5G ಟೆಕ್ನಾಲಜಿಯ 5000mAh ಬ್ಯಾಟರಿ ಮತ್ತು 48MP ಕ್ಯಾಮೆರಾದ ಈ ಫೋನ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳು

5G ಟೆಕ್ನಾಲಜಿಯ 5000mAh ಬ್ಯಾಟರಿ ಮತ್ತು 48MP ಕ್ಯಾಮೆರಾದ ಈ ಫೋನ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳು
HIGHLIGHTS

OPPO A74 ರ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳ ಬೆಲೆ 17,990 ರೂಗಳಾಗಿವೆ.

ಈ ಹೊಸ OPPO A74 5G ಸ್ಮಾರ್ಟ್‌ಫೋನ್ 6.5 ಇಂಚಿನ FHD+ ಡಿಸ್ಪ್ಲೇ ಹೊಂದಿದೆ.

OPPO A74 5G ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 18w ವ್ಯಾಟ್ ವೇಗದ ಚಾರ್ಜಿಂಗ್ ಪಡೆಯುತ್ತದೆ.

ಒಪ್ಪೊದ ಇತ್ತೀಚಿನ 5G ಸ್ಮಾರ್ಟ್‌ಫೋನ್ OPPO A74 ಅಮೆಜಾನ್‌ನಲ್ಲಿ ಡೀಲ್ ಆಫ್ ದಿ ಡೇ ಆಫರ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದು ಅಮೆಜಾನ್‌ನ ಒಂದು ದಿನದ ಮಾರಾಟವಾಗಿದೆ. 16 ಮೇ 2021 ರ ರಾತ್ರಿ 12 ಗಂಟೆಯವರೆಗೆ ಮಾರಾಟ ಮುಂದುವರಿಯುತ್ತದೆ. ಮಾರಾಟದಲ್ಲಿ OPPO A74 5G ಸ್ಮಾರ್ಟ್‌ಫೋನ್‌ನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳನ್ನು ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಈ ಸಮಯದಲ್ಲಿ OPPO A74 5G ಸ್ಮಾರ್ಟ್‌ಫೋನ್ ಅಗ್ಗವಾಗಿ ಖರೀದಿಸಲು ಅವಕಾಶವಿದೆ. 

OPPO A74 5G ಬೆಲೆ ಮತ್ತು ಕೊಡುಗೆಗಳು

OPPO A74 ರ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಗಳ ಬೆಲೆ 17,990 ರೂಗಳಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಕ್ರೆಡಿಟ್ ಕಾರ್ಡ್‌ನೊಂದಿಗೆ 2000 ರೂಗಳ. ರಿಯಾಯಿತಿಯಲ್ಲಿ ಫೋನ್ ಖರೀದಿಸಬಹುದು. ಅಲ್ಲದೆ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಯಲ್ಲಿ ಫೋನ್ ಖರೀದಿಸುವ ಆಯ್ಕೆಯನ್ನು ನೀಡಲಾಗುತ್ತಿದೆ. 847 ರೂಗಳ ಆರಂಭಿಕ ಇಎಂಐ ಆಯ್ಕೆಯಲ್ಲಿ ಫೋನ್ ಖರೀದಿಸಬಹುದು. ಫೋನ್ ನೇರಳೆ ಬಣ್ಣದ ಆಯ್ಕೆಯಲ್ಲಿ ಬರಲಿದೆ.

OPPO A74 5G ಯ ವಿಶೇಷಣಗಳು

ಈ ಹೊಸ OPPO A74 5G ಸ್ಮಾರ್ಟ್‌ಫೋನ್ 6.5 ಇಂಚಿನ FHD+ ಡಿಸ್ಪ್ಲೇ ಹೊಂದಿದೆ.ಇದ ರೆಸಲ್ಯೂಶನ್ 1080 x 2400 ಪಿಕ್ಸೆಲ್‌ಗಳು. ಪ್ರೊಸೆಸರ್ ಆಗಿ ಸ್ಮಾರ್ಟ್ಫೋನ್ನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 5G ಪ್ರೊಸೆಸರ್ ಅನ್ನು ಬೆಂಬಲಿಸಲಾಗಿದೆ. ಫೋನ್ ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಪವರ್‌ಬ್ಯಾಪ್‌ಗಾಗಿ ಫೋನ್‌ಗೆ 5000mAh ಶಕ್ತಿಯುತ ಬ್ಯಾಟರಿ ಸಿಗುತ್ತದೆ. ಇದು 18w ವ್ಯಾಟ್ ವೇಗದ ಚಾರ್ಜಿಂಗ್ಗೆ ಬೆಂಬಲವನ್ನು ಪಡೆಯುತ್ತದೆ. 

ಈ ಅದ್ದೂರಿಯ OPPO A74 5G ಡ್ಯುಯಲ್ ಸಿಮ್ (ನ್ಯಾನೋ) ನೊಂದಿಗೆ ಬರಲಿದೆ. ಫೋಟೋಗ್ರಾಫಿಗಾಗಿ ಈ OPPO A74 5G ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಪ್ರಾಥಮಿಕ ಕ್ಯಾಮರ್ 48MP ಆಗಿರುತ್ತದೆ. ಇದಲ್ಲದೆ 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಬೆಂಬಲಿಸಲಾಗುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾದ ಬೆಂಬಲ ಇರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo