ಭಾರತದಲ್ಲಿ OPPO Find X9 Ultra ಮೊಬೈಲ್‌ ಬಿಡುಗಡೆ! 200MP ಕ್ಯಾಮೆರಾ ಹೈಲೈಟ್‌

ಭಾರತದಲ್ಲಿ OPPO Find X9 Ultra ಮೊಬೈಲ್‌ ಬಿಡುಗಡೆ! 200MP ಕ್ಯಾಮೆರಾ ಹೈಲೈಟ್‌

ಜನಪ್ರಿಯ ಒಪ್ಪೋ ಸಂಸ್ಥೆಯು ತನ್ನ ಹೊಸ OPPO Find X9 Ultra ಸ್ಮಾರ್ಟ್‌ಫೋನ್‌ ಅನ್ನು ಇಂದು (ಮೇ 21 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿರುವ ಜೊತೆಗೆ 7,050mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಒಳಗೊಂಡಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಈ ಮೊಬೈಲ್‌ ಕ್ಯಾನ್ಯನ್ ಆರೆಂಜ್ ಮತ್ತು ಟಂಡ್ರಾ ಉಂಬರ್ ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಪಡೆದಿದೆ. ಹಾಗಾದರೆ ಒಪ್ಪೋ ಫೈಂಡ್‌ X9 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಬೆಲೆ, ಮಾರಾಟ, ಫೀಚರ್ಸ್‌ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 6,000mAh ಬ್ಯಾಟರಿ ಇರುವ POCO C85 5G ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

OPPO Find X9 Ultra ಮೊಬೈಲ್‌ ಬೆಲೆ ಮತ್ತು ಲಭ್ಯತೆ

ನೂತನ ಒಪ್ಪೋ ಫೈಂಡ್‌ X9 ಅಲ್ಟ್ರಾ ಮೊಬೈಲ್‌ ಫ್ಲ್ಯಾಗ್‌ಶಿಪ್‌ ಪ್ರೈಸ್‌ಟ್ಯಾಗ್‌ ಪಡೆದಿದ್ದು ಈ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್‌ನ ಆರಂಭಿಕ 12GB RAM + 512GB ಸ್ಟೋರೇಜ್ ವೇರಿಯಂಟ್‌ ಬೆಲೆ 1,69,999 ರೂ.ಗಳು ಆಗಿದೆ. ಅಂದಹಾಗೆ ಈ ಫೋನ್‌ ಭಾರತದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಆನ್‌ಲೈನ್ ಸ್ಟೋರ್ ಮೂಲಕ ಮುಂಗಡ-ಆರ್ಡರ್‌ಗೆ ಲಭ್ಯವಿದೆ. ಇನ್ನು ಈ ಮೊಬೈಲ್‌ ಕ್ಯಾನ್ಯನ್ ಆರೆಂಜ್ ಮತ್ತು ಟಂಡ್ರಾ ಉಂಬರ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Oppo Find X9 Ultra

ಒಪ್ಪೋ ಫೈಂಡ್‌ X9 ಅಲ್ಟ್ರಾ ಫೀಚರ್ಸ್‌ ಹೀಗಿವೆ

ನೂತನ ಒಪ್ಪೋ ಫೈಂಡ್‌ X9 ಅಲ್ಟ್ರಾ ಮೊಬೈಲ್ 6.82 inch QHD+ AMOLED ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್‌ 1,800 nits ಬ್ರೈಟ್ನೆಸ್‌ ಹೊಂದಿದ್ದು 1,440×3,168 ಪಿಕ್ಸೆಲ್‌ ರೆಸಲ್ಯೂಶನ್‌ ಒಳಗೊಂಡಿದೆ. ಇದರ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 12GB RAM + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಹಾಗೆಯೇ ಇದು ಆಂಡ್ರಾಯ್ಡ್ 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಒಪ್ಪೋ ಫೈಂಡ್‌ X9 ಅಲ್ಟ್ರಾ ಸ್ಮಾರ್ಟ್‌ಫೋನ್‌ Hasselblad-tuned ಕ್ವಾಡ್‌ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಆಗಿದ್ದು ಸೆಕೆಂಡರಿ ಕ್ಯಾಮೆರಾ 50MP ಸೆನ್ಸಾರ್‌ ಸೌಲಭ್ಯ ಪಡೆದಿದೆ. ಹಾಗೆಯೇ ಉಳಿದೆರಡು ಕ್ಯಾಮೆರಾಗಳು 200MP + 50MP ಸೆನ್ಸಾರ್ ಒಳಗೊಂಡಿವೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50MP ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಮೊಬೈಲ್‌ 7,050mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 100W ವೈರ್ಡ್‌ ಫಾಸ್ಟ್ ಚಾರ್ಜಿಂಗ್‌ ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್‌ ಬೆಂಬಲ ಸಹ ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile