Infinix Note 50s 5G+'s first sale
ಭಾರತದಲ್ಲಿ ಕಳೆದ ವಾರ ಬಿಡುಗಡೆಯಾದ Infinix Note 50s 5G+ ಇಂದು ಅಂದ್ರೆ 24ನೇ ಏಪ್ರಿಲ್ 2025 ರಂದು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮೊದಲ ಮಾರಾಟಕ್ಕೆ ಬರಲು ಸಜ್ಜಾಗಿದೆ. ಈ ಇನ್ಫಿನಿಕ್ಸ್ ಸ್ಮಾರ್ಟ್ಫೋನ್ ಇಂದಿನ ಮಾರಾಟದಲ್ಲಿ ಹೊಂದಿರುವ ಆಫರ್ಗಳೇನು ಮತ್ತು ಈ ಸ್ಮಾರ್ಟ್ಫೋನ್ ಖರೀದಿಸಲು ಪರಿಗಣಿಸಬೇಕಿರುವ ಇಂಟ್ರೆಸ್ಟಿಂಗ್ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು. Infinix Note 50s 5G+ ಸ್ಮಾರ್ಟ್ಫೋನ್ 3D ಕರ್ವ್ ಡಿಸ್ಪ್ಲೇಯೊಂದಿಗೆ 64MP ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಹತ್ತಾರು ಫೀಚರ್ಗಳನ್ನು ಸುಮಾರು 15,000 ರೂಗಳೊಳಗೆ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: Best Portable AC: ಹೆಚ್ಚುತ್ತಿರುವ ಬಿಸಿಲ ಬೇಗೆಯಲ್ಲಿ ಕಾಶ್ಮೀರದಂತೆ ತಂಪಾಗಿಸುವ ಟಾಪ್ 5 ಪೋರ್ಟಬಲ್ ಏರ್ ಕೂಲರ್ಗಳು!
ಮೊದಲಿಗೆ ಈ Infinix Note 50s 5G+ ಸ್ಮಾರ್ಟ್ಫೋನ್ ತನ್ನ ಮೊದಲ ಮಾರಾಟವನ್ನು ಇಂದು ಅಂದ್ರೆ 24ನೇ ಏಪ್ರಿಲ್ 2025 ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್ಕಾರ್ಟ್ ಮತ್ತು ಇನ್ಫಿನಿಕ್ಸ್ ಇಂಡಿಯಾ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. Infinix Note 50s 5G+ ಸ್ಮಾರ್ಟ್ಫೋನ್ ಒಟ್ಟು ಮೂರು Marine Drift Blue, Burgundy Red ಮತ್ತು Titanium Grey ಎಂಬ 3 ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
Infinix Note 50s 5G+ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 15,999 ರಿಂದ ಪ್ರಾರಂಭವಾದರೆ ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ 17,999 ರೂಗಳಾಗಿವೆ. ಆದರೆ ಆಸಕ್ತ ಬಳಕೆದಾರರು ಇದನ್ನು ICICI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಹೆಚ್ಚುವರಿಯ ಲಿಮಿಟೆಡ್ ಸಮಯದ ಡಿಸ್ಕೌಂಟ್ ಸಹ ಪಡೆಯಬಹುದು. ಈ ಮೂಲಕ ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಕೇವಲ 14,999 ರೂಗಳಿಗೆ ಖರೀದಿಸಬಹುದು.
Infinix Note 50s 5G+ ಸ್ಮಾರ್ಟ್ಫೋನ್ 6.78 ಇಂಚಿನ ಪೂರ್ಣ HD+ 3D ಬಾಗಿದ AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರ ಹೊಂದಿದೆ. ಹ್ಯಾಂಡ್‌ಸೆಟ್ ಸ್ಮಾರ್ಟ್‌ಫೋನ್ MediaTek Dimensity 7300 Ultimate ಚಿಪ್‌ಸೆಟ್ ಜೋಡಿಸಲ್ಪಟ್ಟಿದೆ. ಇದು ಆಂಡ್ರಾಯ್ಡ್ 15 ಆಧಾರಿತ ತಮ್ಮದೇಯಾದ XOS 15 ನೊಂದಿಗೆ ಬರುತ್ತದೆ. Infinix Note 50s 5G+ಸ್ಮಾರ್ಟ್ಫೋನ್ 5500mAh ಬ್ಯಾಟರಿಯನ್ನು ಪ್ಯಾಕ್ ಮಾಡಿದ್ದು ಇದು 45W ಫಾಸ್ಟ್‌ಚಾರ್ಜ್ 3.0 ಗೆ ಬೆಂಬಲವನ್ನು ಹೊಂದಿದೆ.
Also Read: Tips And Trick: ನಿಮ್ಮ ಸ್ಮಾರ್ಟ್ ಫೋನ್ ಸ್ಲೋ ಅಥವಾ ಹ್ಯಾಂಗ್ ಆಗ್ತಾ ಇದ್ರೆ ಈ ಸೆಟ್ಟಿಂಗ್ ಬದಲಾಯಿಸಿಕೊಳ್ಳಿ ಸಾಕು!
Infinix Note 50s 5G+ಸ್ಮಾರ್ಟ್ಫೋನ್ 64MP ಮೆಗಾಪಿಕ್ಸೆಲ್ ಸೋನಿ IMX682 ಪ್ರೈಮರಿ ಬ್ಯಾಕ್ ಕ್ಯಾಮೆರಾ ಹೊಂದಿದ್ದು 30fps ಅಲ್ಲಿ 4K ವೀಡಿಯೊಗಳನ್ನು ರೆಕಾರ್ಡಿಂಗ್‌ಗೆ ಬೆಂಬಲಿಸುತ್ತದೆ. ಇದರ ಮುಂಭಾಗದಲ್ಲಿ ಕ್ಯಾಮೆರಾ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 13MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದು ಡ್ಯುಯಲ್ ವೀಡಿಯೊ ಕ್ಯಾಪ್ಚರ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ವಿಶೇಷವಾಗಿ AI ಪರಿಕರಗಳು ಮತ್ತು ಫೋಲಾಕ್ಸ್ AI ಅಸಿಸ್ಟಂಟ್, AI ವಾಲ್‌ಪೇಪರ್ ಜನರೇಟರ್, AIGC ಮೋಡ್ ಮತ್ತು AI ಎರೇಸರ್‌ನಂತಹ ಫೀಚರ್ಗಳನ್ನು ಹೊಂದಿದೆ.