ಇಂದು OPPO Find X10 ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ; ನಿರೀಕ್ಷಿತ ಫೀಚರ್ಸ್‌ ನೋಡಿ

ಒಪ್ಪೋ ಮೊಬೈಲ್‌ ಸಂಸ್ಥೆಯು ತನ್ನ ಹೊಸ OPPO Find X10 series ಸ್ಮಾರ್ಟ್‌ಫೋನ್‌ ಸರಣಿ ಅನ್ನು ಇಂದು (ಅಕ್ಟೋಬರ 22 ರಂದು) ಭಾರತದಲ್ಲಿ ಪರಿಚಯಿಸಲು ತಯಾರಾಗಿದೆ. ಮುಂಬರುವ ಹೊಸ ಸರಣಿಯಲ್ಲಿ ಒಪ್ಪೋ ಫೈಂಡ್‌ X10 ಮತ್ತು ಒಪ್ಪೋ ಫೈಂಡ್‌ X10 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಈ ಫೋನ್‌ಗಳ ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆಯಲಾಗಿದೆ. ಈ ಎರಡೂ ಫೋನ್‌ಗಳು ಅತ್ಯುತ್ತಮವಾದ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರಲಿವೆ. ಬಿಡುಗಡೆ ಮುನ್ನವೇ ಇದರ ನಿರೀಕ್ಷಿತ ಫೀಚರ್ಸ್‌ ಕುತೂಹಲ ಹೆಚ್ಚಿಸಿವೆ. ಹಾಗಾದರೇ ಒಪ್ಪೋ ಫೈಂಡ್‌ X10 ಫೋನ್‌ ಸರಣಿಯ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Also Read : Redmi 17C 5G ಮೊಬೈಲ್‌ ಈಗ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯ! 6,000mAh ಬ್ಯಾಟರಿ ಸೌಲಭ್ಯ

ಇಂದು OPPO Find X10 series ಸರಣಿ ಲಾಂಚ್

ಒಪ್ಪೋ ಮೊಬೈಲ್‌ ಸಂಸ್ಥೆಯ ನೂತನ ಒಪ್ಪೋ ಫೈಂಡ್‌ X10 ಸರಣಿಯ ಫೋನ್‌ ಲಾಂಚ್‌ ಮುನ್ನವೇ ಲೀಕ್ ಮಾಹಿತಿಗಳ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ಸರಣಿಯು ಭಾರತದಲ್ಲಿ ಇಂದು (ಅಕ್ಟೋಬರ 22 ರಂದು) ಸಂಜೆ 4:45 ಗಂಟೆಗೆ ಫ್ಲಿಪ್‌ಕಾರ್ಟ್‌ ಮೂಲಕ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇನ್ನು ಈ ಮೊಬೈಲ್‌ಗಳು ಆಕರ್ಷಕ ಕಲರ್‌ ಆಯ್ಕೆ ಪಡೆದಿರಲಿವೆ. ಹಾಗೆಯೇ ಒಪ್ಪೋ ಫೈಂಡ್‌ X10 ಮೂಲ ವೇರಿಯಂಟ್ 89,990 ರೂ.ಗಳು ಮತ್ತು ಒಪ್ಪೋ ಫೈಂಡ್‌ X10 ಪ್ರೊ ಮ್ಯಾಕ್ಸ್‌ ವೇರಿಯಂಟ್ 1,29,990 ರೂ.ಗಳ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ಅಂದಾಜಿಸಲಾಗಿದೆ.

ಒಪ್ಪೋ ಫೈಂಡ್‌ X10 ಸರಣಿಯ ನಿರೀಕ್ಷಿತ ಫೀಚರ್ಸ್‌

ಒಪ್ಪೋ ಫೈಂಡ್‌ X10 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಹಲವು ಪ್ರೀಮಿಯಂ ಫೀಚರ್‌ಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್‌ನಲ್ಲಿ 2nm ತಂತ್ರಜ್ಞಾನದಲ್ಲಿ ತಯಾರಿಸಲಾದ MediaTek Dimensity 9600 Pro ಪ್ರೊಸೆಸರ್ ಪಡೆದಿರಲಿದ್ದು, ಇದು 4.55GHz ಗರಿಷ್ಠ ಕ್ಲಾಕ್‌ ಸ್ಪೀಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಫೋನ್‌ನ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಒಪ್ಪೋ ತನ್ನದೇ ಆದ ‘Laminar Flow Engine’ ತಂತ್ರಜ್ಞಾನವನ್ನೂ ನೀಡಲಿದೆ ಎನ್ನಲಾಗಿದೆ.

ಕ್ಯಾಮೆರಾ ವಿಭಾಗದಲ್ಲೂ ಒಪ್ಪೋ ಫೈಂಡ್‌ X10 ಪ್ರೊ ಮ್ಯಾಕ್ಸ್‌ ವಿಶೇಷತೆ ಹೊಂದಿರಲಿದೆ. ಇದರ ಹಿಂಭಾಗದಲ್ಲಿ 200MP ರೆಸಲ್ಯೂಶನ್ ಹೊಂದಿರುವ ಮೂರು ಕ್ಯಾಮೆರಾ ಸೆನ್ಸರ್‌ಗಳನ್ನು ನೀಡುವ ಸಾಧ್ಯತೆಗಳು ಇವೆ. ಈ ರೀತೀಯ ಕ್ಯಾಮೆರಾ ಫೀಚರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಸ್ಮಾರ್ಟ್‌ಫೋನ್ ಇದಾಗಲಿದೆ ಎಂಬ ನಿರೀಕ್ಷೆಯಿದೆ. ಫೋಟೊಗಳ ಗುಣಮಟ್ಟವನ್ನು ಹೆಚ್ಚಿಸಲು ‘LUMO Hyper Pixel’ ಮತ್ತು ‘LUMO True Engines’ ತಂತ್ರಜ್ಞಾನಗಳನ್ನೂ ಅಳವಡಿಸಲಾಗುತ್ತದೆ.

ಸಂಸ್ಥೆಯ ಈ ಹಿಂದಿನ ಒಪ್ಪೋ ಫೈಂಡ್ X9 ಸರಣಿಯು ತನ್ನ ಕ್ಯಾಮೆರಾ ಸಾಮರ್ಥ್ಯದಿಂದ ಗಮನ ಸೆಳೆದಿತ್ತು. ಹೀಗಾಗಿ ಹೊಸ ಫೈಂಡ್ X10 ಸರಣಿಯಲ್ಲೂ ಅತ್ಯುತ್ತಮ ಫೋಟೊಗ್ರಫಿ ಅನುಭವವನ್ನು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಒಪ್ಪೋ ಫೈಂಡ್‌ X10 ಪ್ರೊ ಮ್ಯಾಕ್ಸ್‌ ಈ ಸರಣಿಯ ಅತ್ಯುನ್ನತ ಮಾದರಿಯಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದೇ ವೇಳೆ, ಈ ವರ್ಷ ಒಪ್ಪೋ ಭಾರತದಲ್ಲಿ ಒಪ್ಪೋ ಫೈಂಡ್‌ X10 ಅಲ್ಟ್ರಾ ಮಾಡೆಲ್‌ ಅನ್ನು ಬಿಡುಗಡೆ ಮಾಡದಿರಬಹುದು ಎಂದು ವರದಿಗಳು ಸೂಚಿಸಿವೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :