ಬಜೆಟ್ ದರದ Oppo K14x 5G ಮೊಬೈಲ್ ಈಗ ಇನ್ನಷ್ಟು ರಿಯಾಯಿತಿ ಬೆಲೆಗೆ ಲಭ್ಯ!
ಫ್ಲಿಪ್‌ಕಾರ್ಟ್‌ನಲ್ಲಿ ಒಪ್ಪೋ K14x ಬಿಗ್ ಡಿಸ್ಕೌಂಟ್ ಪಡೆದಿದೆ
ಒಪ್ಪೋ K14x 5G ಫೋನ್ 6,500mAh ಬ್ಯಾಟರಿ ಪಡೆದುಕೊಂಡಿದೆ
ಒಪ್ಪೋದ ಈ ಮೊಬೈಲ್ MediaTek Dimensity 6300 ಪ್ರೊಸೆಸರ್ ಹೊಂದಿದೆ
ಒಪ್ಪೋ ಕಂಪನಿಯ ಇತ್ತೀಚಿನ Oppo K14x 5G ಸ್ಮಾರ್ಟ್‌ಫೋನ್ ಬಜೆಟ್ ದರದಲ್ಲಿ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಇದೀಗ ಒಪ್ಪೋ K14x 5G ಮೊಬೈಲ್ ಬೆಲೆಯಲ್ಲಿ ಭರ್ಜರಿ ಇಳಿಕೆ ಕಾಣಿಸಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಒಪ್ಪೋ ಸಂಸ್ಥೆಯ ಈ ಮೊಬೈಲ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ 6,500mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಹೊಂದಿದೆ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಒಪ್ಪೋ K14x 5G ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಅಗ್ಗದ ಬೆಲೆಯಲ್ಲಿ ಬರಲಿದೆ Realme Narzo 100 Lite 5G ಮೊಬೈಲ್! ಅಚ್ಚರಿ ಮೂಡಿಸಿದ ಫೀಚರ್ಸ್
Oppo K14x 5G ಬೆಲೆಯಲ್ಲಿ ಭಾರೀ ಇಳಿಕೆ
ಒಪ್ಪೋ ಕಂಪನಿಯ ಒಪ್ಪೋ K14x 5G ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 4GB + 64GB ವೇರಿಯಂಟ್ ಬೆಲೆ 19,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 14,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಈ ಫೋನ್ ಪ್ರಿಸ್ಮ್ ವೈಲೆಟ್ ಗ್ರೀನ್ ಹಾಗೂ ಐಸ್ ಬ್ಲೂ ಕಲರ್ ಆಯ್ಕೆ ಪಡೆದುಕೊಂಡಿದೆ.

Oppo K14x 5G ಫೀಚರ್ಸ್ ಮಾಹಿತಿ
ಒಪ್ಪೋ K14x 5G ಸ್ಮಾರ್ಟ್‌ಫೋನ್ 6.7 ಇಂಚಿನ HD+ LCD ಡಿಸ್‌ಪ್ಲೇ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಜೊತೆಗೆ 1125 nits ಬ್ರೈಟ್ನೆಸ್ ಸಪೋರ್ಟ್ ಒಳಗೊಂಡಿದೆ. ಇದರೊಂದಿಗೆ ಈ ಮೊಬೈಲ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ Android 15 ಓಎಸ್ ಸಪೋರ್ಟ್ ಕೂಡಾ ಹೊಂದಿದೆ. ಅಲ್ಲದೇ ಇದು 4GB + 128GB ಹಾಗೂ 6GB + 128GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ 6,500mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 45W ಫಾಸ್ಟ್ ಸಪೋರ್ಟ್ ಸಹ ಪಡೆದಿದೆ.
ಇನ್ನು ಒಪ್ಪೋ K14x 5G ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾ 50MP ಸೆನ್ಸಾರ್ ಸೌಲಭ್ಯ ಪಡೆದಿದ್ದು, ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್ ಸೌಲಭ್ಯ ಪಡೆದಿದೆ. ಅದೇ ರೀತಿ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 5MP ಕ್ಯಾಮೆರಾ ರಚನೆಯನ್ನು ಒದಗಿಸಲಾಗಿದೆ. ಇದು Dual-View, AI ಪೋರ್ಟ್ರೇಟ್ ಮೋಡ್, AI ರೀಕಂಪೋಸ್ ಮತ್ತು AI ಎರೇಸರ್ 2.0 ಸೇರಿದಂತೆ ಕೆಲವು ಆಯ್ಕೆಗಳನ್ನು ಒಳಗೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile