ಮೋಟೊರೋಲದ ಹೊಚ್ಚ ಹೊಸ Moto G6 4GB ಯ RAM ಮತ್ತು 64GB ಯ ಸ್ಟೋರೇಜಿನೊಂದಿಗೆ ಕೇವಲ 15,999 ರೂಗಳಲ್ಲಿ ಲಭ್ಯವಿದೆ.

ಇವರಿಂದ Ravi Rao | ಪ್ರಕಟಿಸಲಾಗಿದೆ 14 Jun 2018
HIGHLIGHTS
  • ಭಾರತದಲ್ಲಿ ಮೊಟೊರೊಲಾ Moto G6 ಮತ್ತು Moto G6 Play ಎಂಬ ಎರಡು ಹೊಚ್ಚ ಹೊಸ ಫೋನ್ಗಳನ್ನು ಬಿಡುಗಡೆ ಮಾಡಿದೆ

ಮೋಟೊರೋಲದ ಹೊಚ್ಚ ಹೊಸ Moto G6 4GB ಯ RAM ಮತ್ತು 64GB ಯ ಸ್ಟೋರೇಜಿನೊಂದಿಗೆ ಕೇವಲ 15,999 ರೂಗಳಲ್ಲಿ ಲಭ್ಯವಿದೆ.
ಮೋಟೊರೋಲದ ಹೊಚ್ಚ ಹೊಸ Moto G6 4GB ಯ RAM ಮತ್ತು 64GB ಯ ಸ್ಟೋರೇಜಿನೊಂದಿಗೆ ಕೇವಲ 15,999 ರೂಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಮೊಟೊರೊಲಾ Moto G6 ಮತ್ತು Moto G6 Play ಎಂಬ ಎರಡು ಹೊಚ್ಚ ಹೊಸ ಫೋನ್ಗಳನ್ನು ಬಿಡುಗಡೆ ಮಾಡಿದೆ ಆದರೆ ಇವತ್ತು ನಾನು ನಿಮಗೆ ಮೋಟೊರೋಲದ Moto G6 ಫೋನಿನ ಸಂಪೂರ್ಣವಾದ ವಿಮರ್ಶೆಯನ್ನು ತೋರಿಸ್ತೀನಿ. ಇದು ನಿಮಗೆ 4GB RAM ಮತ್ತು 64GB ಯ ಸ್ಟೋರೇಜಿನೊಂದಿಗೆ ಬರುತ್ತದೆ. ಇದು ನಿಮಗೆ ಕೇವಲ 15,999 ರೂಪಾಯಿಗಳಲ್ಲಿ ಲಭ್ಯವಿದೆ ಅಲ್ಲದೆ ಇದರ 3GBRAM ಮತ್ತು 32GB ಯ ಸ್ಟೋರೇಜಿನೊಂದಿಗೂ ಬರುತ್ತದೆ. ಅದು ಕೇವಲ 13,999 ರೂಪಾಯಿಗಳಲ್ಲಿ ಲಭ್ಯವಾಗುತ್ತದೆ. ಹಾಗಾದ್ರೆ ಸ್ನೇಹಿತರೇ ಯಾವುದೇ ಟೈಮ್ ವೆಸ್ಟ್ ಮಾಡ್ದೆ ಇದರ ವಿಮರ್ಶೆ ನೋಡೋಣ.

ಮೊದಲಿಗೆ ಇದರಲ್ಲಿ ನಿಮ್ಮನ್ನು ತನ್ನತ್ತ ಸೆಳೆಯುವ ಅಂಶವೆಂದರೆ ಅದ್ಭುತವಾಗಿ ರಚನೆಗೊಂಡಿರುವ ಗ್ಲಾಸ್ ಡಿಸೈನ್. ಇದು ಇದಕ್ಕಿಂತ ಹೆಚ್ಚು ಬೆಲೆ ಬಾಳುವ Moto X4 ಗಿಂತ ವಿಶೇಷವಾದ 3D ಬ್ಯಾಕ್ ಗ್ಲಾಸನ್ನು ಒಳಗೊಂಡಿದೆ. 10 ರಿಂದ 15 ಸಾವಿರ ರೂಪಾಯಿಯ ರೇಂಜಲ್ಲಿ ಖರೀದಿಸುವವರು ಧೀರ್ಘಕಾಲ ಬಾಳಿಕೆಯ ಬಗ್ಗೆ ಹೆಚ್ಚು ಗಮನವನ್ನಿಟ್ಟಿರುತ್ತಾರೆ. ಈ Moto G6  ನಲ್ಲಿ ನಿಮಗೆ ಗೋರಿಲ್ಲಾ ಗ್ಲಾಸ್ 3 ಅನ್ನು ಫ್ರಂಟ್ ಮತ್ತು ಬ್ಯಾಕ್ ಎರಡಲ್ಲೂ ನೀಡಲಾಗಿದೆ.

https://www.mytrendyphone.dk/images/Motorola-Moto-G6-Plus-64GB-Blue-08052018-03-p.jpg

ಇದರಲ್ಲಿನ ಕ್ಯಾಮೆರಾ ಒಂದು ಗಡಿಯಾರ ಡಯಲ್ ಮಾದರಿಯಲ್ಲಿ ವಿನ್ಯಾಸಗೊಂಡಿದೆ. ಅದು ನಿಜವಾಗಿಯೂ ಫೋನಿನ ಬ್ಯಾಕಲ್ಲಿರುವ ಎದ್ದು ಕಾಣುವ ಬಂಪ್ ಹೆಚ್ಚು ಆಕರ್ಷಣೀಯವಾಗಿದೆ. ಈ ಫೋನಿನ ಮುಂಭಾಗದಲ್ಲಿನ ಸ್ಕ್ರೀನ್ ಮತ್ತು ನಿಮಗೆ ಹೆಚ್ಚಿನ ರಿಯಲ್ ಎಸ್ಟೇಟನ್ನು ತೆಗೆದುಕೊಳ್ಳುತ್ತದೆ. ಇದಲ್ಲದೆ ಇದರ ಕೋನಗಳ ಸುತ್ತ ಕೆಲವು ಬೆಝಲ್ಗಳನ್ನು ಸ್ಕ್ರೀನ್ ಕಡಿಮೆ ಮಾಡದೆ ನೀಡುತ್ತದೆ. ಇದರ ವಿಶೇಷವಾಗಿ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಡಿಸ್ಪ್ಲೇ ಕೆಳಗಿರುವ ಹೋಮ್ ಬಟನ್ನ ಸ್ಲಿಟ್ ಇದು ಫಿಂಗರ್ಪ್ರಿಂಟ್ ಸೆನ್ಸರನ್ನು ಎಂಬೆಡ್ ಮಾಡಲಾಗಿದೆ.

ಈ ಬಾರಿ ನಿಮಗೆ ಮೋಟೋ ಈ ಫೋನಲ್ಲಿ Type C ಚಾರ್ಜಿಂಗ್ ಪೋರ್ಟ್ ನೀಡಿದೆ. ಇದರ ಪಕ್ಕದಲ್ಲಿ 3.5mm ಜಾಕ್ ಸಹ ಲಭ್ಯವಿದೆ. ಈ ಫೋನಲ್ಲಿ ನಿಮಗೆ ಪವರ್ ಬಟನ್ Texture ಮೇಲ್ ಮೈಯನ್ನು ಹೊಂದಿದ್ದು ಇದರ ವಾಲ್ಯೂಮ್ ಬಟನ್ ಸಹ ಇದೆ. ಇವೇರಡು ಫೋನಿನ ಬಲ ಭಾಗದಲ್ಲಿ ವಿಶೇಷವಾಗಿ ರಚಿತಗೊಂಡಿದೆ. ಇದರ 5.7 ಇಂಚಿನ IPS LCD 18:9 ಅಸ್ಪೆಟ್ ರೇಷುವಿನೊಂದಿಗೆ ವಿಡಿಯೋ ಮತ್ತು ಓದುಗರಿಗೆ ಉತ್ತಮವಾಗಿದೆ. ಇದರ ಬೆಝೆಲ್ಲೆಸ್ ಡಿಸ್ಪ್ಲೇ ವಿನ್ಯಾಸ ಒಂದೇ ಕೈಯಲ್ಲಿ ಬಳಸಲು ಹೆಚ್ಚು ಸುಲಭವಾಗಿದೆ.

https://www.mytrendyphone.dk/images/Motorola-Moto-G6-Plus-64GB-Blue-08052018-05-p.jpg

