ ಫೋನ್ ಎಂಬ ಹೆಸರಿಗೆ ಈ Realme GT 7 ಕಾರಣವಾಗಬಹುದು.

ಇದನ್ನೂ ಓದಿ: Best Portable AC: ಸಿಕ್ಕಾಪಟ್ಟೆ ಹೆಚ್ಚಾದ ಬಿಸಿಲಲ್ಲೂ ನಿಮ್ಮ ರೂಮ್ ಕಾಶ್ಮೀರದಂತೆ ತಂಪಾಗಿಸುವ ಟಾಪ್ ಪೋರ್ಟಬಲ್ ಏರ್ ಕೂಲರ್‌ಗಳು!

Realme GT 7 India Launch
Realme GT 7 India Launch

ಈ ಸ್ಮಾರ್ಟ್ಫೋನ್ ಸರಣಿಯ Realme GT 7 Pro ಭಾರತದಲ್ಲಿ ಕಳೆದ ವರ್ಷ ನವೆಂಬರ್ 2024 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು ಈಗ Realme GT 7 ಬಾರಿಯಾಗಿದೆ. ಪ್ರಸ್ತುತ ಬಿಡುಗಡೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಸ್ಪಷ್ಟ ಟೈಮ್‌ಲೈನ್ ಇಲ್ಲ ಆದರೆ ಇದು ಮುಂದಿನ ದಿನಗಳಲ್ಲಿ ನಡೆಯಲಿದೆ.

Realme GT 7 ಸ್ಮಾರ್ಟ್ ಫೋನ್ ನಿರೀಕ್ಷೆಗಳೇನು?

ಈ ಮುಂಬರಲಿರುವ Realme GT 7 ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು ಭಾರತದಲ್ಲೂ ಸರಿ ಸುಮಾರು ಅದೇ ಲುಕ್ ಮತ್ತು ಫೀಚರ್ ಹೊಂದಿರುವ ನಿರೀಕ್ಷೆಗಳಿವೆ. ಈ Realme GT 7 ಸ್ಮಾರ್ಟ್ಫೋನ್ 6.78 ಇಂಚಿನ FHD+ OLED ಡಿಸ್ಪ್ಲೇಯೊಂದಿಗೆ 144Hz ರಿಫ್ರೆಶ್ ದರವನ್ನು ಬೆಂಬಲಿಸುವ ಸಾಧ್ಯತೆಯಿದೆ. ಡಿಸ್ಪ್ಲೇ 6500nits ಗರಿಷ್ಠ ಹೊಳಪು ಮತ್ತು 2600Hz ತ್ವರಿತ ಸ್ಪರ್ಶ ಮಾದರಿ ದರವನ್ನು ಜೊತೆಗೆ 4608Hz PWM ಮಬ್ಬಾಗಿಸುವಿಕೆಯನ್ನು ಬೆಂಬಲಿಸುತ್ತದೆ.

Realme GT 7 India Launch
Realme GT 7 India Launch

Realme GT 7 ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಸೋನಿ IMX896 ಪ್ರೈಮರಿ ಸೆನ್ಸರ್ ಜೊತೆಗೆ OIS ಮತ್ತು 8MP 112-ಡಿಗ್ರಿ ಅಲ್ಟ್ರಾ-ವೈಡ್ ಶೂಟರ್ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 16MP ಸೋನಿ IMX480 ಸೆನ್ಸರ್ ಇದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಪ್ರೊಸೆಸರ್ನಿಂದ ಚಾಲಿತವಾಗಿದ್ದು 16GB ವರೆಗೆ LPDDR5X RAM ಮತ್ತು 1TB ವರೆಗೆ UFS 4.0 ಇಂಟರ್ನಲ್ ಸ್ಟೋರೇಜ್ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಅಮೆಜಾನ್‌ನಲ್ಲಿ Samsung Galaxy S24 FE 5G ಬೆಲೆ ಕಡಿತ! ಹೊಸ ಡಿಸ್ಕೌಂಟ್ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

Realme GT 7 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ Realme UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ. Realme GT 7 ಫೋನ್ 7700mm ಚದರ VC ಕೂಲಿಂಗ್ ಚೇಂಬರ್ ಅನ್ನು ಹೊಂದಿದೆ ಮತ್ತು 100W ವೈರ್ಡ್ ಫಾಸ್ಟ್-ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7200mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ ಸಾಧನವು ನಿಜವಾಗಿಯೂ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುವುದಾಗಿ ನಿರೀಕ್ಷಿಸಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo