Spotify ಮತ್ತು Claude ಡೌನ್? ಸೇವೆಯಲ್ಲಿ ವ್ಯಾಪಕ ವ್ಯತ್ಯಯ; ಬಳಕೆದಾರರಿಂದ ದೂರು
ಜನಪ್ರಿಯ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Spotify ಸೇವೆಯಲ್ಲಿ ವ್ಯಾಪಕ ವ್ಯತ್ಯಯ ಉಂಟಾಗಿರುವಂತೆ ಕಂಡುಬಂದಿದೆ. ಹಲವು ಪ್ರದೇಶಗಳ ಬಳಕೆದಾರರು Spotify ಅನ್ನು ಪ್ರವೇಶಿಸಲು ಹಾಗೂ ಹಾಡುಗಳನ್ನು ಸ್ಟ್ರೀಮ್ ಮಾಡಲು ಸಮಸ್ಯೆ ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ಹಾಗೆಯೇ ಭಾರತ ಮತ್ತು ಅಮೇರಿಕಾ ಸೇರಿದಂತೆ ವಿಶ್ವದ ವಿವಿಧ ಪ್ರದೇಶಗಳಲ್ಲಿ ಆಂಥ್ರೋಪಿಕ್-ಇನ್ ಎಐ ಅಸಿಸ್ಟಾಂಟ್ Claude ಸೇವೆಯಲ್ಲಿ ತೊಂದರೆ ಇದೆ ಎಂದು ವರದಿಗಳಾಗಿವೆ.
SurveyAlso Read : Vi ಟೆಲಿಕಾಂನ ಈ ಅಗ್ಗದ ಪ್ಲಾನ್‌ನಲ್ಲಿ ಅನಿಯಮಿತ ಡೇಟಾ ಜೊತೆಗೆ ಆಕರ್ಷಿಕ ವ್ಯಾಲಿಡಿಟಿ
Spotify ಮತ್ತು Claude Down
ಸೇವೆಯಲ್ಲಿನ ಸಮಸ್ಯೆ ಕುರಿತು DownDetector ತಾಣದಲ್ಲಿ ಸೆಪ್ಟೆಂಬರ್ 29 ರ ಸಂಜೆ ದೂರುಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಸಾಮಾನ್ಯವಾಗಿ ದಾಖಲಾಗುತ್ತಿದ್ದ ವರದಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇಂದು ರಾತ್ರಿ ಸುಮಾರು 8:04 ಗಂಟೆಯ ವೇಳೆಗೆ DownDetector ನಲ್ಲಿ Spotifyಗೆ ಸಂಬಂಧಿಸಿದ 19,351 ವರದಿಗಳು ದಾಖಲಾಗಿದ್ದವು. ಈ ಸಂಖ್ಯೆ ಸಾಮಾನ್ಯ ಬೇಸ್‌ಲೈನ್ ಆಗಿರುವ 11 ವರದಿಗಳಿಗಿಂತ ಭಾರೀ ಹೆಚ್ಚಾಗಿದೆ.

DownDetectorನ ಔಟ್ಟೇಜ್ ಗ್ರಾಫ್ ಪ್ರಕಾರ, ಇದಕ್ಕೂ ಮುನ್ನ ಸುಮಾರು 24 ಗಂಟೆಗಳ ಕಾಲ Spotifyಗೆ ಸಂಬಂಧಿಸಿದ ವರದಿಗಳು ಸಾಮಾನ್ಯ ಮಟ್ಟದಲ್ಲೇ ಇದ್ದವು. ಆದರೆ ರಾತ್ರಿ ವೇಳೆಗೆ ವರದಿಗಳ ಸಂಖ್ಯೆ ಏಕಾಏಕಿ ತೀವ್ರವಾಗಿ ಏರಿಕೆಯಾಗಿದೆ. ಈ ವ್ಯತ್ಯಯದಿಂದ Spotify ಬಳಕೆದಾರರಿಗೆ ಲಾಗಿನ್, ಆ್ಯಪ್ ಪ್ರವೇಶ ಅಥವಾ ಮ್ಯೂಸಿಕ್ ಸ್ಟ್ರೀಮಿಂಗ್ ಸೇರಿದಂತೆ ವಿವಿಧ ಸೇವೆಗಳಲ್ಲಿ ಸಮಸ್ಯೆ ಎದುರಾಗಿರುವ ವರದಿಯಾಗಿವೆ. ಸೇವೆಯಲ್ಲಿನ ವ್ಯತ್ಯಯದ ನಿಖರ ಕಾರಣದ ಕುರಿತು ಸದ್ಯಕ್ಕೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಡೌನ್‌ಡಿಟೆಕ್ಟರ್ (DownDetector) ಜಾಗತಿಕ ದತ್ತಾಂಶದ ಪ್ರಕಾರ, Spotifyಗೆ ಸಂಬಂಧಿಸಿದಂತೆ ವರದಿಯಾಗಿರುವ ಒಟ್ಟು ಸಮಸ್ಯೆಗಳಲ್ಲಿ ಸುಮಾರು ಶೇ.59ರಷ್ಟು ದೂರುಗಳು ಆಪ್‌ಗೆ ಸಂಬಂಧಿಸಿವೆ. ಇದರಿಂದ ಸಮಸ್ಯೆ ಎದುರಿಸುತ್ತಿರುವ ಹೆಚ್ಚಿನ ಬಳಕೆದಾರರು Spotifyನ ಮೊಬೈಲ್ ಅಥವಾ ಡೆಸ್ಕ್‌ಟಾಪ್ ಆ್ಯಪ್ ಬಳಸುವಾಗ ತೊಂದರೆ ಅನುಭವಿಸುತ್ತಿರುವುದು ತಿಳಿದುಬರುತ್ತದೆ.
ಇನ್ನು Claude ಡೌನ್ ಆಗಿರುವ ಕುರಿತು DownDetectorನಲ್ಲಿ ಬಳಕೆದಾರರ ದೂರುಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಸೆಪ್ಟೆಂಬರ್ 29ರ ಸಂಜೆ ಸುಮಾರು 7:49 ಗಂಟೆಗೆ 18,335 ವರದಿಗಳು ದಾಖಲಾಗಿದ್ದು, ಸಾಮಾನ್ಯವಾಗಿ ಇದೇ ಅವಧಿಯಲ್ಲಿ ದಾಖಲಾಗುವ ಸುಮಾರು 10 ವರದಿಗಳಿಗಿಂತ ಇದು ಭಾರೀ ಹೆಚ್ಚಾಗಿದೆ. Claude ಬಳಸಲು ಸಾಧ್ಯವಾಗದಿರುವುದು, ಸೇವೆ ಲೋಡ್ ಆಗದಿರುವುದು ಅಥವಾ ಇತರ ತಾಂತ್ರಿಕ ಸಮಸ್ಯೆಗಳನ್ನು ಬಳಕೆದಾರರು ಎದುರಿಸುತ್ತಿರುವ ಸಾಧ್ಯತೆಯಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
