Motorola ಕಂಪನಿಯ ಈ ಜನಪ್ರಿಯ ಫೋನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ! ಹೊಸ ಬೆಲೆ ನೋಡಿ
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮೊಟೊರೊಲಾ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಆದರೆ ಇದೀಗ ಮೊಟೊರೊಲಾದ ಕೆಲವು ಜನಪ್ರಿಯ ಮಾಡೆಲ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ ಆಗಿದೆ. ಹೌದು, ಮೊಟೊರೊಲಾ ಕಂಪನಿಯ Motorola Edge 60 Fusion, Motorola G57 Power ಮತ್ತು Motorola G35 ಮೊಬೈಲ್‌ಗಳ ಬೆಲೆಯಲ್ಲಿ ಹೆಚ್ಚಳ ಆಗಿದೆ. ಕಂಪನಿಯ ಹಲವಾರು ಮಾಡೆಲ್‌ಗಳ ವೇರಿಯಂಟ್‌ಗಳ ಬೆಲೆ ಏರಿಕೆಯಾಗಿದೆ ಎಂದು ಟಿಪ್‌ಸ್ಟರ್ ಮಾಹಿತಿಯಿಂದ ತಿಳಿದುಬಂದಿದೆ. ಇನ್ನು ಪರಿಷ್ಕೃತ ಹೊಸ ದರಗಳು ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಬೆಲೆ ಏರಿಕೆ ಕಂಡಿರುವ ಮೊಟೊರೊಲಾ ಮೊಬೈಲ್‌ಗಳ ಹೊಸ ದರ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
SurveyAlso Read : ಭಾರತದಲ್ಲಿ Oppo F33 Pro 5G ಬಿಡುಗಡೆಗೆ ಡೇಟ್ ಕನ್ಫರ್ಮ್! ನಿರೀಕ್ಷಿತ ಫೀಚರ್ಸ್ ನೋಡಿ
Motorola Edge 60 Fusion ಫೋನ್ ಬೆಲೆ ಏರಿಕೆ
ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಈ ಫೋನ್ ಬೆಲೆಯಲ್ಲಿ 2,000 ರೂ.ಗಳ ಹೆಚ್ಚಳ ಆಗಿದೆ. ಈ ಫೋನಿನ 8GB + 128GB ವೇರಿಯಂಟ್ ಹಳೆಯ ಬೆಲೆ 20,999 ರೂ.ಗಳು ಆಗಿದೆ. ಇನ್ನು ಹೊಸ ದರವು 22,999 ರೂ.ಗಳು ಆಗಿದೆ. ಹಾಗೆಯೇ 8GB + 256GB ವೇರಿಯಂಟ್ ಹಳೆಯ ಬೆಲೆ 22,999 ರೂ.ಗಳು ಆಗಿದೆ. ಇನ್ನು ಹೊಸ ದರವು 24,999 ರೂ.ಗಳು ಆಗಿದೆ. ಅದೇ ರೀತಿ 12GB + 256GB ವೇರಿಯಂಟ್ ಹಳೆಯ ಬೆಲೆ 24,999 ರೂ.ಗಳು ಆಗಿದೆ. ಇನ್ನು ಹೊಸ ದರವು 26,999 ರೂ.ಗಳು ಆಗಿದೆ.

ಮೊಟೊರೊಲಾ G57 ಪವರ್ ಮೊಬೈಲ್ ದರ ಏರಿಕೆ
ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಮೊಟೊರೊಲಾ G57 ಪವರ್ ಮೊಬೈಲ್ ಬೆಲೆಯಲ್ಲಿ ಸಹ 1,000 ರೂ. ಗಳ ಏರಿಕೆ ಆಗಿದೆ. ಈ ಫೋನಿನ 8GB + 128GB ವೇರಿಯಂಟ್ ಹಳೆಯ ಬೆಲೆ 14,999 ರೂ.ಗಳು ಆಗಿದೆ. ಇನ್ನು ಹೊಸ ದರವು 15,999 ರೂ.ಗಳು ಆಗಿದೆ.
ಮೊಟೊರೊಲಾ G35 ಮೊಬೈಲ್ ದರ ಏರಿಕೆ
ಬಜೆಟ್ ಬೆಲೆಯ ಮೂಲಕ ಮಾರುಕಟ್ಟೆಯಲ್ಲಿ ಗಮನ ಸೆಳೆದಿರುವ ಮೊಟೊರೊಲಾ G57 ಪವರ್ ಫೋನ್ ಬೆಲೆಯಲ್ಲಿ ಸಹ ಪರಿಷ್ಕೃತ ಆಗಿದೆ. ಈ ಫೋನಿನ 4GB + 128GB ವೇರಿಯಂಟ್ ಹಳೆಯ ಬೆಲೆ 11,999 ರೂ.ಗಳು ಆಗಿದೆ. ಇನ್ನು ಹೊಸ ದರವು 12,499 ರೂ.ಗಳು ಆಗಿದೆ. ಹಾಗೆಯೇ 8GB + 128GB ವೇರಿಯಂಟ್ ಹಳೆಯ ಬೆಲೆ 12,999 ರೂ.ಗಳು ಆಗಿದೆ. ಇನ್ನು ಪರಿಷ್ಕೃತ ಬೆಲೆಯು 13,999 ರೂ.ಗಳು ಆಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile