Flipkart Sasa Lele Sale: ಐಫೋನ್‌ 17 ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯ

HIGHLIGHTS

ಮೇ 9 ರಿಂದ ಫ್ಲಿಪ್‌ಕಾರ್ಟ್‌ Sasa Lele ಸೇಲ್‌ ಶುರು

ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯರಿಗೆ ಮೇ 8 ರಂದು ಸೇಲ್‌ ಲೈವ್‌ ಆಗಲಿದೆ

ಈ ಮಾರಾಟದಲ್ಲಿ ಐಫೋನ್ 17 ಬೊಂಬಾಟ್‌ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ

Flipkart Sasa Lele Sale: ಐಫೋನ್‌ 17 ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯ

ಜನಪ್ರಿಯ ಇ ಕಾಮರ್ಸ್‌ ತಾಣ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ಇದೀಗ Flipkart Summer (Sasa Lele) Sale ಘೋಷಿಸಿದೆ. ಈ ಮಾರಾಟದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಅದರಲ್ಲಿಯೂ ಮುಖ್ಯವಾಗಿ ಆಪಲ್‌ ಸಂಸ್ಥೆಯ ಐಫೋನ್‌ 17 (iPhone 17) ಬೊಂಬಾಟ್‌ ಡಿಸ್ಕೌಂಟ್‌ ದರದಲ್ಲಿ ಲಭ್ಯವಾಗಲಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಆಪಲ್‌ ಸಂಸ್ಥೆಯ ಈ ಮೊಬೈಲ್‌ A19 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ LTPO ಪ್ಯಾನೆಲ್‌ ಜೊತೆಗೆ ಆಲ್ವೇಸ್ ಆನ್ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಸಮ್ಮರ್ ಸೇಲ್ಸ್‌ ದಿನಾಂಕ ಹಾಗೂ ಐಫೋನ್‌ 17 ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Samsung ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ!

Flipkart Summer (Sasa Lele) Sale ದಿನಾಂಕದ ಮಾಹಿತಿ

ಫ್ಲಿಪ್‌ಕಾರ್ಟ್‌ ಘೋಷಿಸಿರುವ ಈ ಸಮ್ಮರ್ ಸೇಲ್ ಮಾರಾಟವು ಇದೇ ಮೇ 9 ರಂದು ಪ್ರಾರಂಭ ಆಗಲಿದೆ. ಆದರೆ ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯರಿಗೆ ಮೇ 8 ರಂದು ಮಾರಾಟ ತೆರೆಯುತ್ತದೆ. ಈ ಮಾರಾಟದಲ್ಲಿ ಐಫೋನ್‌ 17 ಮೊಬೈಲ್‌ ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳೆದಿದೆ. ಈ ವಿಶೇಷ ಸೇಲ್‌ನಲ್ಲಿ ಈ ಮೊಬೈಲ್‌ನ 256GB ಸ್ಟೋರೇಜ್‌ ವೇರಿಯಂಟ್‌ ಅನ್ನು 71,900 ರೂ.ಗಳಿಗೆ ಖರೀದಿಸುವ ಚಾನ್ಸ್‌ ಲಭ್ಯವಾಗುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್‌ ಬ್ಲ್ಯಾಕ್‌, ಪಿಂಕ್, ಮಿಸ್ಟ್‌ ಬ್ಲೂ, ಲ್ಯಾವೆಂಡರಾ, ಸಾಗಾ ಹಾಗೂ ವೈಟ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Flipkart

ಐಫೋನ್‌ 17 ಫೋನಿನ ಫೀಚರ್ಸ್‌

ಐಫೋನ್‌ 17 ಮೊಬೈಲ್‌ ಸಂಸ್ಥೆಯ A19 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು ಇದು ಆಪಲ್‌ನ ಇಂಟೆಲಿಜೆನ್ಸ್ ಫೀಚರ್ಸ್‌ಗಳ ಸಂಪೂರ್ಣ ಸೂಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಫೋನ್ 6.3 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಅನ್ನು ಪಡೆದಿದ್ದು, 3,000 nits ಬ್ರೈಟ್ನೆಸ್‌ ಜೊತೆಗೆ 120Hz ಪ್ರೊಮೋಷನ್ ಹೊಂದಿದೆ. ಫೋಟೋಗ್ರಫಿಗಾಗಿ ಈ ಫೋನ್ 48MP ವೈಡ್ ಆಂಗಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ ದ್ವಿತೀಯ ಕ್ಯಾಮೆರಾ ಸಹ 48MP ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 18MP ಕ್ಯಾಮೆರಾ ರಚನೆ ಪಡೆದುಕೊಂಡಿದೆ.

ಈ ಫೋನ್‌ 256GB ಸ್ಟೋರೇಜ್‌ ಹಾಗೂ 512GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ವೈ-ಫೈ 7, ಬ್ಲೂಟೂತ್ 6, ಮತ್ತು ಯುಎಸ್‌ಬಿ-ಸಿ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಆಪಲ್ ಇಂಟೆಲಿಜೆನ್ಸ್, ಆಕ್ಷನ್ ಬಟನ್, ಡೈನಾಮಿಕ್ ಐಲ್ಯಾಂಡ್ ಹಾಗೂ ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಸೌಲಭ್ಯ ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile