Spotify and Anthropics Claude down user report unable to use App authenticate error message pops up And codeSpotify and Anthropics Claude down user report unable to use App authenticate error message pops up And code
ಜನಪ್ರಿಯ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Spotify ಸೇವೆಯಲ್ಲಿ ವ್ಯಾಪಕ ವ್ಯತ್ಯಯ ಉಂಟಾಗಿರುವಂತೆ ಕಂಡುಬಂದಿದೆ. ಹಲವು ಪ್ರದೇಶಗಳ ಬಳಕೆದಾರರು Spotify ಅನ್ನು ಪ್ರವೇಶಿಸಲು ಹಾಗೂ ಹಾಡುಗಳನ್ನು ಸ್ಟ್ರೀಮ್ ಮಾಡಲು ಸಮಸ್ಯೆ ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ಹಾಗೆಯೇ ಭಾರತ ಮತ್ತು ಅಮೇರಿಕಾ ಸೇರಿದಂತೆ ವಿಶ್ವದ ವಿವಿಧ ಪ್ರದೇಶಗಳಲ್ಲಿ ಆಂಥ್ರೋಪಿಕ್-ಇನ್ ಎಐ ಅಸಿಸ್ಟಾಂಟ್ Claude ಸೇವೆಯಲ್ಲಿ ತೊಂದರೆ ಇದೆ ಎಂದು ವರದಿಗಳಾಗಿವೆ.
Also Read : Vi ಟೆಲಿಕಾಂನ ಈ ಅಗ್ಗದ ಪ್ಲಾನ್‌ನಲ್ಲಿ ಅನಿಯಮಿತ ಡೇಟಾ ಜೊತೆಗೆ ಆಕರ್ಷಿಕ ವ್ಯಾಲಿಡಿಟಿ
ಸೇವೆಯಲ್ಲಿನ ಸಮಸ್ಯೆ ಕುರಿತು DownDetector ತಾಣದಲ್ಲಿ ಸೆಪ್ಟೆಂಬರ್ 29 ರ ಸಂಜೆ ದೂರುಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಸಾಮಾನ್ಯವಾಗಿ ದಾಖಲಾಗುತ್ತಿದ್ದ ವರದಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇಂದು ರಾತ್ರಿ ಸುಮಾರು 8:04 ಗಂಟೆಯ ವೇಳೆಗೆ DownDetector ನಲ್ಲಿ Spotifyಗೆ ಸಂಬಂಧಿಸಿದ 19,351 ವರದಿಗಳು ದಾಖಲಾಗಿದ್ದವು. ಈ ಸಂಖ್ಯೆ ಸಾಮಾನ್ಯ ಬೇಸ್‌ಲೈನ್ ಆಗಿರುವ 11 ವರದಿಗಳಿಗಿಂತ ಭಾರೀ ಹೆಚ್ಚಾಗಿದೆ.
DownDetectorನ ಔಟ್ಟೇಜ್ ಗ್ರಾಫ್ ಪ್ರಕಾರ, ಇದಕ್ಕೂ ಮುನ್ನ ಸುಮಾರು 24 ಗಂಟೆಗಳ ಕಾಲ Spotifyಗೆ ಸಂಬಂಧಿಸಿದ ವರದಿಗಳು ಸಾಮಾನ್ಯ ಮಟ್ಟದಲ್ಲೇ ಇದ್ದವು. ಆದರೆ ರಾತ್ರಿ ವೇಳೆಗೆ ವರದಿಗಳ ಸಂಖ್ಯೆ ಏಕಾಏಕಿ ತೀವ್ರವಾಗಿ ಏರಿಕೆಯಾಗಿದೆ. ಈ ವ್ಯತ್ಯಯದಿಂದ Spotify ಬಳಕೆದಾರರಿಗೆ ಲಾಗಿನ್, ಆ್ಯಪ್ ಪ್ರವೇಶ ಅಥವಾ ಮ್ಯೂಸಿಕ್ ಸ್ಟ್ರೀಮಿಂಗ್ ಸೇರಿದಂತೆ ವಿವಿಧ ಸೇವೆಗಳಲ್ಲಿ ಸಮಸ್ಯೆ ಎದುರಾಗಿರುವ ಸಾಧ್ಯತೆಯಿದೆ. ಸೇವೆಯಲ್ಲಿನ ವ್ಯತ್ಯಯದ ನಿಖರ ಕಾರಣದ ಕುರಿತು ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.