KGF ಹೊಸ ದಾಖಲೆ: IMDB ಮೋಸ್ಟ್​ ಅನ್ಟಿಸಿಪೇಟಡ್​ ಇಂಡಿಯನ್ ಮೂವೀಸ್ & ಶೋಸ್​​ ಪಟ್ಟಿಯಲ್ಲಿ KGF ಅಗ್ರಸ್ಥಾನ.

HIGHLIGHTS

KGF ಹೆಸರು ಕೇಳ್ತಾ ಇದ್ರೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕಣ್ಮುಂದೆ ಬರ್ತಾರೆ.

KGF ಹೊಸ ದಾಖಲೆ: IMDB ಮೋಸ್ಟ್​ ಅನ್ಟಿಸಿಪೇಟಡ್​ ಇಂಡಿಯನ್ ಮೂವೀಸ್ & ಶೋಸ್​​ ಪಟ್ಟಿಯಲ್ಲಿ KGF ಅಗ್ರಸ್ಥಾನ.

KGF ಹೆಸರು ಕೇಳ್ತಾ ಇದ್ರೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕಣ್ಮುಂದೆ ಬರ್ತಾರೆ. ಹೌದು ಈ ಸಿನಿಮಾದ ಮಾತು ಈಗ ಕರ್ನಾಟಕದಿಂದ ಭಾರತದ ಹೊರಗೂ ಹರಿದಾಡುತ್ತಿದೆ. ಇದಕ್ಕೆ ಕಾರಣರಾದ ನಿರ್ದೇಶಕ ಪ್ರಶಾಂತ್ ನೀಲ್ ತೋರೀರುವ ಕೈಚಳಕವೇ ಅದ್ದೂರಿಯಾಗಿದೆ. ಈ ಚಿತ್ರ ಕನ್ನಡ ಸಿನಿಮಾ ಏನು ಮತ್ತು ಕನ್ನಡಿಗರು ಯಾರಿಗೂ ಕಮ್ಮಿ ಇಲ್ಲ ಎನ್ನುವ ಮಾತು ನಿಲ್ಲಿಸಿದೆ. ಹಾಲಿವುಡ್ ಮತ್ತು ಬಾಲಿವುಡ್ನಂತಹ ದೊಡ್ಡ ದೊಡ್ಡ ಪಾತ್ರಗಳನ್ನು ಪ್ರಶಾಂತ್ ನೀಲ್ ನಿರ್ಮಿಸಿ ದಾಖಲೆ ಮಾಡಿದ್ದಾರೆ. 

Digit.in Survey
✅ Thank you for completing the survey!

ಇದಲ್ಲದೆ ಈಗಾಗಲೇ ಹೇಳಿರುವಂತೆ IMDB ಮೋಸ್ಟ್​ ಅನ್ಟಿಸಿಪೇಟಡ್​ ಇಂಡಿಯನ್ ಮೂವೀಸ್ & ಶೋಸ್​​ ಪಟ್ಟಿಯಲ್ಲಿ KGF ಅಗ್ರಸ್ಥಾನದಲ್ಲಿದೆ. ಈ ಚಿತ್ರ ಮುಂದಿನ ತಿಂಗಳು ಭಾರತದ್ಯಾಂತ 21ನೇ ಡಿಸೆಂಬರ್ 2018 ರಂದು ಭಾರತೀಯ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅದೇ ರೀತಿಯಲ್ಲಿ ಈ ಚಿತ್ರ ಬಾಲಿವುಡ್-ಕಾಲಿವುಡ್ ಸೂಪರ್​ ಸ್ಟಾರ್​ಗಳ ಬಹುನಿರೀಕ್ಷಿತ​ ಚಿತ್ರಗಳಿಗೆ ಪ್ರಬಲ ಪೈಪೋಟಿಯಾಗಿ ಮಾರ್ಪಡಲಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ IMDB ಪಟ್ಟಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಯಶ್​ ಅಭಿನಯದ ಈ KGF ಚಿತ್ರ 44.1% ನಿರೀಕ್ಷೆ ಮೂಡಿಸಿದ್ದರೆ ಬಾಲಿವುಡ್ ಭಷ ಎಂದು ಹೆಸರಾಗಿರುವ ಶಾರುಖ್ ಖಾನ್ ಮತ್ತು ಸೂಪರ್ ಸ್ಟಾರ್ ರಜನಿಯ ಸಿನಿಮಾಗಳ ಅಜಗಜಾಂತರ ದೂರದಲ್ಲಿದೆ. ಮತ್ತೊಂದು ದಾಖಲೆ ಎಂದರೆ ಯುಟ್ಯೂಬ್ನಲ್ಲಿ KGF ಟೀಸರ್ ಕೇವಲ 2 ದಿನಗಳಲ್ಲಿ 7 ಮಿಲಿಯನ್ ವ್ಯೂ ಪಡೆದುಕೊಂಡಿದೆ.

http://oi63.tinypic.com/s62gib.jpg   

ಇಲ್ಲಿ ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರ 12.1% ಗಳಿಸಿದರೆ ರಜನಿಕಾಂತ್​ ಮತ್ತು ಅಕ್ಷಯ್ ಕುಮಾರ್​ ಅಭಿನಯದ 2.0 ಚಿತ್ರ ಕೇವಲ 14.1% ನಷ್ಟು ಮಾತ್ರ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo