Flipkart Big Billion Days Sale 2026 offer massive Price discount on Motorola G37 Power
Flipkart ತನ್ನ ಬಹುನಿರೀಕ್ಷಿತ ‘Big Billion Days 2026’ (BBD) ಸೇಲ್ ಅನ್ನು ಅಕ್ಟೋಬರ್ 9 ರಿಂದ ಪ್ರಾರಂಭಿಸಲು ಸಜ್ಜಾಗಿದೆ. ಆದಾಗ್ಯೂ, ಈ ಇ-ಕಾಮರ್ಸ್ ಸಂಸ್ಥೆಯು ಈಗಾಗಲೇ ‘ಅರ್ಲಿ ಬರ್ಡ್ ಡೀಲ್’ಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರು ಮುಖ್ಯ ಸೇಲ್ ಪ್ರಾರಂಭವಾಗುವ ಮೊದಲೇ ಕೆಲವು ಡಿವೈಸ್‌ಗಳನ್ನು ಖರೀದಿಸುವ ಅವಕಾಶವನ್ನು ಲಭ್ಯವಾಗಿದೆ. ಈ ಮಾರಾಟದಲ್ಲಿ Motorola g37 5G ಮೊಬೈಲ್ ಬೊಂಬಾಟ್ ಕೊಡುಗೆ ಪಡೆದಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಮೂಲಕ ಖರೀದಿದಾರರು ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಬಹುದು. ಹಾಗಾದರೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಕೊಡುಗೆಯ ಬಗ್ಗೆ ಮುಂದೆ ತಿಳಿಯೋಣ.
Also Read : Airtel ಟೆಲಿಕಾಂನ 1199 ರೂ.ಗಳ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ಜೊತೆಗೆ ಭರ್ಜರಿ ಡೇಟಾ ಸೌಲಭ್ಯ
ಆಕರ್ಷಕ ಫೀಚರ್ಸ್ ಒಳಗೊಂಡ ಮೊಟೊರೊಲಾ g37 5G ಸ್ಮಾರ್ಟ್‌ಫೋನ್ 4GB + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 26,499 ರೂ.ಗಳ ಬೆಲೆಯನ್ನು ಹೊಂದಿದೆ. ಆದರೆ ಈ ವಿಶೇಷ ಸೇಲ್‌ನಲ್ಲಿ ಈ ಫೋನ್ ಅನ್ನು ಗ್ರಾಹಕರು 19,000 ರೂ.ಗಳ ಬೆಲೆಗೆ ಖರೀದಿಸಬಹುದು. ಅಲ್ಲದೇ ಲಭ್ಯವಿರುವ ಇತರೆ ಕೊಡುಗೆಗಳ ಮೂಲಕ 18,999 ರೂ.ಗಳಿಗೂ ಖರೀದಿಸುವ ಅವಕಾಶ ಸಹ ಇದೆ.
ಮೊಟೊರೊಲಾ G37 ಪವರ್ ಮೊಬೈಲ್ 6.7 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದ್ದು ಇದರ ಸ್ಕ್ರೀನ್ 1604 x 720 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಜೊತೆಗೆ 1050 nits ಬ್ರೈಟ್‌ನೆಸ್ ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಒಳಗೊಂಡಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 4GB RAM + 64GB ಹಾಗೂ 8GB + 128GB ಸ್ಟೋರೇಜ್ ಆಯ್ಕೆ ಪಡೆದಿದೆ. ಇನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದು.
ಮೊಟೊರೊಲಾ G37 ಪವರ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಆಗಿದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 30W ಟರ್ಬೋಚಾರ್ಜಿಂಗ್ ಹಾಗೂ 6W ರಿವರ್ಸ್ ಚಾರ್ಜಿಂಗ್ ಬೆಂಬಲ ಹೊಂದಿದೆ.