ಇಂದಿನಿಂದ Google Pixel 10a ಮೊಬೈಲ್ ಖರೀದಿಗೆ ಲಭ್ಯ! ಬೆಲೆ ಹಾಗೂ ಫೀಚರ್ಸ್ ಮಾಹಿತಿ ನೋಡಿ
ಇಂದಿನಿಂದ ಗೂಗಲ್ ಪಿಕ್ಸಲ್ 10a ಮೊಬೈಲ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ
ಗೂಗಲ್ ಪಿಕ್ಸಲ್ 10a ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ
ಗೂಗಲ್ ಪಿಕ್ಸಲ್ 10a ಲ್ಯಾವೆಂಡರ್, ಅಬ್ಸಿಡಿಯನ್, ಫಾಗ್ ಮತ್ತು ಬೆರ್ರಿ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ
ಸರ್ಚ್ ಇಂಜಿನ್ ದೈತ್ಯ Google ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ Google Pixel 10a ಮೊಬೈಲ್ ಈಗಾಗಲೇ ಗ್ರಾಹಕರಿಗೆ ಆಕರ್ಷಕ ಎನಿಸಿದೆ. ಇನ್ನು ಈ ಮೊಬೈಲ್‌ನ ಮಾರಾಟ ಇಂದಿನಿಂದ (ಮಾರ್ಚ್ 6 ರಿಂದ) ಪ್ರಾರಂಭ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ Tensor G4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು ಈ ಮೂಲಕ ಫ್ಲ್ಯಾಗ್‌ಶಿಪ್ ರೇಂಜ್‌ನ ವೈಶಿಷ್ಟ್ಯಗಳನ್ನು ಮಿಡ್‌ರೇಂಜ್ ವಿಭಾಗಕ್ಕೆ ತರುತ್ತಿದೆ. ಇನ್ನು ಈ ಮೊಬೈಲ್ 5,100mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 48MP ಮುಖ್ಯ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ Pixel 10a ಮೊಬೈಲ್ ಏಳು ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಸಪೋರ್ಟ್ ನೀಡಲಿದೆ. ಹಾಗಾದರೆ ಗೂಗಲ್ ಪಿಕ್ಸಲ್ 10a ಸ್ಮಾರ್ಟ್‌ಫೋನ್ ಸೇಲ್, ಬೆಲೆ, ಫೀಚರ್ಸ್ ಹಾಗೂ ಆಫರ್ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಮುಂದೆ ತಿಳಿಯೋಣ.
SurveyAlso Read : Amazon Electronics Premier league 2026: ಈ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್
Google Pixel 10a ಮೊಬೈಲ್ ಮಾರಾಟ ಮಾಹಿತಿ
Google ಸಂಸ್ಥೆಯ ಗೂಗಲ್ ಪಿಕ್ಸಲ್ 10a ಮೊಬೈಲ್ ಇಂದಿನಿಂದ (ಮಾರ್ಚ್ 6 ರಿಂದ) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನ ಮೂಲಕ ಮಾರಾಟ ಪ್ರಾರಂಭಿಸಿದೆ. ಇನ್ನು ಭಾರತದಲ್ಲಿ ಈ ಫೋನಿನ 8GB RAM + 256GB ವೇರಿಯಂಟ್ ಬೆಲೆಯು 49,999 ರೂಗಳು ಆಗಿದೆ. ಇನ್ನು ಈ ಫೋನ್ ಲ್ಯಾವೆಂಡರ್, ಅಬ್ಸಿಡಿಯನ್, ಫಾಗ್ ಮತ್ತು ಬೆರ್ರಿ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು.

ಗೂಗಲ್ ಪಿಕ್ಸಲ್ 10a ಫೋನಿನ ಫೀಚರ್ಸ್
ಗೂಗಲ್ ಪಿಕ್ಸಲ್ 10a ಮೊಬೈಲ್ 6.3 ಇಂಚಿನ Actua ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಇದು 3,000 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಜೊತಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಅನ್ನು ಹೊಂದಿದೆ. ಇನ್ನು ಈ ಮೊಬೈಲ್ Tensor G4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM + 256GB ಆಂತರೀಕ ಸ್ಟೋರೇಜ್ ಸಪೋರ್ಟ್ ಅನ್ನು ಒಳಗೊಂಡಿದೆ. ಅಲ್ಲದೇ ಈ ದೈತ್ಯ ಫೋನ್ ಆಂಡ್ರಾಯ್ಡ್ 16 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಏಳು ವರ್ಷಗಳ OS ಮತ್ತು ಭದ್ರತಾ ಅಪ್‌ಡೇಟ್ ಬೆಂಬಲ ನೀಡುತ್ತದೆ.
ಗೂಗಲ್ ಪಿಕ್ಸಲ್ 10a ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 48MP ಸೆನ್ಸಾರ್ ಆಗಿದ್ದು ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾವೈಡ್ ಲೆನ್ಸ್ ಪಡೆದುಕೊಂಡಿದೆ. ಇದಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 5,100mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 30W ವೈರ್ಡ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಅನ್ನು ಹೊಂದಿದೆ. ಒಮ್ಮೆ ಪೂರ್ಣ ಚಾರ್ಜ್‌ನ ಮಾಡಿದರೆ 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile