ನಿಮ್ಮ ದಿನ ಬಳಕೆಗೆ ಸುಮಾರು 15,000 ರೂಗಳಿಗಿಂತ ಕಡಿಮೆ ಬೆಲೆಗೆ ಬರುವ ಜಬರ್ದಸ್ತ್ 5G Smartphones ಪಟ್ಟಿ ಇಲ್ಲಿದೆ
ಲೇಟೆಸ್ಟ್ ಮತ್ತು ಫೀಚರ್ ಲೋಡೆಡ್ 5G smartphones ಸುಮಾರು 15,000 ರೂಗಳೊಳಗೆ ಲಭ್ಯವಿದೆ.
ನಿಮಗಾಗಿ ಖರೀದಿಸಲು ಅಥವಾ ಗಿಫ್ಟ್ ನೀಡಲು ಯೋಚಯಿಸುತ್ತಿದ್ದರೆ ಈ ಪಟ್ಟಿಯನೊಮ್ಮೆ ಪರಿಶೀಲಿಸಬಹುದು.
ಪ್ರಸ್ತುತ ನೀಡುವ CMF, Vivo, Samsung, Realme ಮತ್ತು Infinix ಬ್ರಾಂಡ್ ಫೋನ್ಗಳನ್ನು ಕೈಗೆಟಕುವ ಬೆಲೆಗೆ ಖರೀದಿಸಬಹುದು.
Best 5G Smartphones: ಭಾರತದಲ್ಲಿ ನಿಮಗೊಂದು ಲೇಟೆಸ್ಟ್ ಮತ್ತು ಫುಲ್ ಫೀಚರ್ ಲೋಡೆಡ್ 5G ಸ್ಮಾರ್ಟ್ಫೋನ್ ಸುಮಾರು 15,000 ರೂಗಳೊಳಗೆ ನಿಮಗಾಗಿ ಖರೀದಿಸಲು ಅಥವಾ ಯಾರಿಗಾದರೂ ಗಿಫ್ಟ್ ನೀಡಲು ಯೋಚಯಿಸುತ್ತಿದ್ದರೆ ಈ ಪಟ್ಟಿಯನೊಮ್ಮೆ ಪರಿಶೀಲಿಸಬಹುದು. ಇಲ್ಲಿ ನಿಮಗೆ ಪ್ರತ್ಯೇಕವಾಗಿ ಅಮೆಜಾನ್ ಮೂಲಕ CMF, Vivo, Samsung, Realme ಮತ್ತು Infinix ಬ್ರಾಂಡ್ ಸ್ಮಾರ್ಟ್ಫೋನ್ಗಳನ್ನು ಕೈಗೆಟಕುವ ಬೆಲೆಗೆ ಖರೀದಿಸಬಹುದು. ಅಲ್ಲದೆ ಈ 5G ಸ್ಮಾರ್ಟ್ಫೋನ್ಗಳ ಮೇಲೆ ಬ್ಯಾಂಕ್ ಆಫರ್ ಜೊತೆಗೆ ಲಿಮಿಟೆಡ್ ಸಮಯಕ್ಕೆ ಅತ್ಯುತ್ತಮ ಡಿಸ್ಕೌಂಟ್ಗಳೊಂದಿಗೆ ಬರುತ್ತವೆ.
Samsung Galaxy M35 5G ಆಫರ್ ಬೆಲೆ ಮತ್ತು ಹೈಲೈಟ್ ಫೀಚರ್
ಪ್ರಸ್ತುತ ಅಮೆಜಾನ್ನಲ್ಲಿ ಸ್ಯಾಮ್ಸಂಗ್ ತನ್ನ ದೊಡ್ಡ ವೇಪರ್ ಕೂಲಿಂಗ್ ಚೇಂಬರ್ನೊಂದಿಗೆ ಬರುವ 5G ಫೋನ್ ಅಮೆಜಾನ್ನಲ್ಲಿ ಸುಮಾರು ರೂ. 13,999 ಆರಂಭಿಕ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಅಲ್ಲದೆ ಈ Samsung Galaxy M35 5G ಹೆಚ್ಚುವರಿಯಾಗಿ ರೂ. 500 ಕೂಪನ್ ರಿಯಾಯಿತಿಯನ್ನು ಪಡೆಯುತ್ತಿದೆ. ಈ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ.
CMF Phone 1 ಆಫರ್ ಬೆಲೆ ಮತ್ತು ಹೈಲೈಟ್ ಫೀಚರ್
ಗ್ರಾಹಕರಿಗೆ ಈ ಫೋನ್ ಅನ್ನು ಅಮೆಜಾನ್ ನಿಂದ 14,794 ರೂ.ಗಳಿಗೆ ಖರೀದಿಸುವ ಅವಕಾಶ ನೀಡಲಾಗುತ್ತಿದೆ. ಈ ಸಾಧನವು 50MP ಡ್ಯುಯಲ್ ಕ್ಯಾಮೆರಾ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5000mAh ಬ್ಯಾಟರಿಯನ್ನು ಸಹ ಹೊಂದಿದೆ.
Realme Narzo 70 Turbo ಆಫರ್ ಬೆಲೆ ಮತ್ತು ಹೈಲೈಟ್ ಫೀಚರ್
ಈ Realme ಸ್ಮಾರ್ಟ್ಫೋನ್ MediaTek Dimensity 7300 Energy 5G ಪ್ರೊಸೆಸರ್ನಿಂದ ಚಾಲಿತವಾಗಿದ್ದು, ಮೋಟೋಸ್ಪೋರ್ಟ್ಸ್ನಿಂದ ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಈ ಫೋನ್ ಅಮೆಜಾನ್ನಲ್ಲಿ 13,499 ರೂ.ಗಳಿಗೆ ಪಟ್ಟಿ ಮಾಡಲಾಗಿದ್ದು, ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ.
Vivo T4x ಆಫರ್ ಬೆಲೆ ಮತ್ತು ಹೈಲೈಟ್ ಫೀಚರ್
ಈ ಚೀನೀ ಟೆಕ್ ಬ್ರ್ಯಾಂಡ್ ವಿವೋದ ಈ ಸ್ಮಾರ್ಟ್ಫೋನ್ ದೊಡ್ಡ 6500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಡೈಮೆನ್ಸಿಟಿ 7300 ಪ್ರೊಸೆಸರ್ನಿಂದ ಚಾಲಿತವಾಗಿದೆ. 8GB RAM ಹೊಂದಿರುವ ಈ ಸಾಧನದ ಮೂಲ ರೂಪಾಂತರವನ್ನು ಅಮೆಜಾನ್ನಿಂದ 14,999 ರೂ.ಗಳಿಗೆ ಖರೀದಿಸಬಹುದು.
Infinix Note 50s ಆಫರ್ ಬೆಲೆ ಮತ್ತು ಹೈಲೈಟ್ ಫೀಚರ್
ಈ ಇನ್ಫಿನಿಕ್ಸ್ ಫೋನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ 15,999 ರೂ.ಗಳಿಗೆ ಪಟ್ಟಿ ಮಾಡಲಾಗಿದೆ ಮತ್ತು ಬ್ಯಾಂಕ್ ಆಫರ್ಗಳೊಂದಿಗೆ ಇದರ ಬೆಲೆ 15 ಸಾವಿರ ರೂ.ಗಳ ಹತ್ತಿರ ಇರುತ್ತದೆ. ಈ ಫೋನ್ 144Hz ರಿಫ್ರೆಶ್ ದರದೊಂದಿಗೆ ಬಾಗಿದ AMOLED ಡಿಸ್ಪ್ಲೇ ಮತ್ತು 5500mAh ಬ್ಯಾಟರಿಯನ್ನು ಹೊಂದಿದೆ.