Moto G77 Power sale in India
Flipkart ಆಯೋಜಿಸಿರುವ ವಿಶೇಷ ಸೇಲ್ನಲ್ಲಿ ಆಯ್ದ ಮೊಬೈಲ್ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ಆ ಪೈಕಿ ಮೊಟೊರೊಲಾ ಕಂಪನಿಯ Moto G77 Power ಸ್ಮಾರ್ಟ್ಫೋನ್ ಸಹ ಸ್ಪೆಷಲ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್ಗಳ ಕೊಡುಗೆಗಳು ಹಾಗೂ ಎಕ್ಸ್ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್ಫೋನ್ 7,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್ಕಾರ್ಟ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ಮೊಟೊ G77 ಪವರ್ ಸ್ಮಾರ್ಟ್ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಹೊಸ Lava Virat Curve ಖರೀದಿಗೆ ಇದುವೇ ಅತ್ಯುತ್ತಮ ಸಮಯ! ಭರ್ಜರಿ ಆಫರ್ ಲಭ್ಯ
ಪ್ರೀಮಿಯಂ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ಮೊಟೊ G77 ಪವರ್ ಮೊಬೈಲ್ ಫ್ಲಿಪ್ಕಾರ್ಟ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 4GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 41,999 ರೂ.ಗಳು ಆಗಿದ್ದು, ಆದರೆ ಆಫರ್ನಲ್ಲಿ ಪ್ರಸ್ತುತ ಈ ಮೊಬೈಲ್ ಬ್ಯಾಂಕ್ ಆಫರ್ಗಳ ಮೂಲಕ 18,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು Pantone Fuchsia Red, Pantone Impenetrable ಮತ್ತು Pantone Nautical Blue ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು.
ಮೊಟೊ G77 ಪವರ್ ಮೊಬೈಲ್ 6.72 ಇಂಚಿನ ಪೂರ್ಣ HD+ ಡಿಸ್ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಜೊತೆಗೆ 1,050 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 8GB + 128GB ವೇರಿಯಂಟ್ಗಳ ಆಯ್ಕೆ ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ Android 16 ಆಧಾರಿತ ಹಲೋ UI ನೊಂದಿಗೆ ಕಾರ್ಯನಿರ್ವಹಿಸಲಿದೆ.
ಹಾಗೆಯೇ ಮೊಟೊ G77 ಪವರ್ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ LYT-600 ಸೆನ್ಸಾರ್ ಅನ್ನು ಹೊಂದಿದ್ದು, ದ್ವಿತೀಯ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿವೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಇದು 7,000mAh ಬ್ಯಾಟರಿ ಬ್ಯಾಕ್ಅಪ್ ಸಪೋರ್ಟ್ ಜೊತೆಗೆ 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.