55 ಇಂಚಿನ ಈ LG ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಭಾರೀ ಇಳಿಕೆ! ಜಬರ್ದಸ್ತ್‌ ಫೀಚರ್ಸ್‌

HIGHLIGHTS

ಅಮೆಜಾನ್‌ನಲ್ಲಿ 55 ಇಂಚಿನ ಎಲ್‌ಜಿ ಟಿವಿ ಬೆಲೆಯಲ್ಲಿ ಕಡಿತ

ಎಲ್‌ಜಿ ಸ್ಮಾರ್ಟ್‌ಟಿವಿಯು 2GB RAM ಜೊತೆಗೆ 8GB ROM ಹೊಂದಿದೆ

ಈ ಸ್ಮಾರ್ಟ್‌ಟಿವಿಯು 20W ಔಟ್‌ಪುಟ್‌ ಸೌಂಡ್‌ ವ್ಯವಸ್ಥೆ ಒಳಗೊಂಡಿದೆ

55 ಇಂಚಿನ ಈ LG ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಭಾರೀ ಇಳಿಕೆ! ಜಬರ್ದಸ್ತ್‌ ಫೀಚರ್ಸ್‌

LG ಕಂಪನಿಯ ಸ್ಮಾರ್ಟ್‌ ಟಿವಿಗಳಿಗೆ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್‌ ಇದೆ. ಸದ್ಯ ನೀವೇನಾದರೂ ಡಿಸ್ಕೌಂಟ್‌ ಬೆಲೆಯಲ್ಲಿ ಹೊಸದೊಂದು ಸ್ಮಾರ್ಟ್‌ ಟಿವಿ ಖರೀದಿಸಲು ಬಯಸಿದರೆ ನಿಮಗೆ ಇಲ್ಲಿದೆ ಸಿಹಿಸುದ್ದಿ. ಹೌದು, ಜನಪ್ರಿಯ ಇ ಕಾಮರ್ಸ್‌ Amazon ತಾಣದಲ್ಲಿ ಎಲ್‌ಜಿ ಸಂಸ್ಥೆಯ 55 ಇಂಚಿನ AI ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಟಿವಿ ಬೊಂಬಾಟ್‌ ರಿಯಾಯಿತಿ ದರದಲ್ಲಿ ಲಭ್ಯ ಇದೆ. ಖರೀದಿದಾರರು ಬ್ಯಾಂಕ್‌ ಆಫರ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ ಟಿವಿಯು ಡಾಲ್ಬಿ ಅಟ್ಮಾಸ್ ಸೌಂಡ್‌ ಸಪೋರ್ಟ್‌ ಜೊತೆಗೆ 20W ಔಟ್‌ಪುಟ್‌ ಸೌಂಡ್‌ ವ್ಯವಸ್ಥೆಯನ್ನು ಒಳಗೊಂಡಿದೆ. ಇನ್ನುಳಿದಂತೆ ಎಲ್‌ಜಿ ಯ ಈ ಸ್ಮಾರ್ಟ್‌ ಟಿವಿಗೆ ಅಮೆಜಾನ್‌ ತಾಣದಲ್ಲಿ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಮಾರುಕಟ್ಟೆಗೆ ಬರಲು ಸಿದ್ಧವಾಗಿ Vivo X300 FE ಮೊಬೈಲ್‌! ಈ ದಿನದಂದು ಬಿಡುಗಡೆ

LG ಕಂಪನಿಯ 55 ಇಂಚಿನ ಸ್ಮಾರ್ಟ್‌ಟಿವಿಗೆ ಡಿಸ್ಕೌಂಟ್‌

ಎಲ್‌ಜಿ ಸಂಸ್ಥೆಯ UA82 AI ಸರಣಿಯ 55 ಇಂಚಿನ 4K Ultra HD ಸ್ಮಾರ್ಟ್ ಟಿವಿ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. Amazon ತಾಣದಲ್ಲಿ ಈ ಸ್ಮಾರ್ಟ್‌ ಟಿವಿಯ ಮೂಲ ಬೆಲೆ 66,290 ರೂಗಳು ಆಗಿದ್ದು ಸದ್ಯ 40,990 ರೂಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ.

LG

ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್‌

ಎಲ್‌ಜಿ ಸಂಸ್ಥೆಯ ಈ ಸ್ಮಾರ್ಟ್‌ಟಿವಿಯು 55 ಇಂಚಿನ 4K Ultra HD ಸ್ಕ್ರೀನ್‌ ಅನ್ನು ಪಡೆದಿದೆ. ಈ ಟಿವಿ ಸ್ಕ್ರೀನ್‌ 3,840 x 2,160 ಪಿಕ್ಸಲ್‌ ರೆಸಲ್ಯೂಶನ್‌ ಜೊತೆಗೆ 4K ಸೂಪರ್ ಅಪ್‌ಸ್ಕೇಲಿಂಗ್ ಸಪೋರ್ಟ್‌ ಹೊಂದಿದೆ. ಹಾಗೆಯೇ ಇದು HDR10+ ಸಪೋರ್ಟ್‌, ಫಿಲ್ಮ್‌ಮೇಕರ್ ಮೋಡ್ ಗಳಂತಹ ಆಯ್ಕೆಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ ಟಿವಿಯು ಅಲ್ಫಾ 7 AI ಪ್ರೊಸೆಸರ್ 4K Gen8 ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ ಹಾಗೂ ಇಂಟೆಲಿಜೆಂಟ್ ವಾಯ್ಸ್ ರೆಕಗ್ನಿಷನ್, AI ಚಾಟ್‌ಬಾಟ್, ಗೂಗಲ್‌ ಹೋಮ್‌, ಆಪಲ್‌ ಏರ್‌ಪ್ಲೇ ಸೌಲಭ್ಯಗಳನ್ನು ಪಡೆದುಕೊಂಡಿದೆ. ಸ್ಥಿರ ವೈರ್ಡ್ ಇಂಟರ್ನೆಟ್‌ಗಾಗಿ ಈಥರ್ನೆಟ್ ಇನ್‌ಪುಟ್‌ ಜೊತೆಗೆ ವೈ-ಫೈ, ಬ್ಲೂಟೂತ್ 5.0, ಮತ್ತು 3 HDMI ಪೋರ್ಟ್‌ ಆಯ್ಕೆಗಳನ್ನು ಪಡೆದಿದೆ.

ಈ ಸ್ಮಾರ್ಟ್‌ ಟಿವಿಯು ಅಮೆಜಾನ್‌ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಸೋನಿ ಲೈವ್, ಜಿಯೋಹಾಟ್‌ಸ್ಟಾರ್, ಸನ್‌ನೆಕ್ಸ್ಟ್‌, Zee5 ಸೇರಿದಂತೆ ಮ್ಯೂಸಿಕ್‌ ಚಾನೆಲ್‌ಗಳ ಸಪೋರ್ಟ್‌ ಸಹ ಹೊಂದಿದೆ. ಇನ್ನು ಈ ಟಿವಿಯ ಸೌಂಡ್‌ ಸಹ ಅತ್ಯುತ್ತಮವಾಗಿದ್ದು ಇದು 20 W ವಾಯ್ಸ್‌ ಔಟ್‌ಪುಟ್ ಒಳಗೊಂಡಿದೆ. ಹಾಗೆಯೇ ಹಾರ್ಡ್ ಡ್ರೈವ್‌ಗಳು ಮತ್ತು ಇತರ USB ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು 1 USB ಪೋರ್ಟ್‌ಗಳು ವ್ಯವಸ್ಥೆ ಹೊಂದಿದೆ. ಅಲ್ಲದೇ ಇದು 2 GB RAM ಜೊತೆಗೆ 8 GB ROM ಆಯ್ಕೆ ಒಳಗೊಂಡಿದೆ.

Disclosure: This Article Contains Affiliate Links

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo