ಇಂದಿನಿಂದ Karbonn Rebel ಸ್ಮಾರ್ಟ್‌ಫೋನ್‌ ಸರಣಿ ಸೇಲ್‌ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್‌

ಇಂದಿನಿಂದ Karbonn Rebel ಸ್ಮಾರ್ಟ್‌ಫೋನ್‌ ಸರಣಿ ಸೇಲ್‌ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್‌

ಕಾರ್ಬನ್ ಸಂಸ್ಥೆಯು ಇತ್ತೀಚಿಗೆ ಹೊಸದಾಗಿ ಬಿಡುಗಡೆ ಮಾಡಿರುವ Karbonn Rebel ಸ್ಮಾರ್ಟ್‌ಫೋನ್‌ ಸರಣಿ ಆಕರ್ಷಕ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅಂದಹಾಗೆ ಈ ಮೊಬೈಲ್‌ ಸರಣಿಯು ಇಂದು (ನವೆಂಬರ್ 4 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್‌ ಸರಣಿಯು ಆಕ್ಟಾ-ಕೋರ್ MediaTek Helio G81 ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿರುವ ಜೊತೆಗೆ 90Hz ವರೆಗಿನ ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಅಲ್ಲದೇ ಫೋನ್‌ಗಳು 64 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದಿವೆ. ಅಲ್ಲದೇ ಈ ಮೊಬೈಲ್‌ಗಳು ಆಕರ್ಷಕ ಕಲರ್‌ ಆಯ್ಕೆಯಲ್ಲಿ ಲಭ್ಯವಿದೆ. ಹಾಗಾದರೇ ಕಾರ್ಬನ್ ರೆಬೆಲ್ ಸರಣಿ ಫೋನ್‌ಗಳ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

ಇಂದು Karbonn Rebel ಮೊಬೈಲ್‌ ಸರಣಿ ಸೇಲ್ ಶುರು

ದೇಶೀಯ ಮಾರುಕಟ್ಟೆಯಲ್ಲಿ ಕಾರ್ಬನ್ ಕಂಪನಿಯ ಕಾರ್ಬನ್ ರೆಬೆಲ್ ಸರಣಿ ಇಂದು (ನವೆಂಬರ್ 4 ರಿಂದ) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ. ಈ ಸರಣಿಯ ಪೈಕಿ ಕಾರ್ಬನ್ ರೆಬೆಲ್ 6GB RAM + 128GB ಬೆಲೆಯಲ್ಲಿ ಲಭ್ಯವಾಗಲಿದೆ. ಅಲ್ಲದೇ ಕಾರ್ಬನ್ ರೆಬೆಲ್ ಪ್ರೊ ಮೊಬೈಲ್‌ನ 6GB + 128GB ಸ್ಟೋರೇಜ್‌ ವೇರಿಯಂಟ್‌ ಪಡೆದಿದೆ. ಈ ಎರಡೂ ಮೊಬೈಲ್‌ಗಳು ನವೆಂಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ (Amazon) ಮೂಲಕ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ಕಾರ್ಬನ್ ರೆಬೆಲ್ ನೀಲಿ (Blue), ಚಿನ್ನದ (Gold) ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ. ಮತ್ತೊಂದೆಡೆ, ಕಾರ್ಬನ್ ರೆಬೆಲ್ ಪ್ರೊ ಬ್ಲೂ, ಚೆರ್ರಿ ರೆಡ್, ಗೋಲ್ಡ್‌ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಕಾರ್ಬನ್ ರೆಬೆಲ್ ಸರಣಿ ಫೋನ್‌ಗಳ ಬೆಲೆಯಲ್ಲಿ ಮೊಬೈಲ್‌ ಫೀಚರ್ಸ್‌

ಕಾರ್ಬನ್ ರೆಬೆಲ್ ಸರಣಿಯ ಎರಡೂ ಮೊಬೈಲ್‌ಗಳು 6.75 ಇಂಚಿನ HD+ LCD ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಇದು 90Hz ವರೆಗಿನ ರಿಫ್ರೆಶ್ ರೇಟ್ ಮತ್ತು 650 ನಿಟ್ಸ್‌ (nits) ವರೆಗಿನ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಹಾಗೆಯೇ ಕಾರ್ಬನ್ ರೆಬೆಲ್ ಮಾದರಿಯು 6.7 ಇಂಚಿನ HD+ LCD ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಇದು 120Hz ವರೆಗಿನ ರಿಫ್ರೆಶ್ ರೇಟ್ ಮತ್ತು 720 ನಿಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಅನ್ನು ಒದಗಿಸುತ್ತದೆ. ಹಾಗೆಯೇ ಈ ಎರಡೂ ಫೋನ್‌ಗಳು ಆಕ್ಟಾ-ಕೋರ್ MediaTek Helio G81 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇವು 2.0GHz ವರೆಗಿನ ಗರಿಷ್ಠ ಕ್ಲಾಕ್ ವೇಗವನ್ನು ನೀಡುತ್ತವೆ.

ಕಾರ್ಬನ್ ರೆಬೆಲ್ ಮಾದರಿಯು ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಇದು ಆಟೋಫೋಕಸ್ ಮತ್ತು 80 ಡಿಗ್ರಿ ಫೀಲ್ಡ್ ಆಫ್ ವ್ಯೂ (field of view) ಆಯ್ಕೆಗಳನ್ನು ಒಳಗೊಂಡಿದೆ. ಮತ್ತೊಂದೆಡೆ ಕಾರ್ಬನ್ ರೆಬೆಲ್ ಪ್ರೊ ಮಾದರಿಯು ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಇದರಲ್ಲಿಯೂ ಆಟೋಫೋಕಸ್ ಸೌಲಭ್ಯವಿದೆ. ಇದಲ್ಲದೆ ರೆಬೆಲ್‌ ಪ್ರೊ ಮಾದರಿಯು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.

Manthesh B

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile