Apple HomeView ಮತ್ತು HomePod mini 2 ಘೋಷಣೆ: ಭಾರತದಲ್ಲಿ ಬೆಲೆ ಹಾಗೂ ಲಭ್ಯತೆ ಮಾಹಿತಿ ಇಲ್ಲಿದೆ

ಟೆಕ್ ದಿಗ್ಗಜ Apple ಸಂಸ್ಥೆಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ HomeView ಮತ್ತು HomePod mini 2 ಗಾಗಿ ಪ್ರೀ-ಆರ್ಡರ್‌ ಪ್ರಾರಂಭಿಸುವ ಮೂಲಕ ತನ್ನ ಸ್ಮಾರ್ಟ್ ಹೋಮ್ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಿದೆ. ಇದರೊಂದಿಗೆ ಆಪಲ್ ಹೊಸ Apple TV 4K ಅನ್ನು ಸಹ ಅನಾವರಣಗೊಳಿಸಿದೆ. ಹೋಮ್‌ಪ್ಯಾಡ್‌ ಮಿನಿ 2 ಡಿವೈಸ್‌ ಹೊಸ ಕಲರ್‌ ಆಯ್ಕೆಗಳ ಜೊತೆಗೆ 360-ಡಿಗ್ರಿ ಸೌಂಡ್, ‘ಸೌಂಡ್ ಗ್ಲೋ’ ಲೈಟಿಂಗ್ ಎಫೆಕ್ಟ್‌ ಮತ್ತು ಸುಧಾರಿತ ಸ್ಮಾರ್ಟ್ ಹೋಮ್ ಆಯ್ಕೆಗಳಲ್ಲಿ ಲಭ್ಯವಿವೆ. ಇನ್ನು ಹೋಮ್‌ವ್ಯೂ ಡಿವೈಸ್ ಸಂಪೂರ್ಣ ಹೊಸ ಉತ್ಪನ್ನವಾಗಿದ್ದು, ಇದು 7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಇದನ್ನು ಟೇಬಲ್ ಮೇಲೆ ಇರಿಸಬಹುದು ಅಥವಾ ಗೋಡೆಗೆ ಅಳವಡಿಸಬಹುದು (wall mount). ಹಾಗಾದರೇ ಆಪಲ್‌ನ ಹೊಸ ಹೋಮ್‌ವ್ಯೂ ಮತ್ತು ಹೋಮ್‌ಪ್ಯಾಡ್‌ ಮಿನಿ 2 ಡಿವೈಸ್‌ಗಳ ಕುರಿತು ಫೀಚರ್ಸ್‌, ಲಭ್ಯತೆ ಮತ್ತು ಬೆಲೆ ಮಾಹಿತಿ ಇಲ್ಲಿದೆ.

Also Read : 80W ಫಾಸ್ಟ್‌ ಚಾರ್ಜಿಂಗ್ ಇರುವ OnePlus Nord CE6 ಮೊಬೈಲ್‌ ಇದೀಗ ಡಿಸ್ಕೌಂಟ್‌ನಲ್ಲಿ ಲಭ್ಯ!

Apple ಕಂಪನಿಯ ಈ ಹೊಸ ಡಿವೈಸ್‌ಗಳ ಲಭ್ಯತೆ ಹಾಗೂ ಬೆಲೆ

ಆಪಲ್ ಹೋಮ್‌ವ್ಯೂ ಭಾರತೀಯ ಮಾರುಕಟ್ಟೆಯಲ್ಲಿ ಟೇಬಲ್‌ಟಾಪ್ ಮತ್ತು ಗೋಡೆಗೆ ಅಳವಡಿಸಬಹುದಾದ (wall-mounted) ಮಾದರಿಗಳಿಗೆ 39,900 ರೂ. ಬೆಲೆ ಪಡೆದಿದೆ. ಹಾಗೆಯೇ ಹೋಮ್‌ಪಾಡ್ ಮಿನಿ 2 ಡಿವೈಸ್‌ ಬೆಲೆ 18,900 ರೂ.ಗಳು ಆಗಿದೆ. USB-C ಆಯ್ಕೆಯ ಮೌಂಟ್ ಬೆಲೆ 6,900 ರೂ.ನಿಂದ ಮತ್ತು AC ವೈರ್ಡ್ ಆಯ್ಕೆಯ ಬೆಲೆ 8,900 ರೂ.ನಿಂದ ಪ್ರಾರಂಭವಾಗುತ್ತದೆ. PoE ಮೌಂಟ್ 2027 ರ ಆರಂಭದಲ್ಲಿ 14,900 ರೂ. ಬೆಲೆಯಲ್ಲಿ ಬಿಡುಗಡೆಯಾಗಲಿದೆ.

ಇನ್ನು ಆಪಲ್ ಹೋಮ್‌ವ್ಯೂ ನವೆಂಬರ್ 13 ರಿಂದ ಲಭ್ಯವಿರುತ್ತದೆ. ಆದರೆ ಹೋಮ್‌ಪಾಡ್ ಮಿನಿ 2 ಡಿವೈಸ್‌ ಅಕ್ಟೋಬರ್ 30 ರಿಂದ ಮಾರಾಟಕ್ಕೆ ಬರುತ್ತದೆ. ಭಾರತೀಯ ಬಳಕೆದಾರರು ಇಂದಿನಿಂದಲೇ ಆಪಲ್‌ನ ಅಧಿಕೃತ ವೆಬ್‌ಸೈಟ್ ಮತ್ತು ಆಪಲ್ ಸ್ಟೋರ್ ಆಪ್‌ನಲ್ಲಿ ಈ ಡಿವೈಸ್‌ಗಳನ್ನು ಪ್ರಿ-ಆರ್ಡರ್ ಮಾಡಬಹುದು.

HomePod mini 2 ಫೀಚರ್ಸ್‌ ಮಾಹಿತಿ

HomePod mini 2 ಸಿಂಗಲ್ ಸ್ಪೀಕರ್ ಪ್ಲೇಬ್ಯಾಕ್ ಮಾತ್ರವಲ್ಲದೆ ಎರಡು ಸ್ಪೀಕರ್‌ಗಳನ್ನು ಜೋಡಿಸಿ ಸ್ಟೀರಿಯೋ ಸೌಂಡ್ ಪಡೆಯುವ ಸೌಲಭ್ಯವನ್ನೂ ಹೊಂದಿದೆ. ಅಲ್ಲದೆ ಮನೆಯ ವಿವಿಧ ಕೊಠಡಿಗಳಲ್ಲಿ ಏಕಕಾಲದಲ್ಲಿ ಸಂಗೀತ ಆಲಿಸಲು ಮಲ್ಟಿ-ರೂಮ್ ಆಡಿಯೋ ಫೀಚರ್‌ ಕೂಡ ಲಭ್ಯವಿದೆ. ಈ ಸ್ಪೀಕರ್‌ನ ಮತ್ತೊಂದು ವಿಶೇಷತೆ ಎಂದರೆ ‘Sound Glow’ ಫೀಚರ್. ನಾಲ್ಕನೇ ತಲೆಮಾರಿನ Apple TV 4K ಜೊತೆಗೆ HomePod mini 2 ಅನ್ನು ಬಳಸಿದರೆ, ನಾಲ್ಕು ಸ್ಪೀಕರ್‌ಗಳನ್ನು ಜೋಡಿಸಿ ಸರೌಂಡ್ ಸೌಂಡ್ ವ್ಯವಸ್ಥೆಯನ್ನು ರೂಪಿಸಬಹುದು. ಇದರಿಂದ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಹೆಚ್ಚು ತಲ್ಲೀನಗೊಳಿಸುವ ಆಡಿಯೋ ಅನುಭವ ಪಡೆಯಲು ಸಾಧ್ಯವಾಗುತ್ತದೆ. ಈ ಡಿವೈಸ್‌ ಗುಲಾಬಿ, ಹಸಿರು, ನೀಲಿ, ಬಿಳಿ ಮತ್ತು ಮಿಡ್‌ನೈಟ್ ಸೇರಿದಂತೆ ಒಟ್ಟು ಐದು ಬಣ್ಣಗಳಲ್ಲಿ ಲಭ್ಯವಿದೆ.

HomeView ಡಿವೈಸ್‌ ಫೀಚರ್ಸ್‌ ಹೀಗಿವೆ

ಆಪಲ್‌ನ HomeView ಸ್ಮಾರ್ಟ್ ಹೋಮ್ ಡಿವೈಸ್‌ 7 ಇಂಚಿನ Liquid Retina ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ True Tone ತಂತ್ರಜ್ಞಾನ ಮತ್ತು ಸ್ವಯಂಚಾಲಿತ ಬ್ರೈಟ್‌ನೆಸ್ ಹೊಂದಾಣಿಕೆಯ ಸೌಲಭ್ಯವಿದ್ದು, ಸುತ್ತಲಿನ ಬೆಳಕಿಗೆ ಅನುಗುಣವಾಗಿ ಪರದೆಯ ಬಣ್ಣ ಮತ್ತು ಬ್ರೈಟ್ನೆಸ್‌ ಅನ್ನು ಹೊಂದಿಸಿಕೊಳ್ಳುತ್ತದೆ. ಈ ಡಿವೈಸ್‌ ಟೇಬಲ್ ಮೇಲೆ ಇಡಬಹುದು ಅಥವಾ ಗೋಡೆಗೆ ಅಳವಡಿಸಬಹುದು. HomeView ಒಂದೇ ಮನೆಯ ಆರು ಜನರವರೆಗೆ ಗುರುತಿಸುವ ಸಾಮರ್ಥ್ಯ ಹೊಂದಿದೆ. ಪ್ರತಿಯೊಬ್ಬರಿಗೂ ಅವರ ಅಗತ್ಯಕ್ಕೆ ತಕ್ಕಂತೆ ವೈಯಕ್ತೀಕರಿಸಿದ ಹೋಮ್ ಸ್ಕ್ರೀನ್ ಅನ್ನು ಒದಗಿಸುತ್ತದೆ. ಈ ಮೂಲಕ ಬಳಕೆದಾರರು FaceTime ಕರೆಗಳನ್ನು ಮಾಡಬಹುದು, ಸಂದೇಶಗಳನ್ನು ಕಳುಹಿಸಬಹುದು ಹಾಗೂ Apple Music, Apple Podcasts ಮತ್ತು Apple TV ಸೇವೆಗಳನ್ನು ಬಳಸಬಹುದು.

ಸ್ಮಾರ್ಟ್ ಹೋಮ್ ನಿರ್ವಹಣೆಯಲ್ಲೂ HomeView ಹಲವು ಸೌಲಭ್ಯಗಳನ್ನು ನೀಡುತ್ತದೆ. ಮನೆಯಲ್ಲಿರುವ ಸಂಪರ್ಕಿತ ಭದ್ರತಾ ಕ್ಯಾಮೆರಾಗಳ ದೃಶ್ಯಗಳನ್ನು ವೀಕ್ಷಿಸುವುದು, ಸ್ಮಾರ್ಟ್ ದೀಪಗಳನ್ನು ನಿಯಂತ್ರಿಸುವುದು, ಥರ್ಮೋಸ್ಟಾಟ್‌ಗಳ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಒಂದೇ ಡಿವೈಸ್‌ನ ಮೂಲಕ ಮಾಡಬಹುದು. ಇದರಿಂದ ಮನೆಯ ವಿವಿಧ ಸ್ಮಾರ್ಟ್ ಸಾಧನಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಹಾಗೆಯೇ ಇದರಲ್ಲಿ Siri AI ಸಹಾಯಕದ ಬೆಂಬಲವಿದ್ದು, ಇದು ಪ್ರಸ್ತುತ ಬೀಟಾ ಹಂತದಲ್ಲಿದೆ. ಇನ್ನು ಇದು ಟೇಬಲ್ ಮೇಲೆ ಇರಿಸುವ ಮಾದರಿಯು ಸಿಲ್ವರ್, ಸ್ಟಾರ್‌ಲೈಟ್, ರೋಸ್ ಪಿಂಕ್ ಮತ್ತು ಸ್ಪೇಸ್ ಗ್ರೇ ಬಣ್ಣಗಳಲ್ಲಿ ಲಭ್ಯವಿದ್ದರೆ, ಗೋಡೆಗೆ ಅಳವಡಿಸುವ ಮಾದರಿಯಲ್ಲಿ ಸಿಲ್ವರ್ ಮತ್ತು ಸ್ಪೇಸ್ ಗ್ರೇ ಬಣ್ಣಗಳ ಆಯ್ಕೆ ಮಾತ್ರ ಇದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :