IRCTC ವೆಬ್‌ಸೈಟ್‌ನಲ್ಲಿ Tatkal ಟಿಕೆಟ್‌ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

IRCTC ವೆಬ್‌ಸೈಟ್‌ನಲ್ಲಿ Tatkal ಟಿಕೆಟ್‌ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲಿನಲ್ಲಿ ಪ್ರಯಾಣಿಸಬೇಕೆಂದು ಕೊನೆಯ ಕ್ಷಣದಲ್ಲಿ ನಿರ್ಧರಿಸಿದಾಗ ಸಾಮಾನ್ಯ ಟಿಕೆಟ್‌ಗಳು ಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ನೆರವಾಗುವುದು ಭಾರತೀಯ ರೈಲ್ವೆಯ ತತ್ಕಾಲ್ ಟಿಕೆಟ್ ಬುಕಿಂಗ್ ಸೌಲಭ್ಯ. ಆದರೆ Tatkal Ticket ‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬುಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸೀಟುಗಳು ಭರ್ತಿಯಾಗಬಹುದು. ಹೀಗಾಗಿ, ಮುಂಚಿತವಾಗಿ IRCTC ಖಾತೆ ಸಿದ್ಧಪಡಿಸಿಕೊಳ್ಳುವುದು, ಸರಿಯಾದ ಸಮಯಕ್ಕೆ ವೆಬ್‌ಸೈಟ್‌ಗೆ ಲಾಗಿನ್ ಆಗುವುದು ಮತ್ತು ಪ್ರಯಾಣಿಕರ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಮುಖ್ಯ. ಹಾಗಾದರೆ, IRCTC ವೆಬ್‌ಸೈಟ್ ಮೂಲಕ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ? ಎಂಬುದನ್ನು ತಿಳಿಯೋಣ.

Digit.in Survey
✅ Thank you for completing the survey!

Also Read : 50MP ಕ್ಯಾಮೆರಾ ಸೌಲಭ್ಯದ Moto G77 Power ಮೊಬೈಲ್‌ಗೆ ಈಗ ಬೊಂಬಾಟ್‌ ಆಫರ್‌!

Tatkal Ticket ಬುಕಿಂಗ್ ಸಮಯ ಯಾವುದು?

ಭಾರತೀಯ ರೈಲ್ವೆಯ ನಿಯಮದ ಪ್ರಕಾರ, ತತ್ಕಾಲ್ ಟಿಕೆಟ್ ಬುಕಿಂಗ್ ಸಾಮಾನ್ಯವಾಗಿ ರೈಲು ಹೊರಡುವ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಆರಂಭವಾಗುತ್ತದೆ. ಇಲ್ಲಿ ರೈಲು ನಿಮ್ಮ ನಿಲ್ದಾಣದಿಂದ ಹೊರಡುವ ದಿನವನ್ನಲ್ಲ, ರೈಲು ತನ್ನ ಮೂಲ ನಿಲ್ದಾಣದಿಂದ ಹೊರಡುವ ದಿನವನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಎಸಿ ವರ್ಗಗಳ ರೈಲುಗಳ ತತ್ಕಾಲ್ ಟಿಕೆಟ್ ಬೆಳಗ್ಗೆ 10 ಗಂಟೆಗೆ ಆರಂಭ ಹಾಗೂ ನಾನ್ ಎಸಿ ವರ್ಗಗಳ ತತ್ಕಾಲ್ ಟಿಕೆಟ್ ಬೆಳಗ್ಗೆ 11 ಗಂಟೆ ಶುರು.

Book a Confirmed Tatkal Train Ticket-

IRCTC ವೆಬ್‌ಸೈಟ್‌ನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡುವ ವಿಧಾನ

ಹಂತ 1: ಮೊದಲು IRCTC ಅಧಿಕೃತ ವೆಬ್‌ಸೈಟ್ ತೆರೆಯಿರಿ. ನಿಮ್ಮ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ಖಾತೆಯ ಆಧಾರ್ ದೃಢೀಕರಣ ಪೂರ್ಣಗೊಂಡಿದೆಯೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಿ.

ಹಂತ 2: ಪ್ರಯಾಣದ ವಿವರಗಳನ್ನು ನಮೂದಿಸಿ – ಹೊರಡುವ ನಿಲ್ದಾಣ ಹಾಗೂ ತಲುಪುವ ನಿಲ್ದಾಣವನ್ನು ಆಯ್ಕೆ ಮಾಡಿ. ಪ್ರಯಾಣದ ದಿನಾಂಕವನ್ನು ನಮೂದಿಸಿ, ಟಿಕೆಟ್ ಪ್ರಕಾರವಾಗಿ ‘E-ticket’ ಆಯ್ಕೆ ಮಾಡಿ. ನಂತರ ರೈಲುಗಳ ಲಭ್ಯತೆಯನ್ನು ಹುಡುಕಿ.

ಹಂತ 3: ರೈಲುಗಳ ಪಟ್ಟಿ ಕಾಣಿಸಿಕೊಂಡ ನಂತರ Quota ಆಯ್ಕೆಯಲ್ಲಿ TATKAL ಆರಿಸಿ. ನಿಮಗೆ ಬೇಕಾದ ರೈಲು ಮತ್ತು ಪ್ರಯಾಣದ ವರ್ಗವನ್ನು ಆಯ್ಕೆ ಮಾಡಿ, ಸೀಟುಗಳ ಲಭ್ಯತೆಯನ್ನು ಪರಿಶೀಲಿಸಿ. ತತ್ಕಾಲ್ ಕೋಟಾ ಎಲ್ಲ ರೈಲುಗಳಲ್ಲೂ ಅಥವಾ ಎಲ್ಲ ವರ್ಗಗಳಲ್ಲೂ ಲಭ್ಯವಿರಬೇಕೆಂದಿಲ್ಲ.

ಹಂತ 4: ಪ್ರಯಾಣಿಕರ ವಿವರ ಭರ್ತಿ ಮಾಡಿ – Book Now ಮೇಲೆ ಕ್ಲಿಕ್ ಮಾಡಿ. ನಂತರ ಪ್ರತಿಯೊಬ್ಬ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ಅಗತ್ಯವಿದ್ದರೆ ಬರ್ತ್ ಆಯ್ಕೆಯನ್ನು ನಮೂದಿಸಿ. ವಿವರಗಳನ್ನು ತಪ್ಪಿಲ್ಲದೆ ನಮೂದಿಸಿ.

ಹಂತ 5: ಪಾವತಿ ಪೂರ್ಣಗೊಳಿಸಿ – ಪ್ರಯಾಣದ ವಿವರಗಳು ಮತ್ತು ಪ್ರಯಾಣಿಕರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ಲಭ್ಯವಿರುವ ಪಾವತಿ ವಿಧಾನಗಳಲ್ಲಿ ಒಂದನ್ನು ಆಯ್ಕೆ ಮಾಡಿ ಹಣ ಪಾವತಿಸಿ. ಬುಕಿಂಗ್ ಯಶಸ್ವಿಯಾದರೆ PNR ಸಂಖ್ಯೆ ಮತ್ತು ಟಿಕೆಟ್ ವಿವರಗಳು ಕಾಣಿಸುತ್ತವೆ. ಇ-ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile