ಭಾರತದಲ್ಲಿ Karbonn Rebel ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ; ಅಗ್ಗದ ಬೆಲೆ, ಆಕರ್ಷಕ ಫೀಚರ್ಸ್!

Highlights

ಭಾರತದಲ್ಲಿ ಕಾರ್ಬನ್ ರೆಬೆಲ್ ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ

ಕಾರ್ಬನ್ ಸಂಸ್ಥೆಯ ಈ ಫೋನ್‌ಗಳು 64 ಮೆಗಾಪಿಕ್ಸೆಲ್ ಕ್ಯಾಮೆರಾ ಬ್ಯಾಕ್‌ಅಪ್‌ ಪಡೆದಿದೆ

ಕಾರ್ಬನ್ ಈ ಫೋನ್‌ ಮೀಡಿಯಾ ಟೆಕ್ ಹೀಲಿಯೋ G81 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ

ದೇಶೀಯ ಮೂಲದ ಕಾರ್ಬನ್ ಮೊಬೈಲ್‌ ಸಂಸ್ಥೆಯು ಹೊಸದಾಗಿ Karbonn Rebel ಸ್ಮಾರ್ಟ್‌ಫೋನ್‌ ಸರಣಿ ಅನ್ನು ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್‌ ಸರಣಿಯು ಕಾರ್ಬನ್ ರೆಬೆಲ್ ಮತ್ತು ಕಾರ್ಬನ್ ರೆಬೆಲ್ ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೀಲಿಯೋ G81 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿವೆ. ಹಾಗೆಯೇ ಕಾರ್ಬನ್ ರೆಬೆಲ್ ಫೋನ್‌ 7,000mAh ಬ್ಯಾಟರಿ ಸೌಲಭ್ಯ ಪಡೆದಿದೆ. ಅದೇ ರೀತಿ ಕಾರ್ಬನ್ ರೆಬೆಲ್ ಪ್ರೊ ಮೊಬೈಲ್‌ 6,000mAh ಬ್ಯಾಟರಿ ಪಡೆದಿದೆ. ಹಾಗಾದರೆ ಈ ಎರಡೂ ಫೋನ್‌ಗಳ ಬೆಲೆ, ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

Karbonn Rebel ಮೊಬೈಲ್‌ ಸರಣಿ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಕಾರ್ಬನ್ ರೆಬೆಲ್ ಮತ್ತು ಕಾರ್ಬನ್ ರೆಬೆಲ್ ಪ್ರೊ ಅಗ್ಗದ ಬೆಲೆಯ ಫೋನ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ. ಈ ಸರಣಿಯ ಪೈಕಿ ಕಾರ್ಬನ್ ರೆಬೆಲ್ 6GB RAM + 128GB ಬೆಲೆಯಲ್ಲಿ ಲಭ್ಯವಾಗಲಿದೆ. ಅಲ್ಲದೇ ಕಾರ್ಬನ್ ರೆಬೆಲ್ ಪ್ರೊ ಮೊಬೈಲ್‌ನ 6GB + 128GB ಸ್ಟೋರೇಜ್‌ ವೇರಿಯಂಟ್‌ ಪಡೆದಿದೆ. ಈ ಎರಡೂ ಮೊಬೈಲ್‌ಗಳು ನವೆಂಬರ್ 4 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ (Amazon) ಮೂಲಕ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ಕಾರ್ಬನ್ ರೆಬೆಲ್ ನೀಲಿ (Blue), ಚಿನ್ನದ (Gold) ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ. ಮತ್ತೊಂದೆಡೆ, ಕಾರ್ಬನ್ ರೆಬೆಲ್ ಪ್ರೊ ಬ್ಲೂ, ಚೆರ್ರಿ ರೆಡ್, ಗೋಲ್ಡ್‌ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಕಾರ್ಬನ್ ರೆಬೆಲ್ ಸರಣಿ ಫೋನ್‌ಗಳ ಬೆಲೆಯಲ್ಲಿ ಮೊಬೈಲ್‌ ಫೀಚರ್ಸ್‌

ಕಾರ್ಬನ್ ರೆಬೆಲ್ ಸರಣಿಯ ಎರಡೂ ಮೊಬೈಲ್‌ಗಳು 6.75 ಇಂಚಿನ HD+ LCD ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಇದು 90Hz ವರೆಗಿನ ರಿಫ್ರೆಶ್ ರೇಟ್ ಮತ್ತು 650 ನಿಟ್ಸ್‌ (nits) ವರೆಗಿನ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಹಾಗೆಯೇ ಕಾರ್ಬನ್ ರೆಬೆಲ್ ಮಾದರಿಯು 6.7 ಇಂಚಿನ HD+ LCD ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಇದು 120Hz ವರೆಗಿನ ರಿಫ್ರೆಶ್ ರೇಟ್ ಮತ್ತು 720 ನಿಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಅನ್ನು ಒದಗಿಸುತ್ತದೆ. ಹಾಗೆಯೇ ಈ ಎರಡೂ ಫೋನ್‌ಗಳು ಆಕ್ಟಾ-ಕೋರ್ MediaTek Helio G81 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇವು 2.0GHz ವರೆಗಿನ ಗರಿಷ್ಠ ಕ್ಲಾಕ್ ವೇಗವನ್ನು ನೀಡುತ್ತವೆ.

ಕಾರ್ಬನ್ ರೆಬೆಲ್ ಮಾದರಿಯು ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಇದು ಆಟೋಫೋಕಸ್ ಮತ್ತು 80 ಡಿಗ್ರಿ ಫೀಲ್ಡ್ ಆಫ್ ವ್ಯೂ (field of view) ಆಯ್ಕೆಗಳನ್ನು ಒಳಗೊಂಡಿದೆ. ಮತ್ತೊಂದೆಡೆ ಕಾರ್ಬನ್ ರೆಬೆಲ್ ಪ್ರೊ ಮಾದರಿಯು ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಇದರಲ್ಲಿಯೂ ಆಟೋಫೋಕಸ್ ಸೌಲಭ್ಯವಿದೆ. ಇದಲ್ಲದೆ ರೆಬೆಲ್‌ ಪ್ರೊ ಮಾದರಿಯು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile