ಇಂದು ಹೊಸ ಕಲರ್‌ನಲ್ಲಿ ಎಂಟ್ರಿ ಕೊಡಲಿದೆ iQOO 15 ಮೊಬೈಲ್! ಫೀಚರ್ಸ್ ನೋಡಿ
ಇಂದು (ಏಪ್ರಿಲ್ 1 ರಂದು) ಹೊಸ ಬಣ್ಣದಲ್ಲಿ ಐಕ್ಯೂ 15 ಫೋನ್ ಲಾಂಚ್
ಐಕ್ಯೂ 15 ಸ್ಮಾರ್ಟ್‌ಫೋನ್ 144Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿದೆ
ಐಕ್ಯೂ 15 ಫೋನ್ 7000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ
ಲೀಡಿಂಗ್ ಮೊಬೈಲ್ ಸಂಸ್ಥೆಯಗಳ ಪೈಕಿ ಒಂದೆನಿಸಿರುವ iQOO ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡಿರುವ iQOO 15 ಮೊಬೈಲ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಐಕ್ಯೂ ಕಂಪನಿಯು ಹೊಸ iQOO 15 ಮೊಬೈಲ್ Apex ಕಲರ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಇಂದು (ಏಪ್ರಿಲ್ 1 ರಂದು) ಹೊಸದಾಗಿ Apex ಕಲರ್ ಆಯ್ಕೆಯಲ್ಲಿ ಫೋನ್ ಅನ್ನು ಪರಿಚಯಿಸಲಿದೆ. ಇನ್ನು ಈ ಮೊಬೈಲ್ 7000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ 100W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಹಾಗಾದರೆ ಇಂದು ಅಪೆಕ್ಸ್ ಕಲರ್‌ನಲ್ಲಿ ಬರಲಿರುವ ಹೊಸ iQOO 15 ಫೋನಿನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ಟ್ರಿಪಲ್ 50MP ಕ್ಯಾಮೆರಾ ಇರುವ Oppo Find X8 Pro ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ!
iQOO 15 ಮೊಬೈಲ್ Apex ಇಂದು ಲಾಂಚ್
ಜನಪ್ರಿಯ ಐಕ್ಯೂ ಸಂಸ್ಥೆಯು ನೂತನವಾಗಿ ಐಕ್ಯೂ 15 ಫೋನ್ ಅಪೆಕ್ಸ್ ಬಣ್ಣದಲ್ಲಿ ಅನ್ನು ಇಂದು (ಏಪ್ರಿಲ್ 1 ರಂದು) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಲಾಂಚ್ ಬಳಿಕ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಫೋನಿನ ಬೆಲೆಯ ಬಗ್ಗೆ ಕಂಪನಿಯು ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ಐಕ್ಯೂ 15 ಅಪೆಕ್ಸ್ ಫೀಚರ್ಸ್ ಮಾಹಿತಿ
ಹೊಸ ಐಕ್ಯೂ 15 ಅಪೆಕ್ಸ್ ಮೊಬೈಲ್ 6.85 ಇಂಚಿನ Samsung 2K M14 LTPO OLED ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್ 2600 nits ಗ್ಲೋಬಲ್ ಪೀಕ್ ಬ್ರೈಟ್ನೆಸ್ ಪಡೆದಿದೆ. ಈ ಮೊಬೈಲ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 16GB ವರೆಗಿನ RAM ಜೊತೆಗೆ 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP68/IP69 ರೇಟಿಂಗ್ ಸೌಲಭ್ಯ ಒಳಗೊಂಡಿದೆ.
ಐಕ್ಯೂ 15 ಅಪೆಕ್ಸ್ ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಸೆನ್ಸರ್ ಸೌಲಭ್ಯ ಹೊಂದಿವೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಮೆಗಾಪಿಕ್ಸಲ್ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 7000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 100W ವೈರ್ಡ್ ಚಾರ್ಜಿಂಗ್ ಬೆಂಬಲ ಸಹ ಪಡೆದುಕೊಂಡಿದೆ. ಅಲ್ಲದೇ ಇದು ಸಿಮೆಟ್ರಿಕಲ್ ಡ್ರಮ್ ಮಾಸ್ಟರ್ ಸ್ಟೀರಿಯೊ ಸ್ಪೀಕರ್‌ಗಳು, 4D ಡ್ಯುಯಲ್-ಆಕ್ಸಿಸ್ ವೈಬ್ರೇಶನ್ ಮೋಟಾರ್ ಹಾಗೂ ಅಲ್ಟ್ರಾಸಾನಿಕ್ 3D ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile