ನಾಳೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ Redmi Note 17 Pro ಮೊಬೈಲ್ ಸರಣಿ; ಬೆಲೆ ಗಮನಿಸಿ
ನಾಳೆ (ಸೆ. 15 ರಂದು) ರೆಡ್ಮಿ ನೋಟ್ 17 ಪ್ರೊ ಸರಣಿ ಲಾಂಚ್
ರೆಡ್ಮಿ ನೋಟ್ 17 ಪ್ರೊ ಸರಣಿಯು 50MP ಕ್ಯಾಮೆರಾ ಪಡೆದಿರಲಿದೆ
ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಫೋನ್ 10,000mAh ಬ್ಯಾಟರಿ ಹೊಂದಿರಲಿದೆ
ಜನಪ್ರಿಯ ರೆಡ್ಮಿ ಕಂಪನಿಯು ತನ್ನ ಹೊಸ Redmi Note 17 Pro ಸ್ಮಾರ್ಟ್‌ಫೋನ್ ಸರಣಿ ಅನ್ನು ನಾಳೆ (ಸೆಪ್ಟೆಂಬರ್ 15 ರಂದು) ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಮುಂಬರುವ ಈ ಸರಣಿಯಲ್ಲಿ ರೆಡ್ಮಿ ನೋಟ್ 17 ಪ್ರೊ 5G ಮತ್ತು ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ 5G ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಈ ಫೋನ್‌ಗಳ ಬಿಡುಗಡೆ ಕುರಿತು ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಬಿಡುಗಡೆ ಮುನ್ನವೇ ಇದರ ನಿರೀಕ್ಷಿತ ಫೀಚರ್ಸ್ ಕುತೂಹಲ ಹೆಚ್ಚಿಸಿವೆ. ಹಾಗಾದರೇ ಈ ಸರಣಿಯ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : 7,000mAh ಬ್ಯಾಟರಿ ಸೌಲಭ್ಯ ಇರುವ Moto G37 Power ಮೊಬೈಲ್ ಬೆಲೆಯಲ್ಲಿ ಇದೀಗ ಭಾರೀ ಇಳಿಕೆ!
ನಾಳೆ Redmi Note 17 Pro ಬಿಡುಗಡೆ
ರೆಡ್ಮಿ ಮೊಬೈಲ್ ಸಂಸ್ಥೆಯ ನೂತನ ರೆಡ್ಮಿ ನೋಟ್ 17 ಪ್ರೊ ಸರಣಿಯ ಫೋನ್ ಲಾಂಚ್ ಮುನ್ನವೇ ಲೀಕ್ ಮಾಹಿತಿಗಳ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ಸರಣಿಯು ಭಾರತದಲ್ಲಿ ನಾಳೆ (ಸೆಪ್ಟೆಂಬರ್ 15 ರಂದು) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇನ್ನು ಈ ಮೊಬೈಲ್‌ಗಳು ಆಕರ್ಷಕ ಕಲರ್ ಆಯ್ಕೆ ಪಡೆದಿರಲಿದ್ದು, ಮೀಡ್‌ರೇಂಜ್ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ಅಂದಾಜಿಸಲಾಗಿದೆ.

ರೆಡ್ಮಿ ನೋಟ್ 17 ಪ್ರೊ ನಿರೀಕ್ಷಿತ ಫೀಚರ್ಸ್
ರೆಡ್ಮಿ ನೋಟ್ 17 ಪ್ರೊ 5G ಸ್ಮಾರ್ಟ್‌ಫೋನ್ 6.83 ಇಂಚಿನ 1.5K AMOLED ಡಿಸ್ಪ್ಲೇ ಹೊಂದಿರುವ ನಿರೀಕ್ಷೆಯಿದೆ. ಈ ಪರದೆಯು 120Hz ರಿಫ್ರೆಶ್ ರೇಟ್‌ಗೆ ಬೆಂಬಲ ನೀಡುತ್ತದೆ, ಗರಿಷ್ಠ 3,500 ನಿಟ್ಸ್‌ವರೆಗೆ ಬ್ರೈಟ್‌ನೆಸ್ ನೀಡಲಾಗುವುದು. ಜೊತೆಗೆ ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 6s Gen 4 ಚಿಪ್‌ಸೆಟ್ ಬಳಸಲಾಗಿದೆ. ಇದು 8GB RAM ಮತ್ತು 256GB UFS 3.1 ಸ್ಟೋರೇಜ್ ಆಯ್ಕೆಯು ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ಯಾಮೆರಾದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗಾಗಿ 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಇದು 8,340mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಮತ್ತು 67W ಹೈಪರ್‌ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ 5G ಫೀಚರ್ಸ್
ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ 5G ಫೋನ್ 6.83 ಇಂಚಿನ 1.5K AMOLED ಡಿಸ್ಪ್ಲೇ ಇರಲಿದೆ, 120Hz ರಿಫ್ರೆಶ್ ದರ ಮತ್ತು 3,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಜೊತೆಗೆ Gorilla Glass Victus 2 ರಕ್ಷಣೆಯೂ ಸಿಗಲಿದೆ. ಈ Snapdragon 6 Gen 5 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಫೋನ್, LPDDR5X RAM ಮತ್ತು UFS ಸ್ಟೋರೇಜ್ ಹೊಂದಿರಲಿದೆ. ಕ್ಯಾಮೆರಾದಲ್ಲಿ 50MP OIS ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಸೆಲ್ಫಿಗಾಗಿ 32MP ಫ್ರಂಟ್ ಕ್ಯಾಮೆರಾಗಳು. ಇದರೊಂದಿಗೆ 10,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇರಲಿದೆ, 100W ಹೈಪರ್‌ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ Android 16 ಆಧಾರಿತ HyperOS 3 ನಲ್ಲಿ ಕಾರ್ಯನಿರ್ವಹಿಸಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