ಇದರ ಸ್ಕ್ರೀನ್ ನಿಜಕ್ಕೂ ಹೆಚ್ಚು ಉತ್ತಮವಾಗಿದ್ದು ಬಳಕೆದಾರರಿಗೆ ಉಪಯುಕ್ತವಾಗಿದೆ. ಮೋಟೊರೋಲ ಈ ವರ್ಷ ನಿಜಕ್ಕೂ ಹೊಸ ವಿನ್ಯಾಸ ಅಂದ್ರೆ ಇದರ 1080X2160 ಪಿಕ್ಸೆಲ್ಗಳ ಮೇಲೆ ಹೆಚ್ಚು ಗಮನ ಹರಿಸಿದೆ. ಇದರ ಕೆಲ ತೊಂದರೆಗಳನ್ನು ನಾನು ಪರೀಕ್ಷಸಿದೆ. ಇದರ ಟಚ್ ಹೆಚ್ಚು ಫಸ್ಟಾಗಿಲ್ಲವಾಗದರೂ ಹೆಚ್ಚು ಬಳಸಿದ ಟ್ಯಾಬ್ಗಳು ಹೆಚ್ಚಾಗಿ ಪ್ರತಿಕ್ರಿಯಿಸಲು ಕೆಲ ಕ್ಷಣಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಸೂರ್ಯನ ಬೆಳಕಲ್ಲಿ ಈ ಫೋನ್ ಬಳಸುವುದು ಕಷ್ಟವೇ ಸರಿ.  

ಈ ಹೊಸ Moto G6 ನಿಮಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 450 ಚಿಪ್ಸೆಟನ್ನು ಒಳಗೊಂಡು 4GBRAM ಮತ್ತು 64GB ಯ ಸ್ಟೋರೇಜಿನೊಂದಿಗೆ ಬರುತ್ತದೆ. ಈಗಾಗಲೇ ಹೇಳಿದಂತೆ ಇದು 3GBRAM ಮತ್ತು 32GB ಯ ಸ್ಟೋರೇಜಿನೊಂದಿಗೂ ಬರುತ್ತದೆ. ಈ ಬಾರಿಯ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 450 ನಿಜಕ್ಕೂ ಹಣಕ್ಕೆ ತಕ್ಕಂತೆ ಕಾರ್ಯ ನಿರ್ವಯಿಸುತ್ತದೆ. ಮತ್ತು ನಿಮಗೆ ಅನಗತ್ಯವಾದ ಯಾವುದೇ ರೀತಿಯ ಡೂಪ್ಲಿಕೇಟ್ ಅಥವಾ ಹೆಚ್ಚುವರಿಯ ಅನಿಮೇಷನ್ ಒಳಗೊಂಡಿಲ್ಲ.

https://www.mytrendyphone.dk/images/Motorola-Moto-G6-Plus-64GB-Blue-08052018-01-p.jpg

ಈ ಹೊಸ Moto G6 ನಿಮಗೆ ಎಂದು ಕಾಣದ ಕೆಲ ಅದ್ಭುತವಾದ ವಿಷಯಗಳ ಜೋತೆಯಲ್ಲಿ ಬರುತ್ತದೆ. ಅಂದ್ರೆ ಸ್ಕ್ರೀನಿನ ಮೇಲೆ ಮೂರು ಬೆರಳುಗಳನ್ನು ಹಿಡುವುದರಿಂದ ಸ್ಕ್ರೀನ್ ಶಾಟ್ ಪಡೆಯಬವುದು. ಎರಡು ಬಾರಿ ಟ್ವಿಸ್ಟ್ ಮಾಡಿ ಕ್ಯಾಮೆರಾ ಪಡೆಯಬವುದು. ಎರಡು ಬಾರಿ ಶೇರ್ ಮಾಡುವುದರಿಂದ ಫ್ಲಾಶ್ ಲೈಟ್ ಪಡೆಯಬವುದು ಇವೇಲ್ಲ ಯಾವುದೇ ಕೊರತೆಗಳಿಲ್ಲದೆ ನಡೆಯುತ್ತವೆ. ಈ ಹೊಸ Moto G6 ನಿಮಗೆ ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತದೆ ಅಂದ್ರೆ ನಿಮ್ಮ ಹಣ ವಸೂಲ್ ಅಲ್ವೇ..!!  ಇದು ನಿಮಗೆ ಭಾರಿ ಬೆಲೆಯ ಫೋನ್ಗಳಂತೆ ಫೇಸ್ ಅನ್ಲಾಕ್ ಮಾಡುವ ಅವಕಾಶವನ್ನು ನೀಡುತ್ತದೆ. ಆದರೆ ಇದರಲ್ಲಿ ಅನ್ಲಾಕ್ ಮಾಡಲು ಲಾಕ್ ಕೀ ಒತ್ತಿ ಅನ್ಲಾಕ್ ಮಾಡುವ ವಿಧಾನ ನನಗಂತು ಬಾರಿ ಇಷ್ಟವಾಗಿದೆ.

ಇದರ ಕ್ಯಾಮೆರಾದ ಬಗ್ಗೆ ಹೇಳಬೇಕಾದರೆ ಇದರ ಬ್ಯಾಕಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಬರುತ್ತದೆ. ನಿಮಗೆ 12MP F.1.8 ಅಪೆರ್ಚರ್ ಮತ್ತು 5MP ಡೆಪ್ತ್ ಸೆನ್ಸರಿನೊಂದಿಗೆ F 2.2 ಅಪೆರ್ಚರ್ ಜೋತೆಯಲ್ಲಿ ಬರುತ್ತದೆ. ಇದರ ಡುಯಲ್ ಕ್ಯಾಮೆರಾ ನಿಮಗೆ ಪ್ರೋಟ್ರೇಟ್ ಮತ್ತು Nifty ಫೀಚರ್ಗಳೊಂದಿಗೆ ಸರಿ ಅನ್ನಬವುದಷ್ಟೇ. ಇದರ ಬ್ಯಾಸಿಕ್ ಬಗ್ಗೆ ಹೇಳಬೇಕಾದ್ರೆ ಇದು ಹೆಚ್ಚುವರಿಯ ನ್ಯಾಚುರಲ್ ಕಲರನ್ನು ಸೆರೆಹಿಡಿದು ಹೊರಗಿನ ಬೆಳಕಿನಲ್ಲಿ ನಿಜಕ್ಕೂ ಅದ್ಭುತವಾಗಿದೆ. ಇದರ ಒಳ ಮತ್ತು ಹೊರಗೆ ಬೇಳಕಿದ್ದಷ್ಟು ಉತ್ತಮವಾದ ಚಿತ್ರಗಳನ್ನು ನೀಡುತ್ತದೆ.

https://www.mytrendyphone.dk/images/Motorola-Moto-G6-Plus-64GB-Blue-08052018-04-p.jpg

ಇದರ ಡೈನಾಮಿಕ್ ರೇಂಜ್ ಶಾಟ್ ಸಹ ಹೆಚ್ಚು ಉತ್ತಮವಾಗಿದೆ. ಅಂದ್ರೆ ಒಂದು ಭಾರಿ ಬೆಲೆಯ ಪ್ಲಾಗ್ಶಿಪ್ ಫೋನಿನಂತೆ ಅನುಭವ ಇದರಲ್ಲಿ ಪಡೆಯಬವುದು. Redmi Note 5 Pro ಕ್ಯಾಮೆರಾ ಸಹ ಇಲ್ಲಿ ನೆನಪಿಸಿಕೊಳ್ಳಬವುದು. ಇದರಂತೆ Moto G6 ಉನ್ನತವಾದ ಫೋಟೋಗಳನ್ನು ನೀಡುತ್ತದೆ. ಇದರ ಕ್ಯಾಮೆರಾ ಲೊ ಲೈಟಲಂತು ನಿಜಕ್ಕೂ ಅದ್ಭುತವಾದ ಇಮೇಜ್ಗಳನ್ನು ನೀಡಿ ಕುತೂಹಲ ಕೆರಳಿಸುತ್ತದೆ. ಇದರ ಸಾಂಪಲ್ ಫೋನ್ಗಳನ್ನು ನೋಡುವುದರ ಮೂಕಲ ಇದರ ಬಗ್ಗೆ ನೀವೇ ನಿರ್ಧರಿಸಬವುದು. ಇದರಲ್ಲಿ Moto X4 ನಂತೆ ಶಟರ್ ಲಾಗ್ ಕೊರತೆಗಳಿವೆ. ಇದರ ಶಟರ್ ಟಚ್ ಮಾಡಿದ ಕೆಲ ಕ್ಷಣ ತೆಗೆದುಕೊಳ್ಳುತ್ತದೆ. 

ಇದರ 16MP ಫ್ರಂಟ್ ಕ್ಯಾಮೆರಾ ನಿಜಕ್ಕೂ ನಿಮಗೆ ಮೆಚ್ಚುಗೆಯ ಫೋಟೋಗಳನ್ನು ನೀಡುವುದರೊಂದಿಗೆ ನಿಮ್ಮ ಸುತ್ತ ಮುತ್ತಲಿನ ಹೆಚ್ಚು ಮಾಹಿತಿಯನ್ನು ಸೆರೆ ಹಿಡಿಯುತ್ತದೆ. ಇದರ ಬೇರೆ ಕ್ಯಾಮೆರಾ ಫೀಚರ್ಗಳ ಬಗ್ಗೆ ಮಾತನಾಡಬೇಕಾದ್ರೆ ಇದರಲ್ಲಿನ ಪ್ರೊಟ್ರೇಟ್ ಮೂಡ್ ಮತ್ತು ಕಟ್ ಔಟ್ ಹಾಗು ಕಲರ್ ಸ್ಪಾಟನ್ನು ಒಳಗೊಂಡಿದೆ. ಕೊನೆಯದಾಗಿ ಇದರ ಬ್ಯಾಟರಿ ಬಗ್ಗೆ ಹೇಳಬೇಕಾದ್ರೆ ಇದರಲ್ಲಿ ನಿಮಗೆ 3000mAh ನೀಡುತ್ತದೆ. ಇದು ನಿಮಗೆ ಪೂರ್ತಿ ಒಂದು ದಿನದ ಬಾಳಿಕೆಯನ್ನು ನೀಡುತ್ತದೆ. ಅಲ್ಲದೆ ಮೋಟೋ ಈ ಫೋನಲ್ಲಿ ನಿಮಗೆ ಟರ್ಬೊ ಚಾರ್ಜರನ್ನು ನೀಡಿರುವುದರಿಂದ ನೀವು ಕೇವಲ 15 ನಿಮಿಷದಲ್ಲಿ 50 ರಿಂದ 75% ಪಡೆಯಬವುದು.

https://www.mytrendyphone.dk/images/Motorola-Moto-G6-Plus-64GB-Blue-08052018-07-p.jpg 

ಒಟ್ಟಾರೆಗಾಗಿ ಸ್ನೇಹಿತರೇ ಇದು ನಿಜಕ್ಕೂ ಪ್ರೀಮಿಯಂ ಲುಕಿಂಗ್ ನೀಡಿದ್ದರು ಇದರ ಪೆರ್ಫಾಮೆನ್ಸ್ ಕೊಂಚ ಕೆಳಗಿದೆ. ಸ್ನೇಹಿತರೆ ಎಂದಿನಂತೆ ನೀವು ಈ  ಮೇಲೆ ಕಾಮೆಂಟ್ ಮತ್ತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements

ಹಾಟ್ ಡೀಲ್ಗಳು ಎಲ್ಲವನ್ನು ವೀಕ್ಷಿಸಿ

iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
₹ 26990 | $hotDeals->merchant_name
Redmi Note 11 (Horizon Blue, 4GB RAM, 64GB Storage) | 90Hz FHD+ AMOLED Display | Qualcomm® Snapdragon™ 680-6nm | Alexa Built-in | 33W Charger Included
Redmi Note 11 (Horizon Blue, 4GB RAM, 64GB Storage) | 90Hz FHD+ AMOLED Display | Qualcomm® Snapdragon™ 680-6nm | Alexa Built-in | 33W Charger Included
₹ 13499 | $hotDeals->merchant_name
OnePlus 10 Pro 5G (Volcanic Black, 8GB RAM, 128GB Storage)
OnePlus 10 Pro 5G (Volcanic Black, 8GB RAM, 128GB Storage)
₹ 66999 | $hotDeals->merchant_name
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
₹ 29990 | $hotDeals->merchant_name
DMCA.com Protection Status