ಜನಪ್ರಿಯ ಇ ಕಾಮರ್ಸ್ ತಾಣ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಇದೀಗ Flipkart Summer (Sasa Lele) Sale ಘೋಷಿಸಿದೆ. ಈ ಮಾರಾಟದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್ ಸೇರಿದಂತೆ ಇತರೆ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಅದರಲ್ಲಿಯೂ ಮುಖ್ಯವಾಗಿ ಆಪಲ್ ಸಂಸ್ಥೆಯ ಐಫೋನ್ 17 (iPhone 17) ಬೊಂಬಾಟ್ ಡಿಸ್ಕೌಂಟ್ ದರದಲ್ಲಿ ಲಭ್ಯವಾಗಲಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಆಪಲ್ ಸಂಸ್ಥೆಯ ಈ ಮೊಬೈಲ್ A19 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ LTPO ಪ್ಯಾನೆಲ್ ಜೊತೆಗೆ ಆಲ್ವೇಸ್ ಆನ್ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗಾದರೆ ಫ್ಲಿಪ್‌ಕಾರ್ಟ್ ಸಮ್ಮರ್ ಸೇಲ್ಸ್ ದಿನಾಂಕ ಹಾಗೂ ಐಫೋನ್ 17 ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Samsung ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ!
ಫ್ಲಿಪ್‌ಕಾರ್ಟ್ ಘೋಷಿಸಿರುವ ಈ ಸಮ್ಮರ್ ಸೇಲ್ ಮಾರಾಟವು ಇದೇ ಮೇ 9 ರಂದು ಪ್ರಾರಂಭ ಆಗಲಿದೆ. ಆದರೆ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಮೇ 8 ರಂದು ಮಾರಾಟ ತೆರೆಯುತ್ತದೆ. ಈ ಮಾರಾಟದಲ್ಲಿ ಐಫೋನ್ 17 ಮೊಬೈಲ್ ಆಕರ್ಷಕ ಫೀಚರ್ಸ್ ಮೂಲಕ ಗಮನ ಸೆಳೆದಿದೆ. ಈ ವಿಶೇಷ ಸೇಲ್‌ನಲ್ಲಿ ಈ ಮೊಬೈಲ್‌ನ 256GB ಸ್ಟೋರೇಜ್ ವೇರಿಯಂಟ್ ಅನ್ನು 71,900 ರೂ.ಗಳಿಗೆ ಖರೀದಿಸುವ ಚಾನ್ಸ್ ಲಭ್ಯವಾಗುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್ ಬ್ಲ್ಯಾಕ್, ಪಿಂಕ್, ಮಿಸ್ಟ್ ಬ್ಲೂ, ಲ್ಯಾವೆಂಡರಾ, ಸಾಗಾ ಹಾಗೂ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
ಐಫೋನ್ 17 ಮೊಬೈಲ್ ಸಂಸ್ಥೆಯ A19 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು ಇದು ಆಪಲ್‌ನ ಇಂಟೆಲಿಜೆನ್ಸ್ ಫೀಚರ್ಸ್‌ಗಳ ಸಂಪೂರ್ಣ ಸೂಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ 6.3 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಅನ್ನು ಪಡೆದಿದ್ದು, 3,000 nits ಬ್ರೈಟ್ನೆಸ್ ಜೊತೆಗೆ 120Hz ಪ್ರೊಮೋಷನ್ ಹೊಂದಿದೆ. ಫೋಟೋಗ್ರಫಿಗಾಗಿ ಈ ಫೋನ್ 48MP ವೈಡ್ ಆಂಗಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ ದ್ವಿತೀಯ ಕ್ಯಾಮೆರಾ ಸಹ 48MP ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 18MP ಕ್ಯಾಮೆರಾ ರಚನೆ ಪಡೆದುಕೊಂಡಿದೆ.
ಈ ಫೋನ್ 256GB ಸ್ಟೋರೇಜ್ ಹಾಗೂ 512GB ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ವೈ-ಫೈ 7, ಬ್ಲೂಟೂತ್ 6, ಮತ್ತು ಯುಎಸ್‌ಬಿ-ಸಿ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಆಪಲ್ ಇಂಟೆಲಿಜೆನ್ಸ್, ಆಕ್ಷನ್ ಬಟನ್, ಡೈನಾಮಿಕ್ ಐಲ್ಯಾಂಡ್ ಹಾಗೂ ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಸೌಲಭ್ಯ ಪಡೆದುಕೊಂಡಿದೆ.