Zero1 Awards
Digit.in
  • ಸುದ್ದಿಗಳು
  • ಫೀಚರ್‌ಗಳು
  • ಹೇಗೆ?
  • ವೆಬ್ ಸ್ಟೋರಿ
  • English
  • Hindi
  • Tamil
  • Kannada
  • Telugu
  • Malayalam
  • Bangla
  • Marathi
Login / Register is disabled Login
Home » News » General » PF ಖಾತೆದಾರರಿಗೆ ಗುಡ್‌ನ್ಯೂಸ್: ಇನ್ಮುಂದೆ WhatsApp ಮೂಲಕವೇ ಬ್ಯಾಲೆನ್ಸ್ ಮತ್ತು ಪಾಸ್‌ಬುಕ್ ಮಾಹಿತಿ

PF ಖಾತೆದಾರರಿಗೆ ಗುಡ್‌ನ್ಯೂಸ್: ಇನ್ಮುಂದೆ WhatsApp ಮೂಲಕವೇ ಬ್ಯಾಲೆನ್ಸ್ ಮತ್ತು ಪಾಸ್‌ಬುಕ್ ಮಾಹಿತಿ

By Manthesh B | Updated on 02-Nov-2026
Add DIGIT as a preferred source
Follow Us on Google News Follow Us
PF ಖಾತೆದಾರರಿಗೆ ಗುಡ್‌ನ್ಯೂಸ್: ಇನ್ಮುಂದೆ WhatsApp ಮೂಲಕವೇ ಬ್ಯಾಲೆನ್ಸ್ ಮತ್ತು ಪಾಸ್‌ಬುಕ್ ಮಾಹಿತಿ
Manthesh B Manthesh B
02-Nov-2026

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಮತ್ತಷ್ಟು ಸುಲಭವಾಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದೆ. ಇಪಿಎಫ್‌ಒ ತನ್ನ 74ನೇ ಸಂಸ್ಥಾಪನಾ ದಿನದ ಅಂಗವಾಗಿ ಕೆಲವು ಪ್ರಮುಖ PF ಸೇವೆಗಳನ್ನು ವಾಟ್ಸಾಪ್‌ಗೆ ಪರಿಚಯಿಸಿದ್ದು, ಅರ್ಹ ನಿಷ್ಕ್ರಿಯ ಪಿಎಫ್ ಖಾತೆಗಳಲ್ಲಿರುವ ಹಣವನ್ನು ಆಟೋಮ್ಯಾಟಿಕ್ ಆಗಿ ಇತ್ಯರ್ಥಪಡಿಸುವ ವ್ಯವಸ್ಥೆಯನ್ನೂ ಆರಂಭಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಈ ಹೊಸ ಉಪಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇದರ ಮುಖ್ಯ ಉದ್ದೇಶ ಪಿಎಫ್ ಸದಸ್ಯರು ಕಚೇರಿಗಳಿಗೆ ಅಲೆದಾಡದೆ, ಡಿಜಿಟಲ್ ವೇದಿಕೆಗಳ ಮೂಲಕವೇ ಅಗತ್ಯ ಸೇವೆಗಳನ್ನು ಸುಲಭವಾಗಿ ಪಡೆಯುವಂತೆ ಮಾಡುವುದು.

Digit.in Survey
✅ Thank you for completing the survey!

Also Read : ದೀರ್ಘಾವಧಿ ವ್ಯಾಲಿಡಿಟಿ ಜೊತೆಗೆ ಅಧಿಕ ಡೇಟಾ ಸೌಲಭ್ಯಕ್ಕಾಗಿ Jio ಟೆಲಿಕಾಂನ ಈ ಪ್ಲಾನ್‌ ಉತ್ತಮ!

ವಾಟ್ಸಾಪ್‌ನಲ್ಲೇ PF ಬ್ಯಾಲೆನ್ಸ್ ಮಾಹಿತಿ

ಇನ್ಮುಂದೆ EPFO ಚಂದಾದಾರರು ತಮ್ಮ ಪಿಎಫ್ ಖಾತೆಯ ಕೆಲವು ಪ್ರಮುಖ ಮಾಹಿತಿಗಳನ್ನು ವಾಟ್ಸಾಪ್‌ ಮೂಲಕವೇ ಪಡೆದುಕೊಳ್ಳಬಹುದು. ಇಪಿಎಫ್‌ಒನ ಅಧಿಕೃತವಾಗಿ ಪರಿಶೀಲಿಸಲಾದ ವಾಟ್ಸಾಪ್‌ ಸೇವೆಯ ಮೂಲಕ ಪಿಎಫ್ ಖಾತೆಯಲ್ಲಿರುವ ಒಟ್ಟು ಬ್ಯಾಲೆನ್ಸ್, ಇತ್ತೀಚಿನ ಐದು ವಹಿವಾಟುಗಳ ವಿವರ, ಪಿಎಫ್ ಪಾಸ್‌ಬುಕ್ ಮಾಹಿತಿ

ಹಾಗೆಯೇ ಪಿಎಂವಿಬಿಆರ್‌ವೈ (PMVBRY) ಯೋಜನೆಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸದಸ್ಯರಿಗೆ ವೈಯಕ್ತಿಕ ಮಾರ್ಗದರ್ಶನ ಮತ್ತು ನೆರವನ್ನೂ ಒದಗಿಸಲಾಗುತ್ತದೆ.

EPFO Introduces New WhatsApp Services to Check PF Balance
Ai Image

ಈ ಹೊಸ ವ್ಯವಸ್ಥೆಯಿಂದ ಸದಸ್ಯರು ಪಿಎಫ್ ಮಾಹಿತಿಗಾಗಿ ಪ್ರತ್ಯೇಕವಾಗಿ ಕಚೇರಿಗಳಿಗೆ ಭೇಟಿ ನೀಡುವ ಅಥವಾ ಇತರ ಡಿಜಿಟಲ್ ಸೇವೆಗಳನ್ನು ಹುಡುಕುವ ಅಗತ್ಯ ಕಡಿಮೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ ವಾಟ್ಸಪ್‌ನಲ್ಲೇ ಅಗತ್ಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದು ಈ ಉಪಕ್ರಮದ ಪ್ರಮುಖ ವಿಶೇಷತೆಯಾಗಿದೆ.

ಪಿಎಫ್ ಖಾತೆಗಳ ಹಣ ಆಟೋಮ್ಯಾಟಿಕ್ ಸೆಟಲ್‌

ಇಪಿಎಫ್‌ಒ ಆರಂಭಿಸಿರುವ ಮತ್ತೊಂದು ಪ್ರಮುಖ ಉಪಕ್ರಮವೆಂದರೆ ಅರ್ಹ ನಿಷ್ಕ್ರಿಯ ಪಿಎಫ್ ಖಾತೆಗಳಲ್ಲಿರುವ ಹಣವನ್ನು ಸ್ವಯಂಚಾಲಿತವಾಗಿ ಇತ್ಯರ್ಥಪಡಿಸುವ ವ್ಯವಸ್ಥೆ. ಈ ಹೊಸ ನಿಯಮದ ಪ್ರಕಾರ 1,000 ರೂ.ಗಳು ಅಥವಾ ಅದಕ್ಕಿಂತ ಕಡಿಮೆ ಬಾಕಿ ಹೊಂದಿರುವ ಆಧಾರ್ ಪರಿಶೀಲಿತ ನಿಷ್ಕ್ರಿಯ ಇಪಿಎಫ್ ಖಾತೆಗಳ ಸದಸ್ಯರು ಹಣ ಪಡೆಯಲು ಪ್ರತ್ಯೇಕವಾಗಿ ಕ್ಲೈಮ್ ಸಲ್ಲಿಸುವ ಅಗತ್ಯವಿಲ್ಲ. ಅಗತ್ಯ ಗುರುತು ಮತ್ತು ಬ್ಯಾಂಕ್ ಖಾತೆ ಪರಿಶೀಲನೆ ಪೂರ್ಣಗೊಂಡ ನಂತರ, ಇಪಿಎಫ್‌ಒ ಸ್ವಯಂಚಾಲಿತವಾಗಿಯೇ ಇತ್ಯರ್ಥ ಪ್ರಕ್ರಿಯೆಯನ್ನು ಆರಂಭಿಸಲಿದೆ. ಇದರಿಂದ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಾಕಿ ಹಣ ವರ್ಗಾವಣೆಯಾಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Latest Article
16GB RAM ಸೌಲಭ್ಯದ Xiaomi 17 Ultra ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ! 16GB RAM ಸೌಲಭ್ಯದ Xiaomi 17 Ultra ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!
Poco X8 Pro Max ಮೊಬೈಲ್‌ ಬೆಲೆಯಲ್ಲಿ ಸಖತ್ ಡಿಸ್ಕೌಂಟ್‌; ಜಬರ್ದಸ್ತ್ ಫೀಚರ್ಸ್‌ Poco X8 Pro Max ಮೊಬೈಲ್‌ ಬೆಲೆಯಲ್ಲಿ ಸಖತ್ ಡಿಸ್ಕೌಂಟ್‌; ಜಬರ್ದಸ್ತ್ ಫೀಚರ್ಸ್‌
Kannada Rajyotsava: ಜೈ ಕರ್ನಾಟಕ, ಜೈ ಕನ್ನಡಾಂಬೆ: ಇಲ್ಲಿವೆ 25ಕ್ಕೂ ಅಧಿಕ ಕನ್ನಡ ರಾಜ್ಯೋತ್ಸವದ ಶುಭಾಶಯಗಳು Kannada Rajyotsava: ಜೈ ಕರ್ನಾಟಕ, ಜೈ ಕನ್ನಡಾಂಬೆ: ಇಲ್ಲಿವೆ 25ಕ್ಕೂ ಅಧಿಕ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Vi ಟೆಲಿಕಾಂನ 2099 ರೂ.ಗಳ ಯೋಜನೆಯಲ್ಲಿ ಭರ್ಜರಿ ವ್ಯಾಲಿಡಿಟಿ! ರೀಚಾರ್ಜ್‌ ಮಾಡ್ತೀರಾ? Vi ಟೆಲಿಕಾಂನ 2099 ರೂ.ಗಳ ಯೋಜನೆಯಲ್ಲಿ ಭರ್ಜರಿ ವ್ಯಾಲಿಡಿಟಿ! ರೀಚಾರ್ಜ್‌ ಮಾಡ್ತೀರಾ?
7,200mAh ಬ್ಯಾಟರಿ ಒಳಗೊಂಡ Vivo T5x 5G ಮೊಬೈಲ್‌ ಖರೀದಿಗೆ ಇದುವೇ ಸಕಾಲ! 7,200mAh ಬ್ಯಾಟರಿ ಒಳಗೊಂಡ Vivo T5x 5G ಮೊಬೈಲ್‌ ಖರೀದಿಗೆ ಇದುವೇ ಸಕಾಲ!
Most Searched Mobile Phones
  • Best Phones Under 10000
  • Best Phones Under 20000
  • Best Phones Under 30000
  • Upcoming Phones in 2026
  • Latest Mobile Phones
Latest Phones
  • OPPO F35 Pro
  • OPPO F35
  • Xiaomi Redmi 17
  • Google 11 Pro Fold
  • Vivo T5 5G
Mobile Recharge Plans
  • Airtel Recharge Plans
  • BSNL Recharge Plans
  • Reliance JIO Recharge Plans
  • VI Recharge Plans
Kannada Tech News
  • Telecom: ಈ ರಿಚಾರ್ಜ್ ಮಾಡ್ಕೊಳ್ಳಿ JioHotstar, Netflix ಮತ್ತು ZEE5 ಎಲ್ಲ ಉಚಿತ!
  • How To: ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?
  • icon
  • icon
  • icon
  • icon
SUBSCRIBE Subscribe for the industry's biggest tech news
Enter your email to get notified about our new solutions
By submitting your email, you agree to our
Terms and Privacy Notice.
CONNECT WITH US
  • icon Times Center, FC-6, 1st Floor, Sector 16A, Film City, Noida - 201301
  • icon (+91-120-6776999)
    (1800 121 0005)
  • icon Suggestion: editor@digit.in
    Business: business@digit.in
    Website: sales@digit.in
© 2026 Digit.in, All rights reserved
  • icon
  • icon
  • icon
  • icon
icon
  • About Us
  • Contact Us
  • Advertise with us
  • Regulatory
  • Terms & Conditions
  • Privacy Policy
  • Disclaimer
© 2026 Digit.in, All rights reserved
Digit.in
Logo
Digit.in
Logo