Flipkart ತನ್ನ ಬಹುನಿರೀಕ್ಷಿತ ‘Big Billion Days 2026’ ಸೇಲ್ ಅನ್ನು ಇದೇ ಅಕ್ಟೋಬರ್ 9 ರಿಂದ ಪ್ರಾರಂಭಿಸಲು ತಯಾರಾಗಿದೆ. ಆದಾಗ್ಯೂ, ಈ ಇ-ಕಾಮರ್ಸ್ ಸಂಸ್ಥೆಯು ಈಗಾಗಲೇ ‘ಅರ್ಲಿ ಬರ್ಡ್ ಡೀಲ್’ಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರು ಮುಖ್ಯ ಸೇಲ್ ಪ್ರಾರಂಭವಾಗುವ ಮೊದಲೇ ಕೆಲವು ಡಿವೈಸ್‌ಗಳನ್ನು ಖರೀದಿಸುವ ಅವಕಾಶವನ್ನು ಲಭ್ಯವಾಗಿದೆ. ಈ ಮಾರಾಟದಲ್ಲಿ Poco C85x 5G ಮೊಬೈಲ್ ಆಕರ್ಷಕ ಕೊಡುಗೆ ಪಡೆದಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಮೂಲಕ ಖರೀದಿದಾರರು ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಬಹುದು. ಹಾಗಾದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿಗೆ ಲಭ್ಯವಿರುವ ಕೊಡುಗೆಯ ಬಗ್ಗೆ ಮುಂದೆ ತಿಳಿಯೋಣ.
Also Read : ಭಾರತದಲ್ಲಿ Google Fitbit Air ಫಿಟ್‌ನೆಸ್ ಬ್ಯಾಂಡ್ ಬಿಡುಗಡೆ; ಬಿಗ್ ಬ್ಯಾಟರಿ ಬ್ಯಾಕ್‌ಅಪ್
ಆಕರ್ಷಕ ಫೀಚರ್ಸ್ ಒಳಗೊಂಡ ಪೊಕೊ C85x 5G ಸ್ಮಾರ್ಟ್‌ಫೋನ್ 4GB + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 20,999 ರೂ.ಗಳ ಬೆಲೆಯನ್ನು ಹೊಂದಿದೆ. ಆದರೆ ಈ ವಿಶೇಷ ಸೇಲ್‌ನಲ್ಲಿ ಈ ಫೋನ್ ಅನ್ನು ಗ್ರಾಹಕರು 14,999 ರೂ.ಗಳ ಬೆಲೆಗೆ ಖರೀದಿಸಬಹುದು. ಅಲ್ಲದೇ ಲಭ್ಯವಿರುವ ಇತರೆ ಕೊಡುಗೆಗಳ ಮೂಲಕ 14,249 ರೂ.ಗಳಿಗೂ ಖರೀದಿಸುವ ಅವಕಾಶ ಸಹ ಇದೆ. ಅಂದಹಾಗೆ ಈ ಫೋನ್ ಬ್ಲ್ಯಾಕ್, ಗೋಲ್ಡ್ ಹಾಗೂ ಗ್ರೀನ್ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಪೊಕೊ C85x 5G ಮೊಬೈಲ್ 6.9 ಇಂಚಿನ HD+ ಅಡಾಪ್ಟಿವ್‌ಸಿಂಕ್ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 720×1,600 ಪಿಕ್ಸಲ್ ರೆಸಲ್ಯೂಶನನ್ನು ಪಡೆದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದ್ದು 800 nits ಬ್ರೈಟ್ನೆಸ್ ಸೌಲಭ್ಯ ನೀಡಲಾಗಿದೆ. ಈ ಫೋನ್ Unisoc T8300 ಚಿಪ್‌ಸೆಟ್ ಪ್ರೊಸೆಸರ್ ಪವರ್ ಜೊತೆಗೆ ಇದು ಆಂಡ್ರಾಯ್ಡ್ 16 ಜೊತೆಗೆ HyperOS 3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲದ ಮೂಲಕ ಬಾಹ್ದಯ ಸ್ಟೋರೇಜ್ ಅನ್ನು 2TB ವರೆಗೆ ವಿಸ್ತರಿಸುವ ಅವಕಾಶ ಇದೆ.
ಪೊಕೊ C85x 5G ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 32MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು ಸೆಕೆಂಡರಿ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್ 6,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 15W ವೈರ್ಡ್ ಚಾರ್ಜಿಂಗ್ ವ್ಯವಸ್ಥೆ ಪಡೆದಿದೆ. ಇದರೊಂದಿಗೆ 7.5W ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲ ಸಹ ಹೊಂದಿದೆ. ಅಲ್ಲದೇ ಇದು 5G, 4G LTE, Wi-Fi 5, ಬ್ಲೂಟೂತ್ 5.4, GPS, 3.5mm ಆಡಿಯೊ ಜ್ಯಾಕ್ ಹಾಗೂ USB ಟೈಪ್-C ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.