Vi ಟೆಲಿಕಾಂನ ಈ ಜನಪ್ರಿಯ ರೀಚಾರ್ಜ್ ಪ್ಲಾನ್ ಬೆಲೆಯಲ್ಲಿ ಪರಿಷ್ಕರಣೆ! ಇಲ್ಲಿದೆ ಮಾಹಿತಿ
ಜನಪ್ರಿಯ ವೊಡಾಫೋನ್ ಐಡಿಯಾ (Vi) ತನ್ನ 84 ದಿನಗಳ ವ್ಯಾಲಿಡಿಟಿ ಹೊಂದಿರುವ 859 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ಸದ್ದಿಲ್ಲದೇ ಪ್ರಿಪೇಯ್ಡ್ ಯೋಜನೆಗಳ ಲಿಸ್ಟ್ನಿಂದ ತೆಗೆದುಹಾಕಿದೆ. ಗ್ರಾಹಕರು 859 ರೂ.ಗಳ ಪ್ಲಾನ್ನ ಬದಲಾಗಿ ಇದೀಗ 899 ರೂ.ಗಳ ಯೋಜನೆ ರೀಚಾರ್ಜ್ ಆಯ್ಕೆ ಮಾಡಬೇಕಾಗಿದೆ. ಗ್ರಾಹಕರು ಈ ಪ್ಲಾನ್ಗಾಗಿ ಹೆಚ್ಚುವರಿಯಾಗಿ 40 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇನ್ನು ದರ ಹೆಚ್ಚಳ ಆಗಿದ್ದರೂ, ಪ್ಲಾನ್ನಲ್ಲಿ ಸಿಗುವ ಡೇಟಾ, ಕರೆ ಮತ್ತು ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.
SurveyAlso Read : ಹೊಸ Lava Virat Curve ಖರೀದಿಗೆ ಇದುವೇ ಅತ್ಯುತ್ತಮ ಸಮಯ! ಭರ್ಜರಿ ಆಫರ್ ಲಭ್ಯ
Vi 899 ರೂ.ಗಳ ಪ್ಲಾನ್ ಪ್ರಯೋಜನಗಳ ಮಾಹಿತಿ
ವೊಡಾಫೋನ್ ಐಡಿಯಾ ಟೆಲಿಕಾಂನ ಈ ಪ್ಲಾನ್ನ ಪ್ರಮುಖ ಪ್ರಯೋಜನವೆಂದರೆ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಆಗಿದೆ. ಈ ಅವಧಿಗೆ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಸಿಗುತ್ತದೆ. ಇದರ ಜೊತೆಗೆ, ಗ್ರಾಹಕರು ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯವನ್ನೂ ಪಡೆಯಬಹುದು. ಅರ್ಹ ಪ್ರದೇಶಗಳಲ್ಲಿ 5G ಡೇಟಾ ಬಳಕೆಯ ಸೌಲಭ್ಯವೂ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ಉಚಿತ ರಾತ್ರಿ ಡೇಟಾ, ವೀಕೆಂಡ್ ಡೇಟಾ ರೋಲ್ಓವರ್, ಬ್ಯಾಕಪ್ ಡೇಟಾ ಸೌಲಭ್ಯಗಳು ದೊರೆಯುತ್ತವೆ.

ವಿ ಟೆಲಿಕಾಂನ ಇತರೆ ಜನಪ್ರಿಯ ಯೋಜನೆಗಳು
ವೊಡಾಫೋನ್ ಐಡಿಯಾ ಸಂಸ್ಥೆಯ 799 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 77 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಅಲ್ಲದೇ ಈ ಯೋಜನೆಯಲ್ಲಿ ಬಳಕೆದಾರರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ ವೀಕೆಂಡ್ ಡೇಟಾ ರೋಲ್ಓವರ್ ಹಾಗೂ ರಾತ್ರಿ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ಸಿಗಲಿದೆ.
ಹಾಗೆಯೇ ವೊಡಾಫೋನ್ ಐಡಿಯಾ ಟೆಲಿಕಾಂನ 579 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದೆ. ಅಲ್ಲದೇ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಅಲ್ಲದೇ ಈ ಯೋಜನೆಯಲ್ಲಿ ಬಳಕೆದಾರರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ ವೀಕೆಂಡ್ ಡೇಟಾ ರೋಲ್ಓವರ್ ಹಾಗೂ ರಾತ್ರಿ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ಸಿಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್ಇಂಡಿಯಾ ಸಂಸ್ಥೆಯ ಗಿಜ್ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
