ಇಂದು Lava Bold 2 5G ಮೊಬೈಲ್‌ ಬಿಡುಗಡೆ! ಕುತೂಹಲ ಮೂಡಿಸಿದ ಲೀಕ್ ಫೀಚರ್ಸ್‌

HIGHLIGHTS

ಭಾರತದಲ್ಲಿ ಇಂದು (ಮಾರ್ಚ್ 13 ರಂದು) ಲಾವಾ ಬೋಲ್ಡ್‌ 2 5G ಲಾಂಚ್

ಲಾವಾ ಬೋಲ್ಡ್‌ 2 5G ಮೊಬೈಲ್‌ 50MP ಕ್ಯಾಮೆರಾ ಸೆನ್ಸಾರ್‌ ಪಡೆದಿರುವ ಸಾಧ್ಯತೆ ಇದೆ

ಲಾವಾ ಬೋಲ್ಡ್‌ 2 5G ಫೋನ್ 7,200mAh ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಪಡೆದಿರಲಿದೆ

ಇಂದು Lava Bold 2 5G ಮೊಬೈಲ್‌ ಬಿಡುಗಡೆ! ಕುತೂಹಲ ಮೂಡಿಸಿದ ಲೀಕ್ ಫೀಚರ್ಸ್‌

Lava Bold 2 5G ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 13 ರಂದು) ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಲಾಂಚ್ ಬಿಡುಗಡೆ ಕುರಿತಾಗಿ ಈಗಾಗಲೇ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಈಗ ಲೈವ್ ಇದೆ. ಮಾರುಕಟ್ಟೆಗೆ ಬರಲು ಸಜ್ಜಾಗಿರುವ ಈ ಮೊಬೈಲ್‌ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಈ ಮೊಬೈಲ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿರುವ ಸಾಧ್ಯತೆಗಳು ಇವೆ. ಇನ್ನು ಇದರ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ ಎನ್ನಲಾಗಿದೆ. ಹಾಗಾದರೆ ಮುಂಬರುವ ಲಾವಾ ಬೋಲ್ಡ್‌ 2 5G ಮೊಬೈಲ್‌ನ ಬಿಡುಗಡೆ ದಿನಾಂಕ, ನಿರೀಕ್ಷಿತ ಫೀಚರ್ಸ್‌ಗಳ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಅತೀ ಶೀಘ್ರದಲ್ಲೇ ಭಾರತದಲ್ಲಿ OPPO A6s 5G ಮೊಬೈಲ್‌ ಲಾಂಚ್‌! ನಿರೀಕ್ಷಿತ ಫೀಚರ್ಸ್ ನೋಡಿ

Lava Bold 2 5G ಮೊಬೈಲ್‌ ಇಂದು ಬಿಡುಗಡೆ

ಲಾವಾ ಬೋಲ್ಡ್‌ 2 5G ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 13 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಅಮೆಜಾನ್‌ ಇ-ಕಾಮರ್ಸ್ ತಾಣದಲ್ಲಿ ಹೊಸ ಲಾವಾ ಬೋಲ್ಡ್‌ 2 5G ಫೋನ್‌ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಮೊಬೈಲ್‌ ಬ್ರೈಟರ್, ಸ್ಲಿಮ್ಮರ್, ಬೋಲ್ಡರ್ ಎಂಬ ಟ್ಯಾಗ್ ಲೈನ್‌ನೊಂದಿಗೆ ಎಂಟ್ರಿ ಕೊಡಲಿದೆ. ಈ ಮೊಬೈಲ್‌ಗಾಗಿ ಮೀಸಲಾದ ಮೈಕ್ರೋಸೈಟ್ ಈಗ ಅಮೆಜಾನ್‌ ಇ ಕಾಮರ್ಸ್‌ನಲ್ಲಿ ಲೈವ್ ಆಗಿದೆ. ಹಾಗೆಯೇ ಲಾವಾ ಬೋಲ್ಡ್‌ 2 5G ಮೊಬೈಲ್‌ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಲು ಪ್ರತ್ಯೇಕವಾಗಿ ಲಭ್ಯವಿರುತ್ತದೆ ಎನ್ನಲಾಗಿದೆ.

Lava Bold 2 5G

ಹಾಗೆಯೇ ಲಾವಾ ಬೋಲ್ಡ್‌ 5G ಮೊಬೈಲ್‌ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಸೆಟ್‌ಅಪ್‌ ಅನ್ನು ಒಳಗೊಂಡಿರಲಿದ್ದು ಇದು ಹಿಂಭಾಗದಲ್ಲಿ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿರಲಿದೆ. ಅಲ್ಲದೇ ಈ ಮೊಬೈಲ್‌ ಫ್ಲಾಟ್ ಫ್ರೇಮ್ ಮತ್ತು ಫ್ಲಾಟ್ ಬ್ಯಾಕ್‌ ಪ್ಯಾನೆಲ್ ಅನ್ನು ಹೊಂದಿರಲಿದೆ ಜೊತೆಗೆ ಹಿಂಭಾಗದಲ್ಲಿ LED ಫ್ಲ್ಯಾಷ್ ಅನ್ನು ಪಡೆದಿರಲಿದೆ. ಇನ್ನು ಮೊಬೈಲ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ ಬಟನ್ ಒಳಗೊಂಡಿರಲಿದೆ. ಇನ್ನು ಫೋನಿನ ಅಧಿಕೃತ ಲಾಂಚ್‌ ಡೇಟ್‌ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ.

ಲಾವಾ ಸಂಸ್ಥೆಯ ಈ ಹಿಂದಿನ ಲಾವಾ ಬೋಲ್ಡ್‌ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 6GB ವರೆಗೆ RAM ಮತ್ತು 128GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಹಿಂಭಾಗದಲ್ಲಿ ಸೋನಿ ಸೆನ್ಸಾರ್‌ ಒಳಗೊಂಡ 64 ಮೆಗಾಪಿಕ್ಸೆಲ್ AI ಬೆಂಬಲಿತ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಅಲ್ಲದೇ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್‌ ಸೌಲಭ್ಯ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo