Buy Newest Google Pixel 11 phone lowest price on Flipkart BBD Sale
Flipkart ಆಯೋಜಿಸಿರುವ ವಿಶೇಷ ಸೇಲ್ನಲ್ಲಿ ಆಯ್ದ ಮೊಬೈಲ್ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ಆ ಪೈಕಿ ಗೂಗಲ್ ಕಂಪನಿಯ Google Pixel 11 ಸ್ಮಾರ್ಟ್ಫೋನ್ ಸಹ ಸ್ಪೆಷಲ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್ಗಳ ಕೊಡುಗೆಗಳು ಹಾಗೂ ಎಕ್ಸ್ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ ಗೂಗಲ್ ಟೆನ್ಸರ್ G6 ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್ಫೋನ್ 4,985mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್ಕಾರ್ಟ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ಗೂಗಲ್ ಪಿಕ್ಸೆಲ್ 11 ಸ್ಮಾರ್ಟ್ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Airtel ಗ್ರಾಹಕರಿಗೆ ಗುಡ್ನ್ಯೂಸ್! ಯೂಟ್ಯೂಬ್ ಜೊತೆ ಹೊಸ ಪಾಲುದಾರಿಕೆ; ಆಕರ್ಷಕ ಪ್ರಯೋಜನ
ಪ್ರೀಮಿಯಂ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ಗೂಗಲ್ ಪಿಕ್ಸೆಲ್ 11 ಮೊಬೈಲ್ ಫ್ಲಿಪ್ಕಾರ್ಟ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 12GB + 512GB ಸ್ಟೋರೇಜ್ ವೇರಿಯಂಟ್ ಬೆಲೆ 1.04,999 ರೂ.ಗಳು ಆಗಿದ್ದು, ಆದರೆ ಆಫರ್ನಲ್ಲಿ ಪ್ರಸ್ತುತ ಈ ಮೊಬೈಲ್ ಬ್ಯಾಂಕ್ ಆಫರ್ಗಳ ಮೂಲಕ 99,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಪಿಸ್ತಾ, ಹೈಬಿಸ್ಕಸ್, ಫ್ರಾಸ್ಟ್ ಮತ್ತು ಅಬ್ಸಿಡಿಯನ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು.
ಗೂಗಲ್ ಪಿಕ್ಸೆಲ್ 11 ಫೋನ್ 6.3 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಅನ್ನು ಹೊಂದಿದ್ದು, ಇದರ ಸ್ಕ್ರೀನ್ 120 Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್ ಸೌಲಭ್ಯ ಪಡೆದಿದೆ. ಹಾಗೆಯೇ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಜೊತೆಗೆ 3,000 ನಿಟ್ಗಳ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ. ಅಂದಹಾಗೆ ಈ ಫೋನ್ ಗೂಗಲ್ ಟೆನ್ಸರ್ G6 ಪ್ರೊಸೆಸರ್ ಜೊತೆಗೆ ಟೈಟಾನ್ M3 ಸೆಕ್ಯುರಿಟಿ ಚಿಪ್ಸೆಟ್ ಪ್ರೊಸೆಸರ್ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು 12GB RAM + 512GB ವರೆಗಿನ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ.
ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 13MP ಮತ್ತು 10.8MP ಸೆನ್ಸಾರ್ ಬಲ ಪಡೆದುಕೊಂಡಿವೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 10.5MP ಕ್ಯಾಮೆರಾ ರಚನೆ ಒಳಗೊಂಡಿದೆ. ಇದು 4,985mAh ಬ್ಯಾಟರಿ ಸೌಲಭ್ಯ ಪಡೆದಿದ್ದು, 30W ವೈರ್ಡ್ ಮತ್ತು 25W Qi 2.2 ಪಿಕ್ಸೆಲ್ಸ್ನ್ಯಾಪ್ ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.