ನಾಳೆಯೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ OnePlus N6x ಸ್ಮಾರ್ಟ್‌ಫೋನ್‌! ಆಕರ್ಷಕ ಕಲರ್‌ ಆಯ್ಕೆ

HIGHLIGHTS

ಜುಲೈ 31 ರಂದು ಭಾರತದಲ್ಲಿ ಒನ್‌ಪ್ಲಸ್ N6x ಲಾಂಚ್

ಆಗಷ್ಟ್‌ 4 ರಂದು ಒನ್‌ಪ್ಲಸ್ N6x ಫೋನ್‌ ಸೇಲ್‌ ಪ್ರಾರಂಭ

ಒನ್‌ಪ್ಲಸ್ N6x ಫೋನ್‌ ಪಿಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರಲಿದೆ

ಒನ್‌ಪ್ಲಸ್‌ ಮೊಬೈಲ್‌ ಕಂಪನಿಯು ಹೊಸದಾಗಿ OnePlus N6x ಮೊಬೈಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಒನ್‌ಪ್ಲಸ್‌ ಸಂಸ್ಥೆಯು ತನ್ನ ನೂತನ ಮೊಬೈಲ್‌ ಅನ್ನು ನಾಳೆ (ಜುಲೈ 31 ರಂದು) ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಅಮೆಜಾನ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಹಾಗೆಯೇ ಒನ್‌ಪ್ಲಸ್ N6x ಮೊಬೈಲ್‌ನ ವಿನ್ಯಾಸ ಮತ್ತು ಕಲರ್‌ ಆಯ್ಕೆಗಳನ್ನು ಸಹ ಬಹಿರಂಗಪಡಿಸಿದೆ. ಈ ಫೋನಿನ ಟೀಸರ್‌ನಲ್ಲಿ ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ನಯವಾದ ಹಿಂಭಾಗದ ಪ್ಯಾನೆಲ್‌ ನೋಡಲು ನಾರ್ಡ್‌ 5 ನಂತೆ ಕಾಣುತ್ತದೆ. ಅಲ್ಲದೇ ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಲುಕ್‌ ಅನ್ನು ಒಳಗೊಂಡಿರಲಿದೆ ಎಂದು ಸೂಚಿಸುತ್ತದೆ. ಹಾಗಾದರೇ ಒನ್‌ಪ್ಲಸ್‌ N6x ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

Also Read : Jio ಟೆಲಿಕಾಂನ 3 ಅತ್ಯುತ್ತಮ ಪೋಸ್ಟ್‌ಪೇಯ್ಡ್‌ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ

OnePlus N6x ಲಾಂಚ್‌ಗೆ ಡೇಟ್‌ ಫಿಕ್ಸ್‌

ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಒನ್‌ಪ್ಲಸ್‌ N6x ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಫೋನ್‌ ನಾಳೆ (ಜುಲೈ 31 ರಿಂದ) ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಈ ಮೊಬೈಲ್‌ ಲಾಂಚ್‌ ಬಳಿಕ ಅಮೆಜಾನ್‌ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್‌ ಸ್ಟೋರ್‌ ಮೂಲಕ ಸೇಲ್‌ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್‌ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ. ಈ ಫೋನ್‌ ಸುಮಾರು 20,000 ರೂ. ಗಳ ಒಳಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ ಎನ್ನಲಾಗಿದೆ.

OnePlus N6x

ಒನ್‌ಪ್ಲಸ್‌ N6 ಮೊಬೈಲ್‌ ನಿರೀಕ್ಷಿತ ಫೀಚರ್ಸ್‌

ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಒನ್‌ಪ್ಲಸ್‌ N6x ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಅನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಫೋನ್‌ ಕಂಪನಿಯ ಕೈಗೆಟುಕುವ ಸ್ಮಾರ್ಟ್‌ಫೋನ್ ಪೋರ್ಟ್‌ಫೋಲಿಯೊದಲ್ಲಿ ಒನ್‌ಪ್ಲಸ್‌ N6 ಫೋನಿಗಿಂತ ಸ್ವಲ್ಪ ಕಡಿಮೆ ಹಂತದಲ್ಲಿ ಇರುವ ನಿರೀಕ್ಷೆಯಿದೆ. ಒನ್‌ಪ್ಲಸ್‌ ಈ ಮೊಬೈಲ್‌ಗಾಗಿ ಎರಡು ಬಣ್ಣ ಆಯ್ಕೆಗಳನ್ನು ಸಹ ದೃಢಪಡಿಸಿದೆ. ಅವುಗಳು ಕ್ರಮವಾಗಿ ಡೀಪ್ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ವೇರಿಯಂಟ್‌ ಆಗಿವೆ. ಈ ಎರಡೂ ಆವೃತ್ತಿಗಳು ಕೇಂದ್ರೀಕೃತವಾಗಿ ಇರಿಸಲಾದ ಒನ್‌ಪ್ಲಸ್‌ ಲೋಗೋದೊಂದಿಗೆ ಸ್ವಚ್ಛ ವಿನ್ಯಾಸವನ್ನು ಉಳಿಸಿಕೊಂಡಿವೆ.

ಒನ್‌ಪ್ಲಸ್‌ N6x ಸ್ಮಾರ್ಟ್‌ಫೋನ್‌ ಈ ಹಿಂದಿನ ಮಾಡೆಲ್‌ಗಿಂತ ಸಂಪೂರ್ಣವಾಗಿ ವಿಭಿನ್ನ ವಿನ್ಯಾಸ ಅಳವಡಿಸಿಕೊಂಡಿದೆ. ಈ ಫೋನ್ ಫ್ಲಾಟ್ ಫ್ರೇಮ್ ಅನ್ನು ಫ್ಲಾಟ್ ಹಿಂಭಾಗದ ಪ್ಯಾನೆಲ್‌ನೊಂದಿಗೆ ಹೊಂದಿದೆ. ಅಲ್ಲದೇ ಲಂಬವಾಗಿ ಜೋಡಿಸಲಾದ ಪಿಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿದೆ. ಆದರೆ LED ಫ್ಲ್ಯಾಷ್ ಕ್ಯಾಮೆರಾ ಹೌಸಿಂಗ್‌ನ ಹೊರಗೆ ಇರುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :