Big Saving Days: ಇವೇಲ್ಲಾ ಭಾರಿ ಡಿಸ್ಕೌಂಟ್ ಜೊತೆಗೆ ಬರುವ Realme, Samsung, iPhone ಮತ್ತು Xiaomi ಸ್ಮಾರ್ಟ್‌ಫೋನ್‌ಗಳು

Big Saving Days: ಇವೇಲ್ಲಾ ಭಾರಿ ಡಿಸ್ಕೌಂಟ್ ಜೊತೆಗೆ ಬರುವ Realme, Samsung, iPhone ಮತ್ತು Xiaomi ಸ್ಮಾರ್ಟ್‌ಫೋನ್‌ಗಳು
HIGHLIGHTS

ಫ್ಲಿಪ್ಕಾರ್ಟ್ Big Saving Days ಸೇಲ್ ಈ ಸಮಯದಲ್ಲಿ ಕಂಪನಿಯು ಸುಮರು 20 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ.

Samsung, Xiaomi, Oppo, Vivo, iPhone ‌ನಂತಹ ಅನೇಕ ಬ್ರಾಂಡ್‌ಗಳ ಫೋನ್‌ಗಳನ್ನು ಕಡಿಮೆ ಬೆಲೆಗೆ ಪಡೆಯಲು ಸುವರ್ಣಾವಕಾಶವಾಗಿದೆ

ಭಾರತದಲ್ಲಿ ಫ್ಲಿಪ್ಕಾರ್ಟ್ Big Saving Days ಸೇಲ್ ನಡೆಸುತ್ತಿದ್ದು ಇದರಲ್ಲಿ ಭಾರಿ ಡಿಸ್ಕೌಂಟ್ ಜೊತೆಗೆ ಬರುವ ಸ್ಯಾಮ್‌ಸಂಗ್, ಐಫೋನ್, ಶವೋಮಿ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದೆ. ಈ ಸೇಲ್ 23ನೇ ಜೂನ್ 2020 ರಿಂದ 27ನೇ ಜೂನ್ 2020 ವರೆಗೆ ನಡೆಯಲಿದೆ. ಎಲ್ಲಾ ಬಳಕೆದಾರರಿಗಾಗಿ ನೇರ ಪ್ರಸಾರವಾಗಿದೆ. ಈ ಸಮಯದಲ್ಲಿ ನೀವು Samsung, Xiaomi, Oppo, Vivo, iPhone ‌ನಂತಹ ಅನೇಕ ಬ್ರಾಂಡ್‌ಗಳ ಫೋನ್‌ಗಳನ್ನು ಕಡಿಮೆ ಬೆಲೆಗೆ ಪಡೆಯಲು ಸುವರ್ಣಾವಕಾಶವಾಗಿದೆ. ಈ ಸಮಯದಲ್ಲಿ ಕಂಪನಿಯು ಸುಮರು 20 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ. ನೀವು HDFC ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಿದರೆ ಅಥವಾ EMI ವಹಿವಾಟು ನಡೆಸಿದರೆ ನಿಮಗೆ 10% ತ್ವರಿತ ರಿಯಾಯಿತಿ ಸಿಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಈ ಸೆಲ್ ಉತ್ತಮ ಆಯ್ಕೆಯಾಗಿದೆ.

Google Pixel 3a

ಈ Google Pixel 3a ಸ್ಮಾರ್ಟ್ಫೋನ್ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಅದರಲ್ಲಿ ನಿಜಕ್ಕೂ ನಂಬಲಾಗದ ಕ್ಯಾಮೆರಾ ಕಾರ್ಯಕ್ಷಮತೆಯೊಂದಿಗೆ 5.6 ಇಂಚಿನ Full HD+ ಅಮೋಲೆಡ್ ಡಿಸ್ಪ್ಲೇ ಮತ್ತು ಕ್ಲೀನ್ ಸಾಫ್ಟ್‌ವೇರ್ ಮತ್ತು ಖಾತರಿಪಡಿಸಿದ ಆಪ್ಡೇಟ್ಗಳ ನಡುವೆ ಬರುತ್ತದೆ. ಫ್ಲಿಪ್ಕಾರ್ಟ್ Big Saving Days ಸೇಲ್ ಅಲ್ಲಿ ಭಾರಿ ಡಿಸ್ಕೌಂಟ್ ಅಂದ್ರೆ 29,999 ರೂಗಳಿಗೆ ನೀಡುತ್ತಿದೆ.

Redmi K20 Pro

ನಿಮಗೊಂದು ಕಿವಿಮಾತು ನಂಬಿದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ Xiaomi Redmi K20 Pro ಸ್ಮಾರ್ಟ್ಫೋನ್ ಖಂಡಿತವಾಗಿಯೂ ಈ ಬೆಲೆ ವಿಭಾಗದಲ್ಲಿ ಲಭ್ಯವಿರುವ ವೇಗವಾದ ಸ್ಮಾರ್ಟ್‌ಫೋನ್ ಆಗಿದೆ. Redmi K20 Pro ಅನ್ನು ಶಕ್ತಗೊಳಿಸುವ ಸ್ನಾಪ್‌ಡ್ರಾಗನ್ 855 ಚಿಪ್ ಪ್ರೊಸೆಸರ್  ಪಬ್‌ಜಿ ಮತ್ತು ಅಸ್ಫಾಲ್ಟ್ 9 ನಂತಹ ಹೈ ಗ್ರಾಫಿಕ್ ತೀವ್ರವಾಗಿ ಆಟಗಳನ್ನು ನಡೆಸುವಲ್ಲಿ ಅದ್ಭುತವಾಗಿದೆ. ಮತ್ತು Xiaomi Redmi K20 Pro ನಿಮ್ಮ ವಿಶಿಷ್ಟ ರೆಡ್‌ಮಿ ಫೋನ್‌ಗಳಲ್ಲಿ ಒಂದಾಗಬವುದು. ಈ ಫ್ಲಿಪ್ಕಾರ್ಟ್ Big Saving Days ಸೇಲ್ ಅಲ್ಲಿ ಭಾರಿ ಡಿಸ್ಕೌಂಟ್ ಅಂದ್ರೆ 24,999 ರೂಗಳಿಗೆ ನೀಡುತ್ತಿದೆ.

Samsung Galaxy S10 Lite

ಈ Galaxy S10 Lite ಸ್ಮಾರ್ಟ್ಫೋನ್ ಉತ್ತಮವಾದ ಆಂಡ್ರಾಯ್ಡ್ ಫೋನ್ ಆಗಿದ್ದು ಇದು ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಜೊತೆಗೆ ಬರುವ  ವಿಶ್ವಾಸಾರ್ಹ ಕ್ಯಾಮೆರಾಗಳು ಮತ್ತು 4500 mAh ಬ್ಯಾಟರಿಯೊಳಗೆ ಪ್ಯಾಕ್ ಮಾಡಲಾಗಿರುವ ಅತ್ಯುತ್ತಮ ಬ್ಯಾಟರಿ ಅವಧಿಯನ್ನು ನೀಡುತ್ತದೆ.
ಇದು 8 GB RAM ಮತ್ತು 128 GB ವಿಸ್ತರಿಸಬಹುದಾದ ಸ್ಟೋರೇಜ್ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಪ್ಲಾಸ್ಟಿಕ್ ಚಾಸಿಸ್ ಅನ್ನು ಒಳಗೊಂಡಿದೆ. ಈ ಫ್ಲಿಪ್ಕಾರ್ಟ್ Big Saving Days ಸೇಲ್ ಅಲ್ಲಿ ಭಾರಿ ಡಿಸ್ಕೌಂಟ್ ಅಂದ್ರೆ 42,999 ರೂಗಳಿಗೆ ನೀಡುತ್ತಿದೆ.

Xiaomi Mi Mix 2

ಟ್ರೈ ಬೆಝಲ್ ಕಡಿಮೆ ಅಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಬರುವ ಫೋನ್ಗಳಲ್ಲಿ ಈ Mi Mix 2 ಸಹ ಒಂದಾಗಿದೆ. ಇದರಲ್ಲಿ ಡ್ಯುಯಲ್ ಗ್ಲಾಸ್ ವಿನ್ಯಾಸವನ್ನು ಪಡೆಯುವಿರಿ ನನ್ನ ಪ್ರಕಾರ ಇದು ನಿಜಕ್ಕೂ ಸಂಪೂರ್ಣವಾಗಿ ಅದ್ಭುತವಾಗಿದೆ. ಈ ಫೋನ್ ಸ್ವಲ್ಪ ದೊಡ್ಡದಾಗಿದ್ದು ನಿಮ್ಮ್ ವೀಕ್ಷಣಾ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಲ್ಲಿ ಕ್ವಾಲ್ಕಾಮ್‌ನ ಅತ್ಯಂತ ಶಕ್ತಿಶಾಲಿ SoC ಯ ಅಸ್ತಿತ್ವವಿದ್ದು ಫೋನಿನ ಸ್ವಾಮ್ಯದ ವೇಗದ ಚಾರ್ಜಿಂಗ್ ತಂತ್ರಜ್ಞಾನವಾದ ಕ್ವಿಕ್ ಚಾರ್ಜ್ 3.0 ಅನ್ನು ಬೆಂಬಲಿಸುತ್ತದೆ. ಫ್ಲಿಪ್ಕಾರ್ಟ್ Big Saving Days ಸೇಲ್ ಅಲ್ಲಿ ಭಾರಿ ಡಿಸ್ಕೌಂಟ್ ಅಂದ್ರೆ 16,999 ರೂಗಳಿಗೆ ನೀಡುತ್ತಿದೆ.

Apple iPhone XS

ಈ Apple iPhone XS ಫೋನ್ 5.8 ಇಂಚಿನ ಡಿಸ್ಪ್ಲೇಯನ್ನು ಅದ್ದೂರಿಯಾಗಿ ಬೆರಗುಗೊಳಿಸುತ್ತದೆ. ಸೂಪರ್ ರೆಟಿನಾ ಡಿಸ್ಪ್ಲೇಗಳು ವೇಗವಾದ ಮತ್ತು ಸುಧಾರಿತ ಡ್ಯುಯಲ್ ಕ್ಯಾಮೆರಾ ಸಿಸ್ಟಮ್ ಹೊಂದಿದೆ. ಇದು ಅದ್ಭುತ ಫೋಟೋ ಮತ್ತು ವಿಡಿಯೋ ವೈಶಿಷ್ಟ್ಯಗಳನ್ನು ನೀಡುತ್ತದೆ.  ಸ್ಮಾರ್ಟ್‌ಫೋನ್‌ನಲ್ಲಿ ಮೊದಲ 7 ನ್ಯಾನೊಮೀಟರ್ ಚಿಪ್ – ಇದರಲ್ಲಿ A12 ಬಯೋನಿಕ್ ಚಿಪ್ -ಜನರೇಶನ್ ನ್ಯೂರಾಲ್ ಎಂಜಿನ್ – ವೇಗವಾಗಿ ಫೇಸ್ ಐಡಿ, ವಿಶಾಲ ಸ್ಟಿರಿಯೊ ಸೌಂಡ್ ಹೊಂದಿದೆ. ಈ ಫ್ಲಿಪ್ಕಾರ್ಟ್ Big Saving Days ಸೇಲ್ ಅಲ್ಲಿ ಭಾರಿ ಡಿಸ್ಕೌಂಟ್ ಅಂದ್ರೆ 59,999 ರೂಗಳಿಗೆ ನೀಡುತ್ತಿದೆ.

Realme X2 Pro

ರಿಯಲ್ ಮೀ ಫೋನ್‌ಗಳು ಸಾಂಪ್ರದಾಯಿಕವಾಗಿ ಉತ್ತಮ ಡಿಸ್ಪ್ಲೇಯನ್ನು ಹೊಂದಿವೆ. ಮತ್ತು ಈ ಫೋನ್ 6.5 ಇಂಚಿನ FHD+ ಅಮೋಲೆಡ್ ಪ್ಯಾನೆಲ್ ಅನ್ನು ಹೊಂದಿದ್ದು 500 ನಿಟ್ಸ್ ನಿರಂತರ ಹೊಳಪು ಮತ್ತು 1000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಡಿಸ್ಪ್ಲೇಯನ್ನು  ತೀಕ್ಷ್ಣವಾಗಿದೆ. ಇದು ಸ್ನಾಪ್‌ಡ್ರಾಗನ್ 730G ಮತ್ತು 30w ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಮತ್ತು ಬಣ್ಣಗಳು ಉತ್ತಮ ಶುದ್ಧತ್ವವನ್ನು ಹೊಂದಿವೆ. ಈ ಫ್ಲಿಪ್ಕಾರ್ಟ್ Big Saving Days ಸೇಲ್ ಅಲ್ಲಿ ಭಾರಿ ಡಿಸ್ಕೌಂಟ್ ಅಂದ್ರೆ 31,999 ರೂಗಳಿಗೆ ನೀಡುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo