Flipkart ಆಯೋಜಿಸಿರುವ ವಿಶೇಷ ಸೇಲ್ನಲ್ಲಿ ಆಯ್ದ ಮೊಬೈಲ್ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ಆ ಪೈಕಿ ಒಪ್ಪೋ ಕಂಪನಿಯ OPPO F35 ಪ್ರೊ ಸ್ಮಾರ್ಟ್ಫೋನ್ ಸಹ ಸ್ಪೆಷಲ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್ಗಳ ಕೊಡುಗೆಗಳು ಹಾಗೂ ಎಕ್ಸ್ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ MediaTek Dimensity 7360 ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್ಫೋನ್ 8,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್ಕಾರ್ಟ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ಒಪ್ಪೋ F35 ಪ್ರೊ ಸ್ಮಾರ್ಟ್ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Vi ಟೆಲಿಕಾಂನ ಈ ಜನಪ್ರಿಯ ರೀಚಾರ್ಜ್ ಪ್ಲಾನ್ ಬೆಲೆಯಲ್ಲಿ ಪರಿಷ್ಕರಣೆ! ಇಲ್ಲಿದೆ ಮಾಹಿತಿ
ಪ್ರೀಮಿಯಂ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ಒಪ್ಪೋ F35 ಪ್ರೊ ಮೊಬೈಲ್ ಫ್ಲಿಪ್ಕಾರ್ಟ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 6GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 74,999 ರೂ.ಗಳು ಆಗಿದ್ದು, ಆದರೆ ಆಫರ್ನಲ್ಲಿ ಪ್ರಸ್ತುತ ಈ ಮೊಬೈಲ್ ಬ್ಯಾಂಕ್ ಆಫರ್ಗಳ ಮೂಲಕ 45,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಸನ್ರೈಸ್ ಆರೆಂಜ್, ಬ್ರೌನ್ ಹಾಗೂ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು.
ಒಪ್ಪೋ F35 ಪ್ರೊ ಸ್ಮಾರ್ಟ್ಫೋನ್ 6.78 ಇಂಚಿನ 1.5K LTPS OLED ಡಿಸ್ಪ್ಲೇ ಹೊಂದಿದ್ದು, ಇದರೊಂದಿಗೆ ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಪಡೆದಿದೆ. ಹಾಗೆಯೇ ಈ ಫೋನ್ MediaTek Dimensity 7360 ಪ್ರೊಸೆಸರ್ ಪವರ್ ಪಡೆದಿದೆ. ಈ ಸ್ಮಾರ್ಟ್ಫೋನ್ 8,000mAh ಬ್ಯಾಟರಿಯನ್ನು ಪಡೆದಿದ್ದು, ದೀರ್ಘಾವಧಿ ಬ್ಯಾಕ್ಅಪ್ ಒದಗಿಸಲಿದೆ.
ಒಪ್ಪೋ F35 ಪ್ರೊ ಸ್ಮಾರ್ಟ್ಫೋನ್ ಹಿಂಬದಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಹಾಗೂ ಸೆಕೆಂಡರಿ ಕ್ಯಾಮೆರಾವು 8MP ಕ್ಯಾಮೆರಾ ಸೌಲಭ್ಯ ಪಡೆದಿದೆ. ಈ ಫೋನ್ 50MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಅಲ್ಲದೇ IP66/ IP68/ IP69K ರೇಟಿಂಗ್ ಸೌಲಭ್ಯದೊಂದಿಗೆ ನೀರು ಮತ್ತು ಧೂಳಿನ ವಿರುದ್ಧದ ರಕ್ಷಣಾ ಪ್ರಮಾಣೀಕರಣವನ್ನು ಪಡೆದಿದೆ.