POCO F8 Series ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
POCO F8 Series ಇದೆ 26ನೇ ನವೆಂಬರ್ 2025 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.
POCO F8 Series ಬರೋಬ್ಬರಿ 100W ಫಾಸ್ಟ್ ಚಾರ್ಜ್ ಸಪೋರ್ಟ್ ಜೊತೆಗೆ ಬಿಡುಗಡೆಯಾಗಲಿದೆ.
POCO F8 Series ಬಿಡುಗಡೆಯನ್ನು ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಜನಪ್ರಿಯ ಪೊಕೊ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ POCO F8 Series ಅನ್ನು ಜಾಗತಿಕ ಬಿಡುಗಡೆಗೆ ಡೇಟ್ ಫಿಕ್ಸ್ ಮಾಡಿದೆ. ಕಂಪನಿ ಇದರ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಬಿಡುಗಡೆಯನ್ನು 26ನೇ ನವೆಂಬರ್ 2025 ರಂದು ಜಾಗತಿಕವಾಗಿ ಅನಾವರಣಗೊಳಿಸಲು ಸಜ್ಜಾಗಿದೆ. ಪೊಕೋ ಈ ಸರಣಿಯಲ್ಲಿ ಪ್ರಸ್ತುತ POCO F8 Pro ಮತ್ತು POCO F8 Ultra ಎಂಬ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲು ಸಿದ್ಧವಾಗಿದೆ ಆದರೆ ಆರಂಭಿಕ POCO F8 ಅನ್ನು ಇನ್ನೂ ಕೊಂಚ ಸಮಯದ ನಂತರ ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ. ಈ ಫೋನ್ಗಳ ಬಿಡುಗಡೆಯನ್ನು ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಸರಣಿಯು ಆಂಡ್ರಾಯ್ಡ್ 16 ಚಾಲಿತ ಆಪರೇಟಿಂಗ್ ಸಿಸ್ಟಮ್ ಜೊತೆಗೆ ಹೈಪರ್ OS3 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.
SurveyPOCO F8 Series ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ!
ಪೊಕೋದ ಈ ಮುಂಬರಲಿರುವ ಪವರ್ಫುಲ್ ಪ್ರೀಮಿಯಂ POCO F8 Series ಸ್ಮಾರ್ಟ್ಫೋನ್ ಬಿಡುಗಡೆಯನ್ನು ಕಂಪನಿ ಘೋಷಿಸಿದ್ದು ಇದೆ ತಿಂಗಳಲ್ಲಿ ಅಂದ್ರೆ 26ನೇ ನವೆಂಬರ್ 2025 ರಂದು ಜಾಗತಿಕವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಫೋನ್‌ಗಳು ದೊಡ್ಡ ಬ್ಯಾಟರಿ, ಪವರ್ಫುಲ್ ಆಪರೇಟಿಂಗ್ ಸಿಸ್ಟಮ್ ಮತ್ತು ಬಲವಾದ ಕ್ಯಾಮೆರಾವನ್ನು ಒಳಗೊಂಡಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಸದ್ಯದ ಸೋರಿಕೆಗಳ ಪ್ರಕಾರ POCO F8 Pro ಸ್ಮಾರ್ಟ್ಫೋನ್ 6.59 ಇಂಚಿನ OLED ಪ್ಯಾನೆಲ್ ಅನ್ನು ಹೊಂದಲಿದ್ದು ಕ್ರಮವಾಗಿ POCO F8 Ultra ಸ್ಮಾರ್ಟ್ಫೋನ್ 6.9 ಇಂಚಿನ OLED ಪ್ಯಾನೆಲ್ ಅನ್ನು ಹೊಂದಿರುತ್ತದೆ. ಈ ಎರಡೂ ಫೋನ್ಗಳು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
POCO F8 Series ಫೋನ್‌ಗಳ ಕ್ಯಾಮೆರಾ ಸೆನ್ಸರ್:
ಈ ಸೋರಿಕೆಯ ಪ್ರಕಾರ ಮೊದಲಿಗೆ POCO F8 Pro ಸ್ಮಾರ್ಟ್ಫೋನ್ Snapdragon 8 Elite ಅನ್ನು ಬಳಸಿದರೆ ಮತ್ತೊಂದು POCO F8 Ultra ಸಹ Snapdragon 8 Elite 8 Gen 5 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಬಹುದು. ಈ ಎರಡೂ ಫೋನ್‌ಗಳು ಮುಂಭಾಗದಲ್ಲಿ 20MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಹಿಂಭಾಗದ ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ POCO F8 Pro ಮಾದರಿಯು OIS ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 2x ಜೂಮ್‌ನೊಂದಿಗೆ 50MP ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
POCO F8 Ultra ಮಾದರಿಯು ಪ್ರೈಮರಿ, ಅಲ್ಟ್ರಾ-ವೈಡ್ ಮತ್ತು ಪೆರಿಸ್ಕೋಪ್ ಟೆಲಿಫೋಟೋ ಸೆಟಪ್‌ಗಳಿಗಾಗಿ ಮೂರು ಪ್ರತ್ಯೇಕ 50MP ಮೆಗಾಪಿಕ್ಸೆಲ್ ಸೆನ್ಸರ್ ನಿರೀಕ್ಷಿಸಲಾಗಿದೆ. ಬ್ಯಾಟರಿ ಮತ್ತು ಸಂಪರ್ಕಕ್ಕೆ ಸಂಬಂಧಿಸಿದಂತೆ ಈ ಪೊಕೊ ಫೋನ್ಗಳು ಸುಮಾರು 6210mAh ರಿಂದ 6500mAh ಬ್ಯಾಟರಿಯನ್ನು ಬರೋಬ್ಬರಿ 100W ಫಾಸ್ಟ್ ಚಾರ್ಜಿಂಗ್ ಜೊತೆಗೆ ನಿರೀಕ್ಷೆಯಿದೆ. ಈ ಫೋನ್‌ಗಳು ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಸಿಮ್ ಕಾರ್ಡ್ ಸ್ಲಾಟ್‌ನಂತಹ ಮೂಲಭೂತ ಸಂಪರ್ಕ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ ಮತ್ತು 5G ಸಕ್ರಿಯಗೊಳಿಸಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile