google launched new screenless ai fitness tracker Google Fitbit Air in us market
ಗೂಗಲ್‌ನ ಬಹುನಿರೀಕ್ಷಿತ ಪರದೆಯಿಲ್ಲದ ಫಿಟ್‌ನೆಸ್ ಬ್ಯಾಂಡ್ ಫಿಟ್‌ಬಿಟ್ ಏರ್ (Google Fitbit Air) ಇಂದು (ಸೆ. 30 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಫಿಟ್‌ಬಿಟ್ ಸಂಸ್ಥೆ ಇದುವರೆಗೆ ಟಚ್‌ಸ್ಕ್ರೀನ್ ಹೊಂದಿರುವ ಫಿಟ್‌ನೆಸ್ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೂಲಕ ಬಳಕೆದಾರರ ಗಮನ ಸೆಳೆದಿತ್ತು. ಆದರೆ, ಹೊಸ ಫಿಟ್‌ಬಿಟ್ ಏರ್ ಡಿವೈಸ್‌ನಲ್ಲಿ ಯಾವುದೇ ಡಿಸ್‌ಪ್ಲೇ ನೀಡದೆ ವಿಭಿನ್ನ ವಿನ್ಯಾಸವನ್ನು ಪರಿಚಯಿಸಲಾಗಿದೆ. ಸ್ಕ್ರೀನ್ ಇಲ್ಲದ ಈ ವಿನ್ಯಾಸದಿಂದ ನೋಟಿಫಿಕೇಶನ್‌ಗಳು ಅಥವಾ ಇತರ ಡಿಜಿಟಲ್ ಅಡಚಣೆಗಳಿಂದ ದೂರವಿದ್ದು, ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಮೇಲೆ ಹೆಚ್ಚು ಗಮನ ಹರಿಸಲು ಬಯಸುವವರಿಗೆ ಇದು ಉಪಯುಕ್ತ ಎನಿಸುವಂತಿದೆ. ಈ ಡಿವೈಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Jio ಫೋನ್ ಬಳಕೆದಾರರಿಗೆ ಭರ್ಜರಿ ಆಫರ್: 1,499 ರೂ.ಗಳಿಗೆ ಫೋನ್ ಹಾಗೂ 6 ತಿಂಗಳ ರೀಚಾರ್ಜ್ ಫ್ರೀ
ಗೂಗಲ್ ಸಂಸ್ಥೆಯು ಗೂಗಲ್ ಫಿಟ್‌ಬಿಟ್ ಏರ್ ಡಿವೈಸ್ ಅನ್ನು 13,999 ರೂ.ಗಳ ಬೆಲೆಗೆ ಬಿಡುಗಡೆ ಮಾಡಿದೆ. ಈ ಡಿವೈಸ್ ಇದೇ ಅಕ್ಟೋಬರ್ 2 ರಿಂದ ಗೂಗಲ್ ಸ್ಟೋರ್, ಫ್ಲಿಪ್‌ಕಾರ್ಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್, ವಿಜಯಾ ಸೇಲ್ಸ್ ಮತ್ತು ದೇಶಾದ್ಯಂತದ ಇತರ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಆಯ್ದ ಬ್ಯಾಂಕ್‌ಗಳಿಂದ ಆಕರ್ಷಕ ಇಎಮ್‌ಐ ಆಯ್ಕೆಗಳು ಲಭ್ಯ ಇರುತ್ತವೆ.
ಗೂಗಲ್ ಫಿಟ್‌ಬಿಟ್ ಏರ್ ಡಿವೈಸ್ ಸಾಮಾನ್ಯ ಫಿಟ್‌ನೆಸ್ ಬ್ಯಾಂಡ್‌ನಂತೆ ಕಾಣುತ್ತದೆ. ಆದರೆ ಇದರ ಪ್ರಮುಖ ವಿಶೇಷತೆ ಎಂದರೆ ಇದರಲ್ಲಿ ಯಾವುದೇ ಡಿಸ್‌ಪ್ಲೇ ಅಥವಾ ಟಚ್‌ಸ್ಕ್ರೀನ್ ಇಲ್ಲ. ಸ್ಕ್ರೀನ್ ಅಡಚಣೆಯಿಲ್ಲದೆ ಆರೋಗ್ಯ ಮತ್ತು ಫಿಟ್‌ನೆಸ್ ಮಾಹಿತಿಯನ್ನು ಟ್ರ್ಯಾಕ್ ಮಾಡುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಡಿವೈಸ್‌ನಲ್ಲಿ ನಿರಂತರ ಹೃದಯ ಬಡಿತ ಮೇಲ್ವಿಚಾರಣೆ, ವಿಶ್ರಾಂತಿ ಹೃದಯ ಬಡಿತ, ಹೃದಯ ಬಡಿತದ ವ್ಯತ್ಯಾಸ (HRV), ಅನಿಯಮಿತ ಹೃದಯ ಬಡಿತದ (AFib) ಸೂಚನೆಗಳು, ನಿದ್ರೆಯ ವಿವರವಾದ ವಿಶ್ಲೇಷಣೆ ಮತ್ತು ರಕ್ತದಲ್ಲಿನ ಆಮ್ಲಜನಕದ (SpO2) ಮಟ್ಟದ ಮೇಲ್ವಿಚಾರಣೆ ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಆಯ್ಕೆಗಳಿವೆ.
ಬಳಕೆದಾರರ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಮಾಹಿತಿಯನ್ನು Google Health Coach ಮೂಲಕ ಪರಿಶೀಲಿಸಬಹುದು. ಸಂಗ್ರಹವಾಗುವ ಆರೋಗ್ಯ ಡೇಟಾವನ್ನು ಆಧರಿಸಿ ಹೆಚ್ಚು ವೈಯಕ್ತಿಕಗೊಳಿಸಿದ ಸಲಹೆಗಳನ್ನು ಪಡೆಯಲು ಇದು ನೆರವಾಗುತ್ತದೆ. ವ್ಯಾಯಾಮ ಅಥವಾ ಚಟುವಟಿಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ನ ಕ್ಯಾಮೆರಾವನ್ನು ಬಳಸಿಕೊಂಡು ಜಿಮ್ ಉಪಕರಣಗಳು ಮತ್ತು ವ್ಯಾಯಾಮ ವಿಧಾನಗಳನ್ನು ಗುರುತಿಸುವ ಆಯ್ಕೆಯೂ ಇದೆ.
ಬ್ಯಾಟರಿ ವಿಚಾರದಲ್ಲೂಈ ಡಿವೈಸ್‌ಆಕರ್ಷಕ ಎನಿಸುತ್ತದೆ. ಒಂದೇ ಬಾರಿ ಚಾರ್ಜ್ ಮಾಡಿದರೆ ಏಳು ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವೂ ಇದ್ದು, ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಒಂದು ದಿನದಷ್ಟು ಬ್ಯಾಟರಿ ಬ್ಯಾಕಪ್ ಪಡೆಯಬಹುದು ಎಂದು ತಿಳಿಸಲಾಗಿದೆ.