ಭಾರತದಲ್ಲಿ Redmi A7 Pro 4G ಮತ್ತು Redmi A7 4G ಮೊಬೈಲ್‌ ಬಿಡುಗಡೆ! ಅಗ್ಗದ ಬೆಲೆ

HIGHLIGHTS

ಭಾರತದಲ್ಲಿ ರೆಡ್ಮಿ A7 ಪ್ರೊ ಮತ್ತು ರೆಡ್ಮಿ A7 ಮೊಬೈಲ್‌ ಬಿಡುಗಡೆ

ಈ ಎರಡು ಫೋನ್‌ಗಳು 6,300mAh ಸಾಮರ್ಥ್ಯದ ಬ್ಯಾಟರಿ ಹೊಂದಿವೆ

ಈ ನೂತನ ಮೊಬೈಲ್‌ಗಳು ಬಾಹ್ಯ ಮೆಮೊರಿಯನ್ನು 2TB ವರೆಗೂ ವಿಸ್ತರಿಸುವ ಆಯ್ಕೆ ಪಡೆದಿವೆ

ಭಾರತದಲ್ಲಿ Redmi A7 Pro 4G ಮತ್ತು Redmi A7 4G ಮೊಬೈಲ್‌ ಬಿಡುಗಡೆ! ಅಗ್ಗದ ಬೆಲೆ

ಜನಪ್ರಿಯ ರೆಡ್ಮಿ ಕಂಪನಿಯು ಇದೀಗ ಭಾರತದಲ್ಲಿ ತನ್ನ ರೆಡ್ಮಿ A7 ಸರಣಿಯಲ್ಲಿ ಹೊಸದಾಗಿ ಮತ್ತೆ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು Redmi A7 Pro 4G ಮತ್ತು Redmi A7 4G ಮಾಡೆಲ್‌ಗಳನ್ನು ಪರಿಚಯಿಸಿದ್ದು ಇವು ಎಂಟ್ರಿ ಲೆವೆಲ್‌ ಮಾದರಿಯ ಮೊಬೈಲ್‌ಗಳಾಗಿವೆ. ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಎರಡೂ ಫೋನ್‌ಗಳು Unisoc T7250 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಹಾಗೆಯೇ ಈ ಫೋನ್‌ಗಳು 64GB ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿವೆ. ಅಲ್ಲದೇ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿವೆ. ಹಾಗಾದರೇ ರೆಡ್ಮಿ A7 ಪ್ರೊ 4G ಮತ್ತು ರೆಡ್ಮಿ A7 4G ಮೊಬೈಲ್‌ಗಳ ಫೀಚರ್ಸ್‌, ಬೆಲೆ ಹಾಗೂ ಸೇಲ್‌ ಡೇಟ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Apple CEO ಸ್ಥಾನಕ್ಕೆ Tim Cook ರಾಜೀನಾಮೆ! ಜಾನ್ ಟೆರ್ನಸ್ ಹೊಸ CEO

Redmi A7 Pro 4G ಮತ್ತು Redmi A7 4G ಬೆಲೆ ಹಾಗೂ ಲಭ್ಯತೆ

ಭಾರತೀಯ ಮಾರುಕಟ್ಟೆಗೆ ರೆಡ್ಮಿ A7 ಪ್ರೊ 4G ಮತ್ತು ರೆಡ್ಮಿ A7 4G ಫೋನ್‌ಗಳು ಎಂಟ್ರಿ ಕೊಟ್ಟಿವೆ. ಆ ಪೈಕಿ ರೆಡ್ಮಿ A7 ಪ್ರೊ 4G ಫೋನಿನ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಬೆಲೆ 11,499 ರೂ.ಗಳು ಆಗಿದೆ. ಇನ್ನು ಈ ಫೋನ್‌ ಬ್ಲ್ಯಾಕ್‌ ಮತ್ತು ಸ್ಕೈ ಸನ್‌ಸೆಟ್ ಆರೆಂಜ್ ಬಣ್ಣಗಳಲ್ಲಿ ಲಭ್ಯವಿದೆ. ಅದೇ ರೀತಿ ರೆಡ್ಮಿ A7 4G ಮೊಬೈಲ್‌ 3GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆ 10,499 ರೂ.ಗಳು ಆಗಿದೆ. ಈ ಫೋನ್‌ ಬ್ಲ್ಯಾಕ್‌ ಮತ್ತು ಸ್ಕೈ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಅಂದಹಾಗೆ ಈ ಎರಡು ಫೋನ್‌ಗಳು ಇದೇ ಏಪ್ರಿಲ್ 23 ರಿಂದ Mi.com, ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಶಿಯೋಮಿ ರೀಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದು.

Redmi A7 Pro 4G

ರೆಡ್ಮಿ A7 ಪ್ರೊ 4G ಫೋನಿನ ಫೀಚರ್ಸ್‌

ಈ ನೂತನ ಫೋನ್‌ 6.9 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದ್ದು ಇದರ ಸ್ಕ್ರೀನ್‌ 720 x 1,600 ಪಿಕ್ಸೆಲ್‌ಗಳು ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದಿರುವು ಜೊತೆಗೆ 800 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದುಕೊಂಡಿದೆ. ಇನ್ನು ಈ ಫೋನ್‌ ಯುನಿಸಾಕ್ T7250 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 16 ಆಧಾರಿತ ಹೈಪರ್‌ಓಎಸ್ 3 ಜೊತೆಗೆ 64GB ಸ್ಟೋರೇಜ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಇನ್ನು ಈ ಮೊಬೈಲ್‌ ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ. ಅಲ್ಲದೇ ಈ ಫೋನ್‌ 6,300mAh ಬ್ಯಾಟರಿ ಹೊಂದಿದ್ದು ಇದಕ್ಕೆ ಪೂರಕವಾಗಿ 15W ವೈರ್ಡ್ ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಆಯ್ಕೆ ಇದೆ.

ರೆಡ್ಮಿ A7 4G ಫೋನಿನ ಫೀಚರ್ಸ್‌

ರೆಡ್ಮಿ A7 4G ಫೋನ್‌ 6.88 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದ್ದು ಇದರ ಸ್ಕ್ರೀನ್‌ 720 x 1,600 ಪಿಕ್ಸೆಲ್‌ಗಳು ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದಿರುವು ಜೊತೆಗೆ 800 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದುಕೊಂಡಿದೆ. ಇನ್ನು ಈ ಫೋನ್‌ ಯುನಿಸಾಕ್ T7250 SoC ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ಜೊತೆಗೆ 64GB ಸ್ಟೋರೇಜ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಇನ್ನು ರೆಡ್ಮಿ A7 4G ಮೊಬೈಲ್‌ ಮೊದಲ ಕ್ಯಾಮೆರಾವು 13 ಮೆಗಾಪಿಕ್ಸಲ್‌ ಸೆನ್ಸಾರ್‌ ಬಲದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ. ಅಲ್ಲದೇ ಈ ಫೋನ್‌ 6,300mAh ಬ್ಯಾಟರಿ ನೀಡಲಾಗಿದೆ. ಇದಕ್ಕೆ ಸಪೋರ್ಟಿವ್ ಆಗಿ 15W ವೈರ್ಡ್ ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಒದಗಿಸಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo