ಇಂದಿನಿಂದ HMD Vibe 2 5G ಮೊಬೈಲ್ ಮಾರಾಟ ಪ್ರಾರಂಭ! ಅಗ್ಗದ ಬೆಲೆಯಲ್ಲಿ ಲಭ್ಯ
ಇಂದು (ಮೇ 26 ರಂದು) ಹೆಚ್‌ಎಮ್‌ಡಿ ವೈಬ್ 2 ಫೋನ್ ಸೇಲ್ ಪ್ರಾರಂಭ
ಹೆಚ್‌ಎಮ್‌ಡಿಯ ಈ ಮೊಬೈಲ್ 6,000mAh ಬ್ಯಾಟರಿ ಸಾಮರ್ಥ್ಯ ಒಳಗೊಂಡಿದೆ
ಹೆಚ್‌ಎಮ್‌ಡಿಯ ಈ ಫೋನ್ ಆಕ್ಟಾ ಕೋರ್ ಯುನಿಸಾಕ್ ಪ್ರೊಸೆಸರ್ ಬಲ ಹೊಂದಿದೆ
HMD ಮೊಬೈಲ್ ಸಂಸ್ಥೆಯು ಇತ್ತೀಚಿಗೆ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ HMD Vibe 2 5G ಸ್ಮಾರ್ಟ್‌ಫೋನಿನ ಫಸ್ಟ್ ಸೇಲ್ ಇಂದು (ಮೇ 26 ರಂದು) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಪ್ರಾರಂಭವಾಗಲಿದೆ. ಈ ಅಗ್ಗದ ಬೆಲೆಯ ಮೊಬೈಲ್ ಆಕ್ಟಾ ಕೋರ್ ಯುನಿಸಾಕ್ ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಪ್ರಮುಖ ಹೈಲೈಟ್ ಎನಿಸಿದೆ. ಇನ್ನು ಈ ಫೋನ್ ಕಾಸ್ಮಿಕ್ ಲ್ಯಾವೆಂಡರ್, ನಾರ್ಡಿಕ್ ಬ್ಲೂ ಮತ್ತು ಪೀಚ್ ಪಿಂಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತದೆ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಹೆಚ್‌ಎಮ್‌ಡಿ ವೈಬ್ 2 5G ಮೊಬೈಲ್ ಸೇಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Oppo K14 5G ಬೆಲೆಯಲ್ಲಿ ಭಾರೀ ಇಳಿಕೆ! 50MP ಕ್ಯಾಮೆರಾ, 7000mAh ಬ್ಯಾಟರಿ ಸಪೋರ್ಟ್ ಇದೆ
ಇಂದು HMD Vibe 2 5G ಫೋನ್ ಫಸ್ಟ್ ಸೇಲ್
ಹೊಸ ಹೆಚ್‌ಎಮ್‌ಡಿ ವೈಬ್ 2 5G ಮೊಬೈಲ್ ಅಗ್ಗದ ಬೆಲೆಯ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಮೇ 26 ರಂದು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮಾರಾಟ ಶುರು ಮಾಡಲಿದೆ. ಈ ಮೊಬೈಲ್‌ನ ಆರಂಭಿಕ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆ 10,999 ರೂ.ಗಳು ಆಗಿದೆ. ಹಾಗೆಯೇ 4GB RAM + 128GB ವೇರಿಯಂಟ್ ಬೆಲೆ 11,999 ರೂ.ಗಳು ಆಗಿದೆ. ಲಭ್ಯ ಇರುವ ಬ್ಯಾಂಕ್ ಆಫರ್ ಪಡೆದರೇ, ಇನ್ನಷ್ಟು ರಿಯಾಯಿತಿ ದರದಲ್ಲಿ ಫೋನ್ ಖರೀದಿಸಬಹುದು. ಇನ್ನು ಈ ಮೊಬೈಲ್ ಕಾಸ್ಮಿಕ್ ಲ್ಯಾವೆಂಡರ್, ನಾರ್ಡಿಕ್ ಬ್ಲೂ ಮತ್ತು ಪೀಚ್ ಪಿಂಕ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಹೆಚ್‌ಎಮ್‌ಡಿ ವೈಬ್ 2 5G ಫೀಚರ್ಸ್ ಮಾಹಿತಿ
ಹೆಚ್‌ಎಮ್‌ಡಿ ವೈಬ್ 2 5G ಫೋನ್ 6.7 ಇಂಚಿನ HD+ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಇದರ ಸ್ಕ್ರೀನ್ 720×1,600 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಈ ಮೊಬೈಲ್ ಆಕ್ಟಾ ಕೋರ್ ಯುನಿಸಾಕ್ ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM + 64GB ಹಾಗೂ 512GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.
ಹೆಚ್‌ಎಮ್‌ಡಿ ವೈಬ್ 2 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಆಗಿದ್ದು, ಹಾಗೆಯೇ ಇದರ ಸೆಕೆಂಡರಿ ಬೇಸಿಕ್ ಸೆನ್ಸಾರ್ ಸೌಲಭ್ಯದಲ್ಲಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 18W ಚಾರ್ಜಿಂಗ್ ಹೊಂದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile