JioPhone Next: ಮತ್ತಷ್ಟು ಬೆಲೆ ಇಳಿಕೆ ಪಡೆದ ಜಿಯೋಫೋನ್! ಹೊಸ ಬೆಲೆ ಮತ್ತು ಫೀಚರ್ಗಳು ಇಲ್ಲಿವೆ

JioPhone Next: ಮತ್ತಷ್ಟು ಬೆಲೆ ಇಳಿಕೆ ಪಡೆದ ಜಿಯೋಫೋನ್! ಹೊಸ ಬೆಲೆ ಮತ್ತು ಫೀಚರ್ಗಳು ಇಲ್ಲಿವೆ
HIGHLIGHTS

ಭಾರತದಲ್ಲಿ ರಿಲಯನ್ಸ್ ಜಿಯೋ ತನ್ನ ಟೆಲಿಕಾಂ ವಲಯದೊಂದಿಗೆ ಈಗ ಸ್ಮಾರ್ಟ್ಫೋನ್ ವಿಭಾಗಕ್ಕೂ ಪ್ರವೇಶಿಸಿದೆ

ಜಿಯೋಫೋನ್ ನೆಕ್ಸ್ಟ್ ಭಾರತದಲ್ಲಿ ಸೀಮಿತ ಅವಧಿಗೆ ರೂ 4,499 ಬೆಲೆಯಲ್ಲಿ ಲಭ್ಯವಿರುತ್ತದೆ

ಹೊಸ JioPhone Next ಖರೀದಿಯ ಮೇಲೆ 2000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು

ಭಾರತದಲ್ಲಿ ರಿಲಯನ್ಸ್ ಜಿಯೋ ತನ್ನ ಟೆಲಿಕಾಂ ವಲಯದೊಂದಿಗೆ ಈಗ ಸ್ಮಾರ್ಟ್ಫೋನ್ ವಿಭಾಗಕ್ಕೂ ಪ್ರವೇಶಿಸಿದೆ. ಮತ್ತಷ್ಟು ಬೆಲೆ ಇಳಿಕೆ ಪಡೆದ ಜಿಯೋಫೋನ್! ಹೊಸ ಬೆಲೆ ಮತ್ತು ಫೀಚರ್ಗಳನ್ನು ಮುಂದೆ ನೋಡಿ. ಕಂಪನಿ ತನ್ನ ಜನಪ್ರಿಯ ಸ್ಮಾರ್ಟ್ಫೋನ್ JioPhone Next ಬಿಡುಗಡೆಯಾಗಿ ಒಂದು ವರ್ಷದ ನಂತರ ಈಗ ಜಿಯೋ ಕಂಪನಿ ಭರ್ಜರಿಯ ಆಫರ್ ಅನ್ನು ತಂದಿದೆ. ಈ ಮೂಲಕ ಬಳಕೆದಾರರು ಒಂದು ಲಿಮಿಟೆಡ್ ಆಫರ್ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಹೊಂದಿದ್ದಾರೆ. 

JioPhone Next ಆಫರ್ ಪಡೆಯುವುದು ಹೇಗೆ?

ಜಿಯೋಫೋನ್ ನೆಕ್ಸ್ಟ್ ಭಾರತದಲ್ಲಿ ಸೀಮಿತ ಅವಧಿಗೆ ರೂ 4,499 ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ರಿಲಯನ್ಸ್ ಜಿಯೋ ಘೋಷಿಸಿದೆ. ಆದರೆ ಷರತ್ತುಗಳೆಂದರೆ ಆಸಕ್ತ ಖರೀದಿದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮಾತ್ರ 6499 ರೂಗಳ ಫೋನ್ ಅನ್ನು 4,499 ರೂಗಳಿಗೆ ಖರೀದಿಸಬಹುದು. ವರದಿಗಳ ಪ್ರಕಾರ ಆಸಕ್ತ ಖರೀದಿದಾರರು ಯಾವುದೇ 4G ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ JioPhone Next ಖರೀದಿಯ ಮೇಲೆ 2000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.

JioPhone Next ಸ್ಪೆಸಿಫಿಕೇಷನ್

JioPhone Next ಒಂದು ಕೈಗೆಟುಕುವ ಬೆಲೆಯ 4G ಸ್ಮಾರ್ಟ್‌ಫೋನ್ ಆಗಿದ್ದು ಅದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಜೊತೆಗೆ 5.45-ಇಂಚಿನ ಮಲ್ಟಿಟಚ್ HD+ (720×1440 ಪಿಕ್ಸೆಲ್‌ಗಳು) ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಡ್ಯುಯಲ್-ಸಿಮ್ 4G ಸ್ಮಾರ್ಟ್‌ಫೋನ್ ಮತ್ತು ಒಳಗೆ 3500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಹಿಂಭಾಗದಲ್ಲಿ 13MP ಸೆನ್ಸರ್ ಹೊಂದಿರುವ ಒಂದೇ ಕ್ಯಾಮೆರಾವಿದೆ. ಮತ್ತು ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 8MP ಸೆನ್ಸರ್ ಹೊಂದಿದೆ.

JioPhone Next ನ ಪ್ರಮುಖ ಅಂಶವೆಂದರೆ ಅದರ OS. ಓಎಸ್‌ಗೆ ಪ್ರಗತಿ ಓಎಸ್ ಎಂದು ಹೆಸರಿಸಲಾಗಿದೆ. ಮತ್ತು ಇದನ್ನು ಭಾರತೀಯ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 215 ನಿಂದ ಚಾಲಿತವಾಗಿದ್ದು 2GB ಯ RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಅನ್ನು ನೊಳಗೊಂಡಿದೆ. JioPhone ನೆಕ್ಸ್ಟ್ ಬಳಕೆದಾರರಿಗೆ ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಲು ಅನುಮತಿಸುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo