Airtel ಗ್ರಾಹಕರಿಗೆ ಗುಡ್‌ನ್ಯೂಸ್! ಯೂಟ್ಯೂಬ್ ಜೊತೆ ಹೊಸ ಪಾಲುದಾರಿಕೆ; ಆಕರ್ಷಕ ಪ್ರಯೋಜನ

ಗ್ರಾಹಕರಿಗೆ ಮೊಬೈಲ್ ಡೇಟಾ ಎಂಬುದು ಈಗ ಕೇವಲ ಸಂಪರ್ಕದಲ್ಲಿರಲು ಮಾತ್ರ ಸೀಮಿತವಾಗಿಲ್ಲ. ಧಾರಾವಾಹಿ, ಸಿನಿಮಾಗಳನ್ನು ವೀಕ್ಷಿಸಲು, ಕಂಟೆಂಟ್ ಕ್ರಿಯೇಟರ್‌ಗಳನ್ನು ಫಾಲೋ ಮಾಡಲು, ಸಂಗೀತ ಆಲಿಸಲು ಮತ್ತು ಹೊಸ ವಿಷಯಗಳನ್ನು ಅನ್ವೇಷಿಸಲು ಇದು ಪ್ರಮುಖ ಮಾಧ್ಯಮವಾಗಿದೆ. ಈ ಬೃಹತ್ ಪ್ರಮಾಣದ ಬಳಕೆದಾರರ ಅಗತ್ಯವನ್ನು ಪೂರೈಸಲು ಹಾಗೂ- ತನ್ನ ಅತ್ಯುತ್ತಮ ಸೇವೆಗಳನ್ನು ಒದಗಿಸಲು, Airtel ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಯೂಟ್ಯೂಬ್ ಪ್ರೀಮಿಯಂ ತಲುಪಿಸಲು ಯೂಟ್ಯೂಬ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯು ಶಾರ್ಟ್ಸ್ ಸೇರಿದಂತೆ ಯಾವುದೇ ಜಾಹೀರಾತುಗಳಿಲ್ಲದ ಯೂಟ್ಯೂಬ್ ಅನುಭವ, ಬ್ಯಾಕ್ ಗ್ರೌಂಡ್ ಪ್ಲೇ, ಆಫ್‌ಲೈನ್ ಡೌನ್‌ಲೋಡ್‌ಗಳು ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಸೇವೆಗಳನ್ನು ಒದಗಿಸುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಕಡಿಮೆ ದರದಲ್ಲಿ ಅಧಿಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡೇಟಾ ಬೇಕಿದ್ರೆ, Jio ಸಂಸ್ಥೆಯ ಈ ಪ್ಲಾನ್‌ ಬೆಸ್ಟ್‌!

Airtel ಧಮಾಕಾ ಕೊಡುಗೆ

ಇಂದಿನ ಗ್ರಾಹಕರು ಮೊಬೈಲ್ ಬಳಸುವ ವಿಧಾನಕ್ಕೆ ಈ ಕೊಡುಗೆ ಹಿಡಿದ ಕನ್ನಡಿಯಾಗಿದೆ. ಕ್ರಿಯೇಟರ್‌ಗಳನ್ನು ಫಾಲೋ ಮಾಡಲು, ಕಾರ್ಯಕ್ರಮಗಳನ್ನು ವೀಕ್ಷಿಸಲು, ಸಂಗೀತ ಆಲಿಸಲು ಮತ್ತು ಹೊಸ ವಿಷಯಗಳನ್ನು ಹುಡುಕಲು ಡೇಟಾವೇ ಮೂಲಾಧಾರ. ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್, ಜೀ5 ಪ್ರೀಮಿಯಂ, ಸೋನಿ ಲೈವ್ ಸೇರಿದಂತೆ 18ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿರುವ ಏರ್‌ಟೆಲ್‌ನ 200 ರೂ.ಗಳ ಒಟಿಟಿ ಟಾಪ್-ಅಪ್ (30 ಜಿಬಿ ಹೆಚ್ಚುವರಿ ಡೇಟಾ ಜೊತೆಗೆ) ಲಿಸ್ಟ್‌ಗೆ ಈಗ ಯೂಟ್ಯೂಬ್ ಪ್ರೀಮಿಯಂ ಕೂಡ ಸೇರ್ಪಡೆಯಾಗಿದೆ.

Airtel

ಯೂಟ್ಯೂಬ್ ಪ್ರೀಮಿಯಂ ಸೇರ್ಪಡೆಯೊಂದಿಗೆ, ಏರ್‌ಟೆಲ್ ತನ್ನ ಪ್ರೀಪೇಯ್ಡ್ ಮನರಂಜನಾ ಕೊಡುಗೆಯನ್ನು ಮತ್ತಷ್ಟು ವಿಸ್ತರಿಸಿದೆ. ಸಿನಿಮಾಗಳು ಮತ್ತು ಕಾರ್ಯಕ್ರಮಗಳ ಸ್ಟ್ರೀಮಿಂಗ್‌ನಿಂದ ಹಿಡಿದು ಕ್ರಿಯೇಟರ್‌ಗಳ ವಿಡಿಯೋ ವೀಕ್ಷಣೆ, ಸಂಗೀತ ಆಲಿಸುವಿಕೆ ಹಾಗೂ ಹೊಸ ವಿಷಯಗಳ ಅನ್ವೇಷಣೆಯವರೆಗೆ ಗ್ರಾಹಕರು ಕಂಟೆಂಟ್ ಅನ್ನು ಬಳಸುವ ವಿವಿಧ ಮಾರ್ಗಗಳನ್ನು ಇದು ಒಟ್ಟುಗೂಡಿಸುತ್ತದೆ. ಡೇಟಾ, ಪ್ರೀಮಿಯಂ ಮನರಂಜನೆ ಮತ್ತು ಹಲವು ಡಿಜಿಟಲ್ ಅನುಭವಗಳನ್ನು ಒಂದೇ ಕೈಗೆಟುಕುವ ಪ್ಯಾಕ್‌ನಲ್ಲಿ ನೀಡುವ ಮೂಲಕ, ಏರ್‌ಟೆಲ್ ಕೇವಲ ಕನೆಕ್ಟಿವಿಟಿ ನೀಡುವುದನ್ನು ಮೀರಿ ಗ್ರಾಹಕರಿಗೆ ನಿತ್ಯದ ಜೀವನದಲ್ಲಿ ಹೆಚ್ಚು ಮೌಲ್ಯಯುತ ಹಾಗೂ ವಿಶಿಷ್ಟ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಿದೆ.

ಚಾಲ್ತಿಯಲ್ಲಿರುವ ಯಾವುದೇ ಪ್ರೀಪೇಯ್ಡ್ ಯೋಜನೆಗಳನ್ನು ಹೊಂದಿರುವ ಏರ್‌ಟೆಲ್ ಗ್ರಾಹಕರಿಗೆ ಈ ಟಾಪ್-ಅಪ್ ಲಭ್ಯವಿರುತ್ತದೆ. ಟಾಪ್-ಅಪ್ ಖರೀದಿಸಿದ ನಂತರ, ಗ್ರಾಹಕರು ಏರ್‌ಟೆಲ್ ಆಪ್‌ ನ Rewards ಮತ್ತು OTTs ವಿಭಾಗದ ಮೂಲಕ ಯೂಟ್ಯೂಬ್ ಪ್ರೀಮಿಯಂ ಅನ್ನು ಪಡೆದುಕೊಳ್ಳಬಹುದು. ಈ ಮನರಂಜನಾ ಪ್ರಯೋಜನಗಳು 28 ದಿನಗಳ ಮಾನ್ಯತೆ ಹೊಂದಿರುವ ಟಾಪ್-ಅಪ್ ಮುಕ್ತಾಯದವರೆಗೂ ಲಭ್ಯವಿರುತ್ತವೆ. ಆ ಬಳಿಕ ಸೇವೆಯನ್ನು ಮುಂದುವರಿಸಲು ಬಯಸಿದರೆ, ಗ್ರಾಹಕರು ಮತ್ತೊಮ್ಮೆ ಟಾಪ್-ಅಪ್ ಖರೀದಿಸಿ ಯೂಟ್ಯೂಬ್ ಪ್ರೀಮಿಯಂ ಸೌಲಭ್ಯವನ್ನು ಮರುಪಡೆದುಕೊಳ್ಳಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :