Samsung ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ!

HIGHLIGHTS

ಸ್ಯಾಮ್‌ಸಂಗ್‌ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ

ಬೆಲೆ ಪರಿಷ್ಕರಣೆಯು ಮೇ 1 ರಿಂದ ಜಾರಿಯಾಗಿದೆ ಎನ್ನಲಾಗಿದೆ

ಗ್ಯಾಲಕ್ಸಿ M ಹಾಗೂ ಗ್ಯಾಲಕ್ಸಿ F ಫೋನ್‌ಗಳ ದರದಲ್ಲಿ 1,000 ರೂ.ಗಳ ಏರಿಕೆ

Samsung ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ!

ದಕ್ಷಿಣ ಕೊರಿಯಾದ ಟೆಕ್ ದೈತ್ಯ Samsung ಮೊಬೈಲ್‌ ಬ್ರಾಂಡ್‌ನ ಕೆಲವು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅದರಲ್ಲಿಯೂ ಮುಖ್ಯವಾಗಿ ಸಂಸ್ಥೆಯ ಬಜೆಟ್‌ ದರದ ಮೊಬೈಲ್‌ಗಳು ಹೆಚ್ಚಿನ ಗಮನ ಸೆಳೆದಿವೆ. ಆದರೆ ಇದೀಗ ಈ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದ್ದು, ಗ್ರಾಹಕರು ಶಾಕ್ ಆಗುವಂತೆ ಆಗಿದೆ. ಸ್ಯಾಮ್‌ಸಂಗ್‌ ಕಂಪನಿಯ ಗ್ಯಾಲಕ್ಸಿ M ಹಾಗೂ ಗ್ಯಾಲಕ್ಸಿ F ಸರಣಿಯ Galaxy M36 ಮತ್ತು Galaxy F36 ಫೋನ್‌ ಮಾಡೆಲ್‌ಗಳ ಬೆಲೆಯಲ್ಲಿ ಹೆಚ್ಚಳ ಆಗಿದೆ. ಹಾಗಾದರೆ ಸ್ಯಾಮ್‌ಸಂಗ್‌ ಕಂಪನಿಯ ಯಾವ ಸ್ಮಾರ್ಟ್‌ಫೋನ್‌ಗಳು ಏರಿಕೆ ಕಂಡಿವೆ? ಹೊಸ ಪ್ರೈಸ್‌ಟ್ಯಾಗ್‌ ಎಷ್ಟು ಎಂಬ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಟ್ರಿಪಲ್‌ ಕ್ಯಾಮೆರಾ ಇರುವ Google Pixel 10 ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ!

Samsung ಕಂಪನಿಯ ಈ ಫೋನ್‌ಗಳ ಬೆಲೆಯಲ್ಲಿ ಏರಿಕೆ

ಇದೇ ಮೇ 1 2026 ರಿಂದ ಹೊಸ ಬೆಲೆ ಜಾರಿಗೆ ಬರುವುದರೊಂದಿಗೆ ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಹಲವಾರು ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಈ ಬೆಲೆ ಏರಿಕೆ ಸಂಸ್ಥೆಯ ಗ್ಯಾಲಕ್ಸಿ M ಹಾಗೂ ಗ್ಯಾಲಕ್ಸಿ F ಮತ್ತು ಎಂಟ್ರಿ ಲೆವೆಲ್‌ ಮಾದರಿಯ 5G ಫೋನ್‌ಗಳ ಆಯ್ದ ಮಾಡೆಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಮೊಬೈಲ್‌ಗಳ ಬೆಲೆಯಲ್ಲಿ 1,000 ರೂ.ಗಳ ಏರಿಕೆ ಕಂಡುಬಂದಿದೆ.

Samsung

ಹೊಸ ಬೆಲೆಗಳ ಮಾಹಿತಿ

ಸ್ಯಾಮಸಂಗ್‌ ಗ್ಯಾಲಕ್ಸಿ M36 ಮೊಬೈಲ್‌ನ 6GB + 128GB ವೇರಿಯಂಟ್‌ ಹಳೆಯ ದರ 20,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 21,999 ರೂ.ಗಳು ಆಗಿದೆ. ಹಾಗೆಯೇ 8GB + 256GB ವೇರಿಯಂಟ್‌ ಹಳೆಯ ದರವು 26,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 27,999 ರೂ.ಗಳಿಗೆ ಲಭ್ಯ. ಸ್ಯಾಮಸಂಗ್‌ ಗ್ಯಾಲಕ್ಸಿ F36 ಮೊಬೈಲ್‌ನ 6GB + 128GB ವೇರಿಯಂಟ್‌ ಹಳೆಯ ದರ 20,999 ರೂ.ಗಳು ಆಗಿದ್ದು, ಈಗ ಬೆಲೆ ಏರಿಕೆಯಿಂದಾಗಿ 21,999 ರೂ.ಗಳು ಸಿಗಲಿದೆ. ಹಾಗೆಯೇ 8GB + 256GB ವೇರಿಯಂಟ್‌ ಹಳೆಯ ದರವು 26,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 27,999 ರೂ.ಗಳಿಗೆ ಲಭ್ಯ.

ಇನ್ನು ಸ್ಯಾಮಸಂಗ್‌ ಗ್ಯಾಲಕ್ಸಿ M17 5G ಮೊಬೈಲ್‌ನ 4GB + 128GB ವೇರಿಯಂಟ್‌ ಹಳೆಯ ದರ 15,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 16,999 ರೂ.ಗಳು ಆಗಿದೆ. ಹಾಗೆಯೇ 8GB + 128GB ವೇರಿಯಂಟ್‌ ಹಳೆಯ ದರವು 19,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 20,999 ರೂ.ಗಳಿಗೆ ಲಭ್ಯ. ಅದೇ ರೀತಿ ಸ್ಯಾಮಸಂಗ್‌ ಗ್ಯಾಲಕ್ಸಿ F70e 5G ಫೋನ್‌ 4GB + 128GB ವೇರಿಯಂಟ್‌ ಹಳೆಯ ದರವು 14,499 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 15,499 ರೂ.ಗಳಿಗೆ ಲಭ್ಯ. ಸ್ಯಾಮಸಂಗ್‌ ಗ್ಯಾಲಕ್ಸಿ M06 5G ಫೋನಿನ 4GB + 64GB ವೇರಿಯಂಟ್‌ ಹಳೆಯ ದರವು 11,499 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 12,499 ರೂ.ಗಳಿಗೆ ಸಿಗುತ್ತದೆ.

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile