ಇಂದಿನಿಂದ iPhone 18 Pro ಮತ್ತು iPhone 18 Pro Max ಪ್ರೀ-ಆರ್ಡರ್‌ ಪ್ರಾರಂಭ; ಇಲ್ಲಿದೆ ಮಾಹಿತಿ

HIGHLIGHTS

ಇಂದಿನಿಂದ ಐಫೋನ್‌ 18 ಪ್ರೊ ಸರಣಿಯ ಪ್ರೀ-ಆರ್ಡರ್ ಶುರು

ಐಫೋನ್‌ 18 ಪ್ರೊ ಸರಣಿಯು 48MP ಕ್ಯಾಮೆರಾ ರಚನೆ ಪಡೆದಿದೆ

ಐಫೋನ್‌ 18 ಪ್ರೊ ಸರಣಿಯು A20 ಪ್ರೊ ಚಿಪ್‌ಸೆಟ್‌ ಹೊಂದಿವೆ

ಇಂದಿನಿಂದ iPhone 18 Pro ಮತ್ತು iPhone 18 Pro Max ಪ್ರೀ-ಆರ್ಡರ್‌ ಪ್ರಾರಂಭ; ಇಲ್ಲಿದೆ ಮಾಹಿತಿ

ಜನಪ್ರಿಯ ಆಪಲ್‌ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ iPhone 18 Pro ಸ್ಮಾರ್ಟ್‌ಫೋನ್‌ ಸರಣಿಯು ಈಗಾಗಲೇ ಮಾರುಕಟ್ಟೆಯಲ್ಲಿ ಐಫೋನ್‌ ಪ್ರಿಯ ಗ್ರಾಹಕರ ಗಮನ ಸೆಳೆದಿದೆ. ಈ ನೂತನ ಐಫೋನ್‌ ಸರಣಿಯು ಇಂದಿನಿಂದ (ಸೆಪ್ಟೆಂಬರ್ 12 ರಿಂದ) Pre-order ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಹೊಸ ಐಫೋನ್‌ ಸರಣಿಯು ಆಪಲ್‌ನ ಹೊಸ A20 ಪ್ರೊ ಚಿಪ್‌ಸೆಟ್‌ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, 48MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿವೆ. ಹಾಗೆಯೇ ಈ ಐಫೋನ್‌ಗಳು ಆಕರ್ಷಕ ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿವೆ. ಹಾಗಾದರೆ ಐಫೋನ್‌ 18 ಪ್ರೊ ಹಾಗೂ ಐಫೋನ್‌ 18 ಪ್ರೊ ಮ್ಯಾಕ್ಸ್‌ ಮೊಬೈಲ್‌ ಮಾರಾಟ ದಿನಾಂಕ, ಬೆಲೆ, ಫೀಚರ್ಸ್‌ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : iPhone 18 Pro ಬಿಡುಗಡೆಯ ಬೆನ್ನಲ್ಲೇ ಶಾಕ್‌ ಕೊಟ್ಟ ಆಪಲ್‌! ದಿಢೀರ್ iPhone 17 ಬೆಲೆ ಭಾರಿ ಏರಿಕೆ

iPhone 18 Pro ಸರಣಿ ಪ್ರೀ-ಆರ್ಡರ್‌ ಮಾಹಿತಿ

ಹೊಸ ಐಫೋನ್‌ 18 ಪ್ರೊ ಹಾಗೂ ಐಫೋನ್‌ 18 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳು ಇಂದು (ಸೆಪ್ಟೆಂಬರ್ 12 ರಿಂದ) ಸಂಜೆ 5:30 ಗಂಟೆಯಿಂದ ಅಮೆಜಾನ್‌ ಇ ಕಾಮರ್ಸ್‌ ತಾಣದ ಮೂಲಕ Pre-order ಶುರು ಮಾಡಲಿದೆ. ಇನ್ನು ಈ ಫೋನ್‌ಗಳು ಬರ್ಗಂಡಿ, ಗ್ಲೇಸಿಯರ್, ಸಿಲ್ವರ್ ಮತ್ತು ಬ್ಕ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿವೆ.

ಐಫೋನ್‌ 18 ಪ್ರೊ ಬೆಲೆ ಮಾಹಿತಿ

256GB ವೇರಿಯಂಟ್‌ ಬೆಲೆ 1,64,900 ರೂ.ಗಳು

512GB ವೇರಿಯಂಟ್‌ ಬೆಲೆ 1,89,900 ರೂ.ಗಳು

1TB ವೇರಿಯಂಟ್‌ ಬೆಲೆ 2,39,900 ರೂ.ಗಳು

2TB ವೇರಿಯಂಟ್‌ ಬೆಲೆ 3,14,900 ರೂ.ಗಳು

Apple iPhone 18 Pro camera

ಐಫೋನ್‌ 18 ಪ್ರೊ ಮ್ಯಾಕ್ಸ್‌ ಬೆಲೆ ವಿವರ

256GB ವೇರಿಯಂಟ್‌ ಬೆಲೆ 1,79,900 ರೂ.ಗಳು

512GB ವೇರಿಯಂಟ್‌ ಬೆಲೆ 2,04,900 ರೂ.ಗಳು

1TB ವೇರಿಯಂಟ್‌ ಬೆಲೆ 2,54,900 ರೂ.ಗಳು

2TB ವೇರಿಯಂಟ್‌ ಬೆಲೆ 3,29,900 ರೂ.ಗಳು

ಐಫೋನ್ 18 ಪ್ರೊ ಸರಣಿಯ ಫೀಚರ್ಸ್‌

ಆಪಲ್‌ ಕಂಪನಿಯ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್‌ಗಳು iOS 27 ನೊಂದಿಗೆ ಎಂಟ್ರಿ ಕೊಟ್ಟಿವೆ. ಐಫೋನ್ 18 ಪ್ರೊ ಮಾಡೆಲ್‌ 6.3 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್‌ ದೊಡ್ಡದಾದ 6.9 ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಆಪಲ್‌ನ ಈ ಫೋನ್‌ಗಳು ಹೊಸ A20 ಪ್ರೊ ಚಿಪ್‌ಸೆಟ್‌ ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿವೆ. ಐಫೋನ್‌ 18 ಪ್ರೊ ಹಾಗೂ ಐಫೋನ್‌ 18 ಪ್ರೊ ಮ್ಯಾಕ್ಸ್‌ ಫೋನ್‌ಗಳು ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿವೆ. ಇವುಗಳ ಪ್ರಾಥಮಿಕ ಕ್ಯಾಮೆರಾವು ವೇರಿಯಬಲ್ ಅಪರ್ಚರ್ ಒಳಗೊಂಡ 48MP ಸೆನ್ಸಾರ್‌ ಅನ್ನು ಹೊಂದಿವೆ.

ಐಫೋನ್‌ 18 ಪ್ರೊ ನಲ್ಲಿ 36 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್ ಮತ್ತು ಐಫೋನ್‌ 18 ಪ್ರೊ ಮ್ಯಾಕ್ಸ್‌ ನಲ್ಲಿ 45 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತವೆ. ಐಫೋನ್‌ 18 ಪ್ರೊ ಸುಮಾರು 15 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು ಅಥವಾ 30 ನಿಮಿಷಗಳಲ್ಲಿ ವೈರ್‌ಲೆಸ್ ಆಗಿ 50% ವರೆಗೆ ಚಾರ್ಜ್ ಮಾಡಬಹುದು. ಐಫೋನ್‌ 18 ಪ್ರೊ ಮ್ಯಾಕ್ಸ್‌‌ ನಲ್ಲಿ, ಐದು ನಿಮಿಷಗಳ ವೈರ್ಡ್ ಚಾರ್ಜಿಂಗ್ ಸುಮಾರು ಏಳು ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಇನ್ನು ಇದು ಪೂರ್ಣ ಚಾರ್ಜ್‌ನಲ್ಲಿ 30 ಗಂಟೆಗಳ ವರೆಗೆ ಬಳಕೆಯನ್ನು ಒದಗಿಸುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile