108MP ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿಯ Honor X9b 5G ಬೆಲೆ ಕಡಿತ! ನಂಬಲಾಗದ ಬೆಲೆಗೆ Powerful ಸ್ಮಾರ್ಟ್ಫೋನ್ ಲಭ್ಯ!

108MP ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿಯ Honor X9b 5G ಬೆಲೆ ಕಡಿತ! ನಂಬಲಾಗದ ಬೆಲೆಗೆ Powerful ಸ್ಮಾರ್ಟ್ಫೋನ್ ಲಭ್ಯ!
HIGHLIGHTS

ಭಾರತದಲ್ಲಿ ಹಾನರ್ (Honor) ಕಂಪನಿ ತನ್ನ ಲೇಟೆಸ್ಟ್ Honor X9b 5G ಅನ್ನು ಇದೆ ಫೆಬ್ರವರಿ 2024 ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ.

ಈ ಬಾರಿ ಅಮೆಜಾನ್ ಈ ಹಾಟೆಸ್ಟ್ Honor X9b 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

ಈ Honor X9b 5G ಸ್ಮಾರ್ಟ್ಫೋನ್ ಅನ್ನು ಕೇವಲ 18,999 ರೂಗಳಿಂದ ಶುರುವಾಗುತ್ತದೆ.

ಭಾರತದಲ್ಲಿ ಹಾನರ್ (Honor) ಕಂಪನಿ ತನ್ನ ಲೇಟೆಸ್ಟ್ Honor X9b 5G ಅನ್ನು ಇದೆ ಫೆಬ್ರವರಿ 2024 ರಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಇದರ ಬಿಲ್ಡ್ ಮತ್ತು ಡಿಸೈನ್ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿತು. ಯಾಕೆಂದರೆ ಇದರ ಡಿಸ್ಪ್ಲೇ ಸಿಕಾಪಟ್ಟೆ ಸ್ಟ್ರಾಂಗ್ ಮತ್ತು ಎಷ್ಟೇ ಮೇಲಿಂದ ಬಿದ್ರು ಏನು ಆಗಲ್ಲ ಇದರೊಂದಿಗೆ ಆಕ್ರೋಟ್ ಸಹ ಚೆಚ್ಚಿ ಬಿಸಾಕುವ ಲೈವ್ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡಿತ್ತು ಇಂತಹ ಬಲಿಷ್ಠ ಸ್ಮಾರ್ಟ್ರ್ಫೋನ್ ಈಗ ತನ್ನ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಕಂಡಿದೆ. ಇದನ್ನು ಆಸಕ್ತರು ಅಮೆಜಾನ್ ಮೂಲಕ ಖರೀದಿಸಬಹುದು. ಯಾಕೆಂದರೆ ಈ ಬಾರಿ ಅಮೆಜಾನ್ ಈ ಹಾಟೆಸ್ಟ್ Honor X9b 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

Honor X9b 5G ಸ್ಮಾರ್ಟ್ಫೋನ್ ಹೊಸ ಬೆಲೆ ಮತ್ತು ಆಫರ್‌ಗಳು

ಪ್ರಸ್ತುತ ಈ ಸ್ಮಾರ್ಟ್ಫೋನ್ ಅನ್ನು ನೀವು ಅಮೆಜಾನ್ ಮೂಲಕ ಸುಮಾರು 25,999 ರೂಗಳಿಗೆ ಕಾಣಬಹುದು ಆದರೆ ಅಮೆಜಾನ್ ಇದರ ಮೇಲೆ ಬ್ಯಾಂಕ್ ಆಫರ್ ನೀಡುವುದರೊಂದಿಗೆ ಬರೋಬ್ಬರಿ 2000 ರೂಗಳ ತ್ವರಿತ ಡಿಸ್ಕೌಂಟ್ ನೀಡುತ್ತಿದ್ದು ಇದರೊಂದಿಗೆ ಪ್ರಸ್ತುತ 1000 ರೂಗಳ ಬೆಲೆ ಕಡಿತದ ಆಫರ್ ನೀಡುತ್ತಿದೆ.

Also Read: Samsung Galaxy F15 5G ಮತ್ತೆ ಹೊಸ ವೇರಿಯೆಂಟ್‌ನೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

ಅಲ್ಲದೆ ಅಮೆಜಾನ್ ಇದರೊಂದಿಗೆ ಸುಮಾರು 4000 ರೂಗಳವರೆಗೆ ಹೆಚ್ಚುವರಿ ವಿನಿಮಯ ಬೋನಸ್ (Exchange Bonus) ಸಹ ಲಭ್ಯವಿದೆ. ಅಷ್ಟಯಲ್ಲದೆ ಆಸಕ್ತರು ಕೇವಲ 3,833 ರೂಪಾಯಿಗಳ ಮಾಸಿಕ EMI ನಲ್ಲಿ ಸುಮಾರು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ NO Cost EMI ಸೌಲಭ್ಯವನ್ನು ಸಹ ನೀಡುತ್ತಿದೆ. ಈ ಮೂಲಕ ಈ Honor X9b 5G ಸ್ಮಾರ್ಟ್ಫೋನ್ ಅನ್ನು ಕೆಲವ 18,999 ರೂಗಳಿಂದ ಶುರುವಾಗುತ್ತದೆ.

Honor X9b 5g got mind blowing price cut
Honor X9b 5g got mind blowing price cut

ಹಾನರ್ X9b 5G ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳು

ಈ ಹೊಸ Honor X9b 5G ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತಾನಾಡುವುದಾದರೆ ಫೋನ್ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ AMOLED ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಕಂಪನಿ ಇದರಲ್ಲಿ ಹೆಚ್ಚು ಬಾಳಿಕೆ ಮತ್ತು ಸ್ಥಿರತೆಯನ್ನು ಒದಗಿಸುವ ಹಾನರ್ ಅಲ್ಟ್ರಾ-ಬೌನ್ಸ್ ಆಂಟಿ-ಡ್ರಾಪ್ ಡಿಸ್ಪ್ಲೇಯನ್ನು ನೀಡಿದೆ. ಈ Honor X9b 5G ಸ್ಮಾರ್ಟ್ಫೋನ್ ಹಿಂಭಾಗವು ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಿದ್ದು 108MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತೊಂದು 5MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದ್ದು ನಿಮಗೆ ಡಿಸೆಂಟ್ ಇಮೇಜ್ ಮತ್ತು ವಿಡಿಯೋಗಳನ್ನು ಪಡೆಯಲು ಸಹಕರಿಸುತ್ತದೆ. ಇದರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನಿಮಗೆ 16MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.

Honor X9b 5g got mind blowing price cut
Honor X9b 5g got mind blowing price cut

ಇದರ ಕ್ರಮವಾಗಿ ಸ್ಮಾರ್ಟ್ಫೋನ್ ಈ ಡೀಲ್ ಮತ್ತು ಆಫರ್ ಅನ್ನು ಕೆಲವ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದಲ್ಲಿ ನೀಡುತ್ತಿದ್ದು ಇದರ ಸ್ಟೋರೇಜ್ ಅನ್ನು ಸುಮಾರು 16GB ವರ್ಚುಯಲ್ ಸ್ಟೋರೇಜ್ ಅನ್ನು ವಿಸ್ತರಿಸಬಹುದು. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ಓಎಸ್ 7.2 ಸುಧಾರಿತ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. HONOR X9b ಆಕ್ಟಾ ಕೋರ್ Qualcomm Snapdragon 6 Gen 1 ಪ್ರೊಸೆಸರ್ ಹೊಂದಿದೆ. ಕೊನೆಯದಾಗಿ ಫೋನ್ 5800mAh ಬ್ಯಾಟರಿ 35W ಫಾಸ್ಟ್‌ ಚಾರ್ಜಿಂಗ್‌ ಬೆಂಬಲದೊಂದಿಗೆ ಬರುತ್ತದೆ. ಇಲ್ಲಿ ಮತ್ತೊಂದು ವಿಶೇಷ ಅಂದ್ರೆ ಬಾಕ್ಸ್‌ನೊಂದಿಗೆ ಯಾವುದೇ ಚಾರ್ಜರ್ ಇರೋದಿಲ್ಲ ಆದರೆ ಪರಿಚಯಾತ್ಮಕ ಕೊಡುಗೆಯಲ್ಲಿ ಉಚಿತ ಚಾರ್ಜರ್ ಲಭ್ಯವಿದೆ ಈ ಡೀಲ್ ಒಳಗೆ ಲಭ್ಯವಾಗಲಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo