OPPO A5 Pro 5G vs OPPO K13 5G ಇವೆರಡರಲ್ಲಿ ಯಾವ ಸ್ಮಾರ್ಟ್ ಫೋನ್ ನಿಮ್ಮ ಕಾಸಿಗೆ ಬೆಲೆ ಕಟ್ಟುತ್ತೆ ಮತ್ತು ಏಕೆ ತಿಳಿಯಿರಿ!

OPPO A5 Pro 5G vs OPPO K13 5G ಇವೆರಡರಲ್ಲಿ ಯಾವ ಸ್ಮಾರ್ಟ್ ಫೋನ್ ನಿಮ್ಮ ಕಾಸಿಗೆ ಬೆಲೆ ಕಟ್ಟುತ್ತೆ ಮತ್ತು ಏಕೆ ತಿಳಿಯಿರಿ!
HIGHLIGHTS

ಭಾರತದಲ್ಲಿ OPPO A5 Pro 5G ಸ್ಮಾರ್ಟ್ ಫೋನ್ ಇಂದು bhartadಅಧಿಕೃತವಾಗಿ ಬಿಡುಗಡೆಯಾಗಿದೆ.

OPPO A5 Pro 5G vs OPPO K13 5G ಸ್ಮಾರ್ಟ್ ಫೋನ್‌ಗಳೊಂದಿಗೆ ಹೋಲಿಸಿ ನೋಡಿ ಯಾವುದು ಬೆಸ್ಟ್?

OPPO A5 Pro 5G vs OPPO K13 5G ಫೋನ್‌ಗಳಲ್ಲಿ ‌ಬೆಲೆ ಮತ್ತು ಫೀಚರ್‌ಗಳ ಆಧಾರದ ಮೇಲೆ ನಿಮ್ಮ ಆಯ್ಕೆ ಯಾವುದು?

OPPO A5 Pro 5G vs OPPO K13 5G Comparison: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ಒಪ್ಪೋ (OPPO) ಬ್ಯಾಕ್ ಟು ಬ್ಯಾಕ್ ಸ್ಮಾರ್ಟ್ ಫೋನ್ಗಳನ್ನು ಭಾರತದಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಿದೆ. ಇದರಡಿಯಲ್ಲಿ ಬಿಡುಗಡೆಯಾಗಿರುವ ಈ OPPO A5 Pro 5G vs OPPO K13 5G ಸ್ಮಾರ್ಟ್ ಫೋನ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಲೇಖಾನದಲ್ಲಿ ತಿಳಿಸಲಿದ್ದೇವೆ. ಇವೆರಡರಲ್ಲಿ ಯಾವ ಸ್ಮಾರ್ಟ್ ಫೋನ್ ನಿಮ್ಮ ಕಾಸಿಗೆ ಬೆಲೆ ಕಟ್ಟುತ್ತೆ ಮತ್ತು ಏಕೆ ಎಂಬ ಪ್ರಶ್ನೆಗೆ ಉತ್ತಮವನ್ನು ತಿಳಿಯಬಹುದು. ಹಾಗಾದ್ರೆ ಇವುಗಳ ಆಫರ್, ಬೆಲೆ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳ ಜೊತೆಗೆ ಒಂದಕ್ಕೊಂದು ಹೋಲಿಸಿ ನೋಡೋಣ.

OPPO A5 Pro 5G ಫೀಚರ್ ಮತ್ತು ವಿಶೇಷತೆಗಳೇನು?

OPPO A5 Pro 5G ಸ್ಮಾರ್ಟ್‌ಫೋನ್ ಸ್ಮಾರ್ಟ್ಫೋನ್‌ 120Hz ರಿಫ್ರೆಶ್ ರೇಟ್ನೊಂದಿಗೆ 6.67 ಇಂಚಿನ AMOLED (2392×1080 ಪಿಕ್ಸೆಲ್‌ಗಳು) FHD ಅನ್ನು ಹೊಂದಿದೆ. ಮತ್ತು 1000nits ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು 50MP ಪ್ರೈಮರಿ ಸೆನ್ಸರ್ ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ 8MP ಸೆಲ್ಫಿ ಸೆನ್ಸರ್ ಸಹ ಹೊಂದಿದೆ.

OPPO A5 Pro 5G vs OPPO K13 5G Comparison
OPPO A5 Pro 5G vs OPPO K13 5G Comparison

ಈ ಸ್ಮಾರ್ಟ್ ಫೋನ್ MediaTek Dimensity 6300 ಪ್ರೊಸೆಸರ್‌ನೊಂದಿಗೆ 8GB ವರೆಗಿನ RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. RAM ಬೂಸ್ಟ್ ತಂತ್ರಜ್ಞಾನ ಲಭ್ಯವಿದೆ ಮತ್ತು ಈ ಸ್ಮಾರ್ಟ್ ಫೋನ್ 45W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ದೊಡ್ಡ 5800mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಬಳಕೆದಾರರು ಪ್ರವೇಶಿಸಬಹುದಾದ AI ಟೂಲ್‌ಬಾಕ್ಸ್‌ನೊಂದಿಗೆ AI ವೈಶಿಷ್ಟ್ಯಗಳಿಗೆ ಬೆಂಬಲವಿದೆ.

ಇದನ್ನೂ ಓದಿ: Best Mini Air Conditioners: ಈ ಬೇಸಿಗೆಯಲ್ಲಿ ಕೈಗೆಟುಕುವ ಬೆಲೆಗೆ ಜಬರ್ದಸ್ತ್ ಮತ್ತು ಬೆಸ್ಟ್ ಮಿನಿ ಏರ್ ಕಂಡಿಷನರ್‌ ಮಾರಾಟ!

OPPO K13 5G ಫೀಚರ್ ಮತ್ತು ವಿಶೇಷತೆಗಳೇನು?

OPPO K13 5G ಸ್ಮಾರ್ಟ್ಫೋನ್‌ 120Hz ರಿಫ್ರೆಶ್ ರೇಟ್ನೊಂದಿಗೆ 6.67 ಇಂಚಿನ AMOLED (2392×1080 ಪಿಕ್ಸೆಲ್‌ಗಳು) FHD ಅನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ OPPO K13 5G ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು OIS ಜೊತೆಗೆ ಬಂದ್ರೆ ಮತ್ತೊಂದು 2MP ಡೆಪ್ತ್ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಮೆಗಾಪಿಕ್ಸೆಲ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್‌ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP65 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.

OPPO A5 Pro 5G vs OPPO K13 5G Comparison
OPPO A5 Pro 5G vs OPPO K13 5G Comparison

OPPO K13 5G ಸ್ಮಾರ್ಟ್ಫೋನ್‌ Qualcomm Snapdragon 6 Gen 4 ಪ್ರೊಸೆಸರ್‌ನೊಂದಿಗೆ ಬರುತ್ತದೆ. OPPO K13 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಆನ್‌ಬೋರ್ಡ್ ಮೆಮೊರಿ ಮತ್ತು 256GB ಸ್ಟೋರೇಜ್ ಹೊಂದಿದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Port ಮತ್ತು AGPS/GPS, GLONASS, BDS, ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್‌ 7000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

OPPO A5 Pro 5G vs OPPO K13 5G ಬೆಲೆ ಎಷ್ಟು?

OPPO A5 Pro 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 17,999 ರಿಂದ ಪ್ರಾರಂಭವಾದರೆ ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ 19,999 ರೂಗಳಾಗಿವೆ. ಆದರೆ ಆಸಕ್ತ ಬಳಕೆದಾರರು ಇದನ್ನು SBI Bank, IDFC Bank, BOB Bank, DBS Bank ಮತ್ತು Federal Bank ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಹೆಚ್ಚುವರಿಯ ಲಿಮಿಟೆಡ್ ಸಮಯದ ಡಿಸ್ಕೌಂಟ್ ಸಹ ಪಡೆಯಬಹುದು. ಈ ಮೂಲಕ OPPO A5 Pro 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಕೇವಲ 16,499 ರೂಗಳಿಗೆ ಖರೀದಿಸಬಹುದು.

OPPO K13 5G ಸ್ಮಾರ್ಟ್ಫೋನ್ ಪ್ರಸ್ತುತ ಎರಡು ಮಾದರಿಯಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಆರಂಭಿಕ 17,999 ರೂಗಳಿಗೆ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ 19,999 ರೂಗಳಿಗೆ ಪರಿಚಯಿಸಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು HDFC, SBI ಮತ್ತು ICICI ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1000 ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಈ ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಕೇವಲ 16,999 ರೂಗಳಿಗೆ ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo