ನಾಳೆ ದೇಶೀಯ ಮಾರುಕಟ್ಟೆಗೆ Motorola Edge 70 Pro ಬಿಡುಗಡೆ! ಜಬರ್ದಸ್ತ್ ಫೀಚರ್ಸ್ ನಿರೀಕ್ಷೆ
ನಾಳೆ (ಏಪ್ರಿಲ್ 22 ರಂದು) ಮೊಟೊರೊಲಾ ಎಡ್ಜ್ 70 ಪ್ರೊ ಲಾಂಚ್
ಮೊಟೊರೊಲಾ ಎಡ್ಜ್ 70 ಪ್ರೊ ಫೋನ್ 6,500mAh ಬ್ಯಾಟರಿ ಹೊಂದಿರಲಿದೆ
ಮೊಟೊರೊಲಾದ ಈ ಫೋನ್ ಮೂರು ಆಕರ್ಷಕ ಕಲರ್ ಆಯ್ಕೆ ಒಳಗೊಂಡಿರಲಿದೆ
ನೂತನ Motorola Edge 70 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಬಹುನಿರೀಕ್ಷಿತ ಈ ಮೊಬೈಲ್ ನಾಳೆ (ಏಪ್ರಿಲ್ 22 ರಂದು) ಅಧಿಕೃತವಾಗಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಮುಂಬರುವ ಈ ಮೊಬೈಲ್‌ನ ಕೆಲವು ಫೀಚರ್ಸ್ ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸಿವೆ. ಮುಖ್ಯವಾಗಿ ಈ ಸ್ಮಾರ್ಟ್‌ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಅಲ್ಲದೇ ಇದು ಪ್ರಮುಖ ಹೈಲೈಟ್ ಎನಿಸಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡುವುದು ಖಚಿತ ಎನ್ನಲಾಗಿದೆ. ಹಾಗಾದರೆ ಮುಂಬರುವ ಮೊಟೊರೊಲಾ ಎಡ್ಜ್ 70 ಪ್ರೊ ಮೊಬೈಲ್‌ನ ಲಾಂಚ್ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಭಾರತದಲ್ಲಿ Redmi A7 Pro 4G ಮತ್ತು Redmi A7 4G ಮೊಬೈಲ್ ಬಿಡುಗಡೆ! ಅಗ್ಗದ ಬೆಲೆ
Motorola Edge 70 Pro ಮೊಬೈಲ್ ಬಿಡುಗಡೆ ದಿನಾಂಕ
ಮೊಟೊರೊಲಾ ಕಂಪನಿಯು ತನ್ನ ಹೊಸ ಮೊಟೊರೊಲಾ ಎಡ್ಜ್ 70 ಪ್ರೊ ಲಾಂಚ್ ಮಾಡಲು ಸಕಲ ಸಜ್ಜಾಗಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್ ಅನ್ನು ನಾಳೆ (ಏಪ್ರಿಲ್ 22 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಲಾಂಚ್ ಬಳಿಕ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಪ್ರಾರಂಭಿಸಲಿದೆ. ಅಂದಹಾಗೆ ಈ ಫೋನ್ ಪ್ಯಾಂಟೋನ್ ಟೀ, ಪ್ಯಾಂಟೋನ್ ಟೈಟಾನ್ ಮತ್ತು ಪ್ಯಾಂಟೋನ್ ಲಿಲಿ ವೈಟ್ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿರಲಿದೆ.

ಮೊಟೊರೊಲಾ ಎಡ್ಜ್ 70 ಪ್ರೊ ನಿರೀಕ್ಷಿತ ಫೀಚರ್ಸ್
ಮೊಟೊರೊಲಾ ಎಡ್ಜ್ 70 ಪ್ರೊ ಸ್ಮಾರ್ಟ್‌ಫೋನ್ 6.8 ಇಂಚಿನ 1.5K ರೆಸಲ್ಯೂಶನ್ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಗಳು ಇವೆ. ಹಾಗೆಯೇ ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಸಪೋರ್ಟ್ ಜೊತೆಗೆ 5,200 nits ಬ್ರೈಟ್ನೆಸ್ ಬೆಂಬಲ ಹೊಂದಿರಲಿದೆ. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 90W ಟರ್ಬೊಪವರ್ ಚಾರ್ಜಿಂಗ್ ಬೆಂಬಲ ಸಹ ಒಳಗೊಂಡಿರುವ ಸಾಧ್ಯತೆಗಳು ಇವೆ.
ಹಾಗೆಯೇ ಮೊಟೊರೊಲಾ ಎಡ್ಜ್ 70 ಪ್ರೊ ಮೊಬೈಲ್ ಹಿಂಭಾಗದಲ್ಲಿ 50MP ಸೋನಿ LYT-710 ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಮುಂಭಾಗದಲ್ಲಿನ ಕ್ಯಾಮೆರಾವು ಸಹ 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇರುವ ನಿರೀಕ್ಷೆಗಳು ಇವೆ. ಇದು ಹಲೋ UI ಜೊತೆಗೆ Android 16 ಓಎಸ್ ಸಪೋರ್ಟ್ ಒಳಗೊಂಡಿರಲಿದೆ. ಅಲ್ಲದೇ ಈ ಫೋನ್ 12GB RAM ವರೆಗೂ ಆಯ್ಕೆ ಹೊಂದಿರಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile