ನಾಳೆ Poco C81 ಮತ್ತು Poco C81x ಫೋನ್‌ಗಳ ಮಾರಾಟ ಶುರು! ಅಗ್ಗದ ಬೆಲೆಗೆ ಲಭ್ಯ
ನಾಳೆ (ಏಪ್ರಿಲ್ 27 ರಂದು) ಪೊಕೊದ ಈ ಮೊಬೈಲ್‌ಗಳ ಸೇಲ್ ಶುರು
ಈ ಹೊಸ ಫೋನ್‌ಗಳು Unisoc T7250 ಚಿಪ್‌ಸೆಟ್ ಪ್ರೊಸೆಸರ್ ಹೊಂದಿವೆ
ಪೊಕೊದ ಈ ಎರಡು ಫೋನ್‌ಗಳ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್ ಹೊಂದಿವೆ
ಇತ್ತೀಚಿಗೆ ಬಿಡುಗಡೆ ಆಗಿರುವ Poco C81 ಸ್ಮಾರ್ಟ್‌ಫೋನ್ ಸರಣಿಯ ಅಗ್ಗದ ಬೆಲೆಯ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿವೆ. ಅಂದಹಾಗೆ ಈ ಸರಣಿಯು ಪೊಕೊ C81 ಹಾಗೂ ಪೊಕೊ C81x ಈ ಎರಡು ಮೊಬೈಲ್‌ಗಳನ್ನು ಒಳಗೊಂಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ನಾಳೆ (ಏಪ್ರಿಲ್ 27 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್ ಪ್ರಾರಂಭ ಮಾಡಲಿವೆ. ಈ ಹೊಸ ಮೊಬೈಲ್‌ಗಳು Unisoc T7250 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವ ಜೊತೆಗೆ 64GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿವೆ. ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್ ಹೊಂದಿವೆ. ಅಂದಹಾಗೆ ಈ ಎರಡು ಫೋನ್‌ಗಳು ಆಕರ್ಷಕ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಪೊಕೊ C81 ಹಾಗೂ ಪೊಕೊ C81x ಫೋನ್‌ಗಳ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : 55 ಇಂಚಿನ ಈ LG ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಭಾರೀ ಇಳಿಕೆ! ಜಬರ್ದಸ್ತ್ ಫೀಚರ್ಸ್
Poco C81 ಸರಣಿಯ ಸೇಲ್ ಮಾಹಿತಿ
ಪೊಕೊ C81x ಸ್ಮಾರ್ಟ್‌ಫೋನ್ ಸರಣಿಯ ಪೊಕೊ C81 ಹಾಗೂ ಪೊಕೊ C81x ಮಾಡೆಲ್‌ಗಳು ಆಕರ್ಷಕ ಲುಕ್ ಪಡೆದಿವೆ. ಈ ಮೊಬೈಲ್‌ಗಳು ನಾಳೆ (ಏಪ್ರಿಲ್ 27 ರಂದು) ಮಧ್ಯಾಹ್ನ 12 ರಂದು ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಶುರು ಮಾಡಲಿವೆ. ಪೊಕೊ C81 ಫೋನಿನ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆ 10,999 ರೂ.ಗಳು ಆಗಿದೆ. ಹಾಗೆಯೇ ಪೊಕೊ C81x ಮೊಬೈಲ್‌ನ 3GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆ 9,999 ರೂ.ಗಳು ಆಗಿದೆ. ಇನ್ನು ಪೊಕೊ C81 ಫೋನ್ ಸನ್‌ಸೆಟ್ ಗೋಲ್ಡ್, ಇಲೈಟ್ ಬ್ಲ್ಯಾಕ್ ಹಾಗೂ ಸ್ಕೈ ಬ್ಲೂ ಕಲರ್ ಆಯ್ಕೆ ಪಡೆದಿದೆ. ಹಾಗೆಯೇ ಪೊಕೊ C81x ಸ್ಮಾರ್ಟ್‌ಫೋನ್ ಕ್ರಿಸ್ಟಲ್ ಬ್ಲ್ಯಾಕ್ ಹಾಗೂ ಐಸ್ ಬ್ಲೂ ಕಲರ್ ಆಯ್ಕೆ ಒಳಗೊಂಡಿದೆ.

ಪೊಕೊ C81 ಸರಣಿಯ ಫೀಚರ್ಸ್ ಮಾಹಿತಿ
ಪೊಕೊ C81 ಫೋನ್ 6.9 ಇಂಚಿನ HD+ ಡಿಸ್‌ಪ್ಲೇ ರಚನೆ ಪಡೆದಿದ್ದು, 720 x 1,600 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಇದಲ್ಲದೇ ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದ್ದು, 800 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ. ಪೊಕೊ C81x ಮೊಬೈಲ್ 6.8 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದ್ದು, 720 x 1,640 ಪಿಕ್ಸೆಲ್ ರೆಸಲ್ಯೂಶನ್ ಪಡೆದಿದೆ. ಇದು 120Hz ವರೆಗೆ ಅಡಾಪ್ಟಿವ್ ರಿಫ್ರೆಶ್ ರೇಟ್ ಹಾಗೂ 650 nits ವರೆಗೆ ಗರಿಷ್ಠ ಬ್ರೈಟ್ನೆಸ್ ಪಡೆದುಕೊಂಡಿದೆ. ಇದಲ್ಲದೇ ಎರಡು ಫೋನ್‌ಗಳು ಆಕ್ಟಾ ಕೋರ್ ಯುನಿಸಾಕ್ T7250 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಒಳಗೊಂಡಿವೆ.
ಪೊಕೊ C81 ಹಾಗೂ ಪೊಕೊ C81x ಈ ಎರಡು ಮೊಬೈಲ್‌ಗಳು ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿವೆ. ಈ ಫೋನ್‌ಗಳ ಪ್ರಾಥಮಿಕ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದ್ದು, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಪೊಕೊ C81x ಮೊಬೈಲ್ 5,200mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಇದರೊಂದಿಗೆ 15W ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ ಪೊಕೊ C81 ಮೊಬೈಲ್ 6,300mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಜೊತೆಗೆ 15W ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲ ಹೊಂದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile