Jio vs Airtel Rs 349 Prepaid Recharge Plan Validity Calling Data and other benefits
Airtel vs Jio: ಟೆಲಿಕಾಂ ವಲಯದಲ್ಲಿ ಏರ್ಟೆಲ್ ಮತ್ತು ಜಿಯೋ ಲೀಡಿಂಗ್ ಸ್ಥಾನದಲ್ಲಿರುವ ಕಂಪನಿಗಳಾಗಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಎರಡೂ ಟೆಲಿಕಾಂಗಳು ವಿವಿಧ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಅದರಲ್ಲೂ ಹೆಚ್ಚಿನ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ ಕೆಲವು ಪ್ಲಾನ್ಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಪೈಕಿ ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಸಂಸ್ಥೆಗಳ 3599 ರೂ.ಗಳ ರೀಚಾರ್ಜ್ ಯೋಜನೆಗಳು ಒಂದೇ ಪ್ರೈಸ್ಟ್ಯಾಗ್ ಹೊಂದಿದ್ದರೂ, ಡೇಟಾ ಮತ್ತು ವ್ಯಾಲಿಡಿಟಿ ವಿಚಾರದಲ್ಲಿ ವ್ಯತ್ಯಾಸ ಹೊಂದಿವೆ. ಹಾಗಾದರೆ 3599 ರೂ.ಗಳ ಬೆಲೆಯ ಈ ಎರಡು ರೀಚಾರ್ಜ್ ಯೋಜನೆಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ? ಇಲ್ಲಿದೆ ಸಂಪೂರ್ಣ ಹೋಲಿಕೆ.
Also Read : ಹೊಸ Lava Virat Curve ಖರೀದಿಗೆ ಇದುವೇ ಅತ್ಯುತ್ತಮ ಸಮಯ! ಭರ್ಜರಿ ಆಫರ್ ಲಭ್ಯ
ಭಾರ್ತಿ ಏರ್ಟೆಲ್ನ 3599 ರೂ.ಗಳ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸಿಗಲಿದೆ. ಈ ಪ್ರೀಪೇಯ್ಡ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ವಾರ್ಷಿಕ ವ್ಯಾಲಿಡಿಟಿ ಅವಧಿಯಲ್ಲಿ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ಸಿಗುತ್ತದೆ. ಇದರ ಜತೆಗೆ ಅಡೊಬ್ ಎಕ್ಸ್ಪ್ರೆಸ್ ಪ್ರಿಮಿಯಮ್ ಚಂದಾದಾರಿಕೆ ಸಹ ದೊರೆಯುತ್ತದೆ. ಹಾಗೆಯೇ ಉಚಿತ ಹೆಲೋ ಟ್ಯೂನ್ ಸೌಲಭ್ಯ ಸಹ ಸಿಗಲಿದೆ.
ರಿಲಯನ್ಸ್ ಜಿಯೋದ 3599 ರೂ.ಗಳ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯ. ಈ ಪ್ರೀಪೇಯ್ಡ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ವ್ಯಾಲಿಡಿಟಿ ಅವಧಿಯಲ್ಲಿ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ಸಿಗುತ್ತದೆ. ಇದರ ಜತೆಗೆ 12 ತಿಂಗಳ ಕಾನ್ವಾ ಪ್ರೊ ಲೈಟ್ ಚಂದಾದಾರಿಕೆ ಸಹ ದೊರೆಯುತ್ತದೆ.
3599 ರೂ.ಗಳ ಪ್ರೈಸ್ಟ್ಯಾಗ್ನಲ್ಲಿ ಜಿಯೋ ಹಾಗೂ ಏರ್ಟೆಲ್ನ ಯೋಜನೆಗಳು ಆಕರ್ಷಕ ಎನಿಸಿವೆ. ಅದಾಗ್ಯೂ, ಅಧಿಕ ದೈನಂದಿನ ಡೇಟಾ ಬಯಸುವವರಿಗೆ ಜಿಯೋ ಪ್ಲಾನ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಜಿಯೋ ಯೋಜನೆಯಲ್ಲಿ 12 ತಿಂಗಳ ಕಾನ್ವಾ ಪ್ರೊ ಲೈಟ್ ಚಂದಾದಾರಿಕೆ ಆಯ್ಕೆ ನೀಡಲಾಗಿದೆ. ಅದೇ ರೀತಿ ಏರ್ಟೆಲ್ ಬಳಕೆದಾರರಿಗೆ ಅದರ 3599 ರೂ.ಗಳ ಪ್ಲಾನ್ ವಾರ್ಷಿಕ ಅವಧಿಗೆ ಸೂಕ್ತವಾಗಿರಬಹುದು. ವಿಶೇಷವಾಗಿ ಅಡೊಬ್ ಎಕ್ಸ್ಪ್ರೆಸ್ ಪ್ರಿಮಿಯಮ್ ಚಂದಾದಾರಿಕೆ ಸಹ ಗ್ರಾಹಕರಿಗೆ ಲಭ್ಯವಾಗಲಿದೆ.